ವಿಮಾನದಲ್ಲಿ ಸಹಪ್ರಯಾಣಿಕ ಅಸ್ವಸ್ಥ; ತಕ್ಷಣವೇ ಚಿಕಿತ್ಸೆ ನೀಡಿ ಜೀವ ಉಳಿಸಿದ ತೆಲಂಗಾಣ ಗವರ್ನರ್

ಶುಕ್ರವಾರ ರಾತ್ರಿ ಐಪಿಎಸ್ ಅಧಿಕಾರಿ ವಿಮಾನ ಪ್ರಯಾಣದ ನಡುವೆ ಅಸ್ವಸ್ಥರಾದಾಗ ವೃತ್ತಿಯಲ್ಲಿ ವೈದ್ಯೆಯಾಗಿರುವ ಗವರ್ನರ್ ತಮಿಳಿಸೈ ಸಹಾಯಕ್ಕೆ ಧಾವಿಸಿದ್ದಾರೆ. ಮೇಡಂ ಗವರ್ನರ್ ಚೆಕ್ ಮಾಡಿದಾಗ ನನ್ನ ಹಾರ್ಟ್ ರೇಟ್ ಕೇವಲ 39 ಆಗಿತ್ತು

ವಿಮಾನದಲ್ಲಿ ಸಹಪ್ರಯಾಣಿಕ ಅಸ್ವಸ್ಥ; ತಕ್ಷಣವೇ ಚಿಕಿತ್ಸೆ ನೀಡಿ ಜೀವ ಉಳಿಸಿದ ತೆಲಂಗಾಣ ಗವರ್ನರ್
ವಿಮಾನದಲ್ಲಿ ಸಹಪ್ರಯಾಣಿಕರಿಗೆ ಚಿಕಿತ್ಸೆ ನೀಡುತ್ತಿರುವ ಗನರ್ನರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 24, 2022 | 3:36 PM

ಅಮರಾವತಿ: ದೆಹಲಿಯಿಂದ ಹೈದರಾಬಾದ್​​ಗೆ ಹೋಗುತ್ತಿದ್ದ ಇಂಡಿಗೊ ವಿಮಾನದಲ್ಲಿ ಐಪಿಎಸ್ ಶ್ರೇಣಿಯ ಎಡಿಜಿಪಿ ಅಸ್ವಸ್ಥರಾದಾಗ ಅದೇ ವಿಮಾನದಲ್ಲಿದ್ದ ತೆಲಂಗಾಣ ಗವರ್ನರ್ (Telangana Governor) ತಮಿಳಿಸೈ ಸೌಂದರರಾಜನ್ (Tamilisai Soundararajan) ತಕ್ಷಣವೇ ಚಿಕಿತ್ಸೆ ನೀಡಿ ಆ ಅಧಿಕಾರಿಯ ಪ್ರಾಣ ಉಳಿಸಿದ್ದಾರೆ.  1994ರ ಐಪಿಎಸ್ ಅಧಿಕಾರಿಯಾಗಿರುವ ಕೃಪಾನಂದ ತ್ರಿಪಾಠಿ ಉಜೇಲಾ ಅವರ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು ಹೈದರಾಬಾದ್​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇಡಂ ಗವರ್ನರ್ ನನ್ನ ಜೀವ ಉಳಿಸಿದರು. ಅಮ್ಮನಂತೆ ಅವರು ನನಗೆ ಸಹಾಯ ಮಾಡಿದರು. ಇಲ್ಲದೇ ಇರುತ್ತಿದ್ದರೆ ನಾನು ಆಸ್ಪತ್ರೆಗೂ ತಲುಪುತ್ತಿರಲಿಲ್ಲ ಎಂದು ಹೈದರಾಬಾದ್ ನಿಂದ ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಉಜೇಲಾ ಹೇಳಿದ್ದಾರೆ. ಆಂಧ್ರಪ್ರದೇಶ ಕೇಡರ್​​ನ ಉಜೇಲಾ ಅವರು ರಸ್ತೆ ಸುರಕ್ಷಾ ವಿಭಾಗದಲ್ಲಿ ಹೆಚ್ಚುವರಿ ಡಿಜಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶುಕ್ರವಾರ ರಾತ್ರಿ ಐಪಿಎಸ್ ಅಧಿಕಾರಿ ವಿಮಾನ ಪ್ರಯಾಣದ ನಡುವೆ ಅಸ್ವಸ್ಥರಾದಾಗ ವೃತ್ತಿಯಲ್ಲಿ ವೈದ್ಯೆಯಾಗಿರುವ ಗವರ್ನರ್ ತಮಿಳಿಸೈ ಸಹಾಯಕ್ಕೆ ಧಾವಿಸಿದ್ದಾರೆ. ಮೇಡಂ ಗವರ್ನರ್ ಚೆಕ್ ಮಾಡಿದಾಗ ನನ್ನ ಹಾರ್ಟ್ ರೇಟ್ ಕೇವಲ 39 ಆಗಿತ್ತು. ಮುಂದಕ್ಕೆ ಬಾಗುವಂತೆ ಅವರು ನನಗೆ ಸಲಹೆ ನೀಡಿ, ಆರಾಮವಾಗುವಂತೆ ಅವರು ಮಾಡಿದರು. ಈ ಮೂಲಕ ನನ್ನ ಉಸಿರಾಟ ಸರಿಯಾಯಿತು ಎಂದು ಉಜೇಲಾ ಹೇಳಿದ್ದಾರೆ.

ಹೈದರಾಬಾದ್ ನಲ್ಲಿ ವಿಮಾನ ಲ್ಯಾಂಡ್ ಆದ ಕೂಡಲೇ ಆಸ್ಪತ್ರೆ ದಾಖಲಾಗಿದ್ದು ಅಲ್ಲಿ ಹಲವು ಪರೀಕ್ಷೆಗೊಳಪಡಿಸಲಾಗಿದೆ. ಅಧಿಕಾರಿಗೆ ಡೆಂಗ್ಯೂ ಇದ್ದು, ಅವರ ಪ್ಲೇಟ್ ಲೆಟ್ ಸಂಖ್ಯೆ 14,000ಕ್ಕೆ ಇಳಿದಿತ್ತು ಮೇಡಂ ಗವರ್ನರ್ ವಿಮಾನದಲ್ಲಿ ಇಲ್ಲದೇ ಇರುತ್ತಿದ್ದರೆ ನಾನು ಈಗ ಹೀಗೆ ಇರುತ್ತಿರಲಿಲ್ಲ. ಅವರು ನಮಗೆ ಹೊಸ ಬದುಕನ್ನು ಕೊಟ್ಟರಕು ಎಂದು ತಮಿಳಿಸೈ ಅವರಿಗೆ ಧನ್ಯವಾದ ಸಲ್ಲಿಸಿದ ಉಜೇಲಾ ಹೇಳಿದ್ದಾರೆ.

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ