AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Breaking News ಬಿಜೆಪಿ ನಾಯಕಿಯರ ಬಗ್ಗೆ ಡಿಎಂಕೆ ನಾಯಕನ ಹೇಳಿಕೆ ವಿವಾದ; ಸ್ಟಾಲಿನ್ ಸುಮ್ಮನಿರುವುದೇಕೆ ಎಂದು ಪ್ರಶ್ನಿಸಿದ ಖುಷ್ಬೂ

 ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್ ಈ  ವಿಷಯದಲ್ಲಿ  ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಯಾಕೆ ಸುಮ್ಮನಿದ್ದಾರೆ?  ಮುಖ್ಯಮಂತ್ರಿ ಈ ವಿಷಯದಲ್ಲಿ ನಮ್ಮ ಪರವಾಗಿ ನಿಲ್ಲಬೇಕು ಎಂದು ನಾನು ಬಯಸುತ್ತೇನೆ

Breaking News ಬಿಜೆಪಿ ನಾಯಕಿಯರ ಬಗ್ಗೆ ಡಿಎಂಕೆ ನಾಯಕನ ಹೇಳಿಕೆ ವಿವಾದ; ಸ್ಟಾಲಿನ್ ಸುಮ್ಮನಿರುವುದೇಕೆ ಎಂದು ಪ್ರಶ್ನಿಸಿದ ಖುಷ್ಬೂ
TV9 Web
| Edited By: |

Updated on:Oct 28, 2022 | 7:42 PM

Share

ಬಿಜೆಪಿ (BJP) ನಾಯಕಿಯರ ಬಗ್ಗೆ ಅವಹೇಳನಕಾರಿ  ಹೇಳಿಕೆ ನೀಡಿದ್ದ  ಡಿಎಂಕೆ (DMK) ನಾಯಕನ ವಿರುದ್ಧ ತಮಿಳುನಾಡಿನಲ್ಲಿ  ಭಾರೀ ಆಕ್ಷೇಪ ವ್ಯಕ್ತವಾಗಿದೆ. ಡಿಎಂಕೆ ನಾಯಕನ ಹೇಳಿಕೆಯನ್ನು ಬಿಜೆಪಿ ಖಂಡಿಸಿದ್ದು, ಡಿಎಂಕೆ ಸಂಸದೆ ತಮ್ಮ ಸಹೋದ್ಯೋಗಿಯ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.  ಡಿಎಂಕೆ ನಾಯಕನ ಹೇಳಿಕೆ ವಿವಾದ ಬಗ್ಗೆ ಎನ್​​ಡಿಟಿವಿ ಜತೆ ಮಾತನಾಡಿದ  ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್ (Khushbu Sundar) ಈ  ವಿಷಯದಲ್ಲಿ  ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಯಾಕೆ ಸುಮ್ಮನಿದ್ದಾರೆ?  ಮುಖ್ಯಮಂತ್ರಿ ಈ ವಿಷಯದಲ್ಲಿ ನಮ್ಮ ಪರವಾಗಿ ನಿಲ್ಲಬೇಕು ಎಂದು ನಾನು ಬಯಸುತ್ತೇನೆ ಎಂದಿದ್ದಾರೆ. ಇದಕ್ಕಿಂತ ಮುನ್ನ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಬಗ್ಗೆ ತಮ್ಮ ಪಕ್ಷದ ವಕ್ತಾರ ಸೈದಾಯಿ ಸಾದಿಕ್ ಮಾಡಿರುವ ಅವಹೇಳನಕಾರಿ ಕಾಮೆಂಟ್‌ಗಳಿಗೆ ಡಿಎಂಕೆ ಸಂಸದೆ ಕನಿಮೋಳಿ ಕ್ಷಮೆಯಾಚಿಸಿದ್ದಾರೆ. ಡಿಎಂಕೆ ನಾಯಕ ಸಾದಿಕ್ ಅವರು ತಮಿಳುನಾಡಿನ ನಟ-ಬಿಜೆಪಿ ನಾಯಕರಾದ ನಮಿತಾ, ಖುಷ್ಬೂ ಸುಂದರ್, ಗೌತಮಿ ಮತ್ತು ಗಾಯತ್ರಿ ರಘುರಾಮ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು.

ಮಹಿಳೆಯರನ್ನು ಅವಮಾನಿಸುವುದು “ಹೊಸ ದ್ರಾವಿಡ ಮಾದರಿ”ಯ ಭಾಗವೇ ಎಂದು ಖುಷ್ಬೂ ಸುಂದರ್ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ಪುರುಷರು ಮಹಿಳೆಯರನ್ನು ನಿಂದಿಸಿದಾಗ, ಅವರು ಬೆಳೆದ ರೀತಿ ಮತ್ತು ಅವರು ಬೆಳೆದ ವಿಷಕಾರಿ ವಾತಾವರಣವನ್ನು ತೋರಿಸುತ್ತದೆ. ಈ ಪುರುಷರು ಮಹಿಳೆಯ ಗರ್ಭವನ್ನು ಅವಮಾನಿಸುತ್ತಾರೆ. ಅಂತಹ ವ್ಯಕ್ತಿಗಳು ತಮ್ಮನ್ನು ಕಲೈಂಜರ್ ಅವರ ಅನುಯಾಯಿಗಳೆಂದು ಕರೆದುಕೊಳ್ಳುತ್ತಾರೆ. ಇದು ಹೊಸ ದ್ರಾವಿಡ ಮಾದರಿಯು ಸಿಎಂ ಸ್ಟಾಲಿನ್ ಆಳ್ವಿಕೆಯಲ್ಲಿದೆಯೇ ಎಂದು  ಖುಷ್ಬೂ ತಮ್ಮ ಟ್ವೀಟ್ ನಲ್ಲಿ ಕನಿಮೊಳಿ ಅವರನ್ನೂ ಟ್ಯಾಗ್ ಮಾಡಿದ್ದಾರೆ

ಟ್ವೀಟ್ ಗಮನಿಸಿದ  ಕನಿಮೊಳಿ ತಕ್ಷಣವೇ ಕ್ಷಮೆಯಾಚಿಸಿದ್ದಾರೆ.  ಅವರು ಹೇಳಿದ ಮಾತಿಗಾಗಿ ಮಹಿಳೆ ಮತ್ತು ಮನುಷ್ಯನಾಗಿ ಕ್ಷಮೆಯಾಚಿಸುತ್ತೇನೆ. ಇದನ್ನು ಯಾರೇ ಮಾಡಿದರೂ, ಹೇಳಿದ ಜಾಗ ಅಥವಾ ಅವರು ಬದ್ಧವಾಗಿರುವ ಪಕ್ಷವನ್ನು ಲೆಕ್ಕಿಸದೆ ಇಂಥದ್ದನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ . ನನ್ನ ನಾಯಕ ಸ್ಟಾಲಿನ್ ಮತ್ತು ನನ್ನ ಪಕ್ಷ ಡಿಎಂಕೆ ಇದನ್ನು ಕ್ಷಮಿಸದ ಕಾರಣ ನಾನು ಬಹಿರಂಗವಾಗಿ ಕ್ಷಮೆಯಾಚಿಸುತ್ತಿದ್ದೇನೆ ಎಂದು ಕನಿಮೊಳಿ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ನಾಯಕಿಯರೂ ಆಗಿರುವ ನಾಲ್ವರು ನಟಿಯರನ್ನು ಸಾದಿಕ್ ಐಟಂ ಎಂದು ಕರೆದಿದ್ದಾರೆ. ತಮಿಳುನಾಡಿನಲ್ಲಿ ಕಮಲ ಅರಳಲಿದೆ ಎನ್ನುತ್ತಾರೆ ಖುಷ್ಬೂ. ಅಮಿತ್ ಶಾ ತಲೆಯಲ್ಲಿ ಕೂದಲು ಮತ್ತೆ ಬೆಳೆಯುತ್ತದೆ ಎಂದು ನಾನು ಹೇಳುತ್ತೇನೆ ಆದರೆ ತಮಿಳುನಾಡಿನಲ್ಲಿ ಕಮಲ ಅರಳುವ ಸಾಧ್ಯತೆ ಇಲ್ಲ ಎಂದು ಸಾದಿಕ್ ಹೇಳಿದ್ದರು.

“ನಿಮ್ಮ ಬಗ್ಗೆ ನೀವು ಏನು ಯೋಚಿಸುತ್ತೀರಿ? ನನ್ನ ಸಹೋದರ ಇಳಯ ಅರುಣ ಎಷ್ಟು ಬಾರಿ ಖುಷ್ಬೂ ಜತೆ ಮಾಡಿದ್ದಾನೆ ಗೊತ್ತಾ? ಅಂದರೆ ಅವರು ಡಿಎಂಕೆಯಲ್ಲಿದ್ದಾಗ ಅವರೊಂದಿಗೆ ಸಭೆ ನಡೆಸಿದ್ದರು. ಅವರು ಖುಷ್ಬೂ  ಅವರನ್ನು ಸುಮಾರು ಆರು ಬಾರಿ ಸಭೆಗಳಿಗೆ ಕರೆತಂದರು ಎಂದು ಸಾದಿಕ್ ಹೇಳಿದ್ದಾರೆ

Published On - 7:05 pm, Fri, 28 October 22