ಉನ್ನಾವೋದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ (Sakshi Maharaj) ಸದಾ ಒಂದಿಲ್ಲೊಂದು ವಿವಾದಗಳಿಗೇ ಸುದ್ದಿ ಮಾಡುತ್ತಿರುತ್ತಾರೆ. ಹಾಗೇ, ಈ ಸಲ ಸಮಾಜವಾದಿ ಪಾರ್ಟಿ(Samajwadi Party)ಯ ಅಖಿಲೇಶ್ ಯಾದವ್(Akhilesh Yadav)ಗೆ ಖಡಕ್ ಎಚ್ಚರಿಕೆ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅದೂ ಕೂಡ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ತಂಟೆಗೆ ಬಂದರೆ ಸರಿ ಇರುವುದಿಲ್ಲ ನೋಡಿ..ಎಂದು ಎಚ್ಚರಿಕೆ ನೀಡಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ರಿಗೆ ಕಂಪ್ಯೂಟರ್ ಕೂಡ ಆಪರೇಟ್ ಮಾಡಲು ಬರುವುದಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿದ್ದರು. ಅದರಿಂದ ಸಿಟ್ಟಾದ ಸಾಕ್ಷಿ ಮಹಾರಾಜ್ ವಾರ್ನಿಂಗ್ ನೀಡಿದ್ದಾರೆ.
ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೊಸದಾಗಿ ಚುನಾಯಿತರಾದ ಸದಸ್ಯರಿಗೆ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದ ಸಾಕ್ಷಿ ಮಹಾರಾಜ್, ಯೋಗಿ ಆದಿತ್ಯನಾಥ್ ಅವರಿಗೆ ಕಂಪ್ಯೂಟರ್ ಆಪರೇಟ್ ಮಾಡಲು ಬಾರದೆ ಇರಬಹುದು. ಆದರೆ ಜನರನ್ನು ಹೇಗೆ ಹೊಡೆದುರುಳಿಸಬೇಕು ಎಂಬುದು ಗೊತ್ತು. ಅಖಿಲೇಶ್ ಯಾದವ್ ಬಳಿ ಎಚ್ಚರಿಕೆಯಿಂದ ಇರಲು ಹೇಳಿ. ಮುಂದಿನ ಸರದಿ ಅವರದ್ದೇ ಆಗಿರಬಹುದು ಎಂದು ಹೇಳಿದ್ದಾರೆ. ಈ ಮಾತೀಗ ಸಿಕ್ಕಾಪಟೆ ವಿವಾದ ಸೃಷ್ಟಿಸಿದೆ. ಅಂದಹಾಗೆ ಈ ಕಾರ್ಯಕ್ರಮವನ್ನು ಬಿಜೆಪಿಯ ಸಾದರ್ ಕ್ಷೇತ್ರದ ಶಾಸಕ ಪಂಕಜ್ ಗುಪ್ತಾ ಆಯೋಜಿಸಿದ್ದರು.
ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಸಾಕ್ಷಿ ಮಹಾರಾಜ್, ಗೃಹ ಸಚಿವ ಅಮಿತ್ ಶಾ ಭಾನುವಾರ ಲಖನೌಗೆ ಆಗಮಿಸಿದ್ದರು. ಈ ವೇಳೆ ಎರಡು ತಾಸುಗಳ ಕಾಲ ಯೋಗಿ ಜೀಯವರನ್ನು ಹೊಗಳಿದ್ದಾರೆ. ನಮ್ಮ ರಾಜ್ಯಕ್ಕೆ ಇಷ್ಟು ಒಳ್ಳೆಯ ಮುಖ್ಯಮಂತ್ರಿ ಸಿಕ್ಕಿರಲಿಲ್ಲ ಮತ್ತು ದೇಶಕ್ಕೆ ಮೋದಿಯವರಷ್ಟು ಅದ್ಭುತ ವ್ಯಕ್ತಿ ಪ್ರಧಾನಿಯಾಗಿ ಸಿಕ್ಕಿರಲಿಲ್ಲ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದೂ ಹೇಳಿದ್ದಾರೆ.
ಇದನ್ನೂ ಓದಿ: 2021ರಲ್ಲಿ ಹವಾಮಾನ ವೈಪರೀತ್ಯಗಳಿಂದ ತತ್ತರಿಸುತ್ತಿರುವ ಭಾರತ; ಕಾರಣವೇನು?
ಪ್ರಧಾನಿ ನಿವಾಸವನ್ನೇ ಬಾಡಿಗೆಗೆ ಇಟ್ಟ ಪಾಕಿಸ್ತಾನ ಸರ್ಕಾರ; ಬಂಗಲೆ ಬಿಟ್ಟ ಇಮ್ರಾನ್ ಖಾನ್