AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2021ರಲ್ಲಿ ಹವಾಮಾನ ವೈಪರೀತ್ಯಗಳಿಂದ ತತ್ತರಿಸುತ್ತಿರುವ ಭಾರತ; ಕಾರಣವೇನು?

ಭಾರತವು 2021ರ ಕೇವಲ ಎಂಟು ತಿಂಗಳ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಹವಾಮಾನ ವೈಪರೀತ್ಯಗಳಿಂದ ತತ್ತರಿಸಿದೆ. ಇದಕ್ಕೆ ಕಾರಣವೇನು? ತಜ್ಞರ ಅಭಿಪ್ರಾಯ ಇಲ್ಲಿದೆ.

2021ರಲ್ಲಿ ಹವಾಮಾನ ವೈಪರೀತ್ಯಗಳಿಂದ ತತ್ತರಿಸುತ್ತಿರುವ ಭಾರತ; ಕಾರಣವೇನು?
ಉತ್ತರಾಖಂಡದಲ್ಲಿ ಉಂಟಾಗಿದ್ದ ದಿಢೀರ್ ಪ್ರವಾಹ (ಸಂಗ್ರಹ ಚಿತ್ರ)
TV9 Web
| Updated By: shivaprasad.hs|

Updated on: Aug 04, 2021 | 11:28 AM

Share

2021 ಪ್ರಾರಂಭವಾಗಿ ಎಂಟನೇ ತಿಂಗಳು‌ ನಡೆಯುತ್ತಿದೆ. ದೇಶದ ಉದ್ದಗಲಕ್ಕೂ ಈ ಅವಧಿಯಲ್ಲಿ ಹವಾಮಾನ ವೈಪರೀತ್ಯದಿಂದ ವಿಪರೀತ ಹಾನಿ ಸಂಭವಿಸಿದೆ. ಜಾಗತಿಕವಾಗಿ ಕಾಡುತ್ತಿರುವ, ದಶಕಗಳಿಂದ ಚರ್ಚೆಯಾಗುತ್ತಿರುವ ಸಮಸ್ಯೆಯಾದ ತಾಪಮಾನ ಏರಿಕೆಯ ಪರಿಣಾಮಗಳು ನೇರವಾಗಿ ಜನಜೀವನವನ್ನು ತಟ್ಟಲು ಆರಂಭಿಸಿದೆ. ಅರಣ್ಯ ಸಂಪತ್ತು, ಜನಜೀವನ, ಜೀವ ವೈವಿಧ್ಯ ಮೊದಲಾದವುಗಳೆಲ್ಲವೂ ಇದಕ್ಕೆ ಬೆಲೆಯನ್ನು ತೆರುತ್ತಿವೆ.

ಭಾರತದಲ್ಲಿ 2021ರಲ್ಲಿ ಇಂತಹ ಹಾನಿ ಮಾಡಿದ ಕೆಲವು ಘಟನೆಗಳೆಂದರೆ, ಮಾನ್ಸೂನ್ ತಡವಾಗಿದ್ದು, ಎಲ್ಲೆಡೆ ಮಳೆ ಹೆಚ್ಚಾಗಿ ಪ್ರವಾಹವಾಗುತ್ತಿರುವುದು, ಯಾಸ್ ಚಂಡಮಾರುತ, ತೌಕ್ತೆ ಚಂಡಮಾರುತ, ಉತ್ತರಾಖಂಡದ ಪ್ರವಾಹ, ಹಿಮಾಚಲ ಪ್ರದೇಶದಲ್ಲಿ ಉಂಟಾದ ಪ್ರವಾಹ, ಭೂಕುಸಿತ, ಉತ್ತರಾಖಂಡದಲ್ಲಿ ಉಂಟಾದ ಕಾಡ್ಗಿಚ್ಚು, ಜಮ್ಮು ಕಾಶ್ಮೀರ, ಮಧ್ಯಪ್ರದೇಶ, ಬಂಗಾಳದ ಪ್ರವಾಹ, ರಾಜಸ್ತಾನದಲ್ಲಿ ಸಿಡಿಲಿನಿಂದಾಗಿ ಪ್ರಾಣ ಕಳೆದುಕೊಂಡ ಜನರು.. ಹೀಗೆ ಪಟ್ಟಿ ಬೆಳೆಯುತ್ತದೆ.

ಓದಿ: ಪಶ್ಚಿಮ ಬಂಗಾಳದಲ್ಲಿ ಭೀಕರ ಪ್ರವಾಹಕ್ಕೆ 15 ಮಂದಿ ಸಾವು; ಮಧ್ಯಪ್ರದೇಶದಲ್ಲಿ ನೀರಿಗೆ ಹೆದರಿ ಮರಹತ್ತಿ ಕುಳಿತ ಜನರು

ಭಾರತಕ್ಕೆ ಏಕೆ ಜಾಗತಿಕ ತಾಪಮಾನ‌ ಏರಿಕೆಯ ಪರಿಣಾಮಗಳು ಹೆಚ್ಚಾಗಿ ತಟ್ಟುತ್ತವೆ, ಇದಕ್ಕೆ ತಜ್ಞರು ಏನಂತಾರೆ ಎಂಬ ಮಾಹಿತಿ ದಿ ಕ್ವಿಂಟ್ ತಯಾರಿಸಿದ ಈ ಕೆಳಗಿನ ವಿಡಿಯೊದಲ್ಲಿದೆ.

ತಜ್ಞರ ಪ್ರಕಾರ, ಜಾಗತಿಕವಾಗಿ ಬದಲಾಗುತ್ತಿರುವ ತಾಪಮಾನದ ನೈಜ ಪರಿಣಾಮಗಳಿವು. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಚಂಡಮಾರುತಗಳ ಸಂಖ್ಯೆ ಹೆಚ್ಚಾಗಿದೆ. ಭಾರತದಂತಹ ಪ್ರದೇಶದಲ್ಲಿ ಪರ್ವತಗಳು, ಸಮುದ್ರ ತೀರಗಳು, ನದಿ ಪಾತ್ರಗಳು, ಅಣೆ ಕಟ್ಟುಗಳು  ಹೆಚ್ಚಾಗಿರುವುದರಿಂದ ಪರಿಣಾಮಗಳೂ ಜಾಸ್ತಿ ಎನ್ನುವುದು ತಜ್ಞರ ಅಭಿಪ್ರಾಯ.

ಕೃಪೆ: ದಿ ಕ್ವಿಂಟ್(The Quint)

ಇದನ್ನೂ ಓದಿ:

Turkey Wildfire: ಟರ್ಕಿಯಲ್ಲಿ ಕರಾಳ ಕಾಡ್ಗಿಚ್ಚು; 100ಕ್ಕೂ ಹೆಚ್ಚು ಪ್ರದೇಶಗಳಿಗೆ ಆವರಿಸಿದ ಬೆಂಕಿ, ಸಾವಿನ ಸಂಖ್ಯೆ 8ಕ್ಕೆ ಏರಿಕೆ

Viral Video: ಮಧ್ಯಪ್ರದೇಶದಲ್ಲಿ ಭೀಕರ ಪ್ರವಾಹ; ನೋಡನೋಡುತ್ತಲೇ ಕೊಚ್ಚಿ ಹೋದ ಸೇತುವೆ

ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಭಾರೀ ಪ್ರವಾಹ; 16 ಮಂದಿ ಸಾವು, 40ಕ್ಕೂ ಹೆಚ್ಚು ಜನ ನಾಪತ್ತೆ

(The reason behind the India’s heavy Climate Change issues)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ