ಚೆನ್ನೈ: ಚುನಾವಣಾ ಪ್ರಚಾರ ಮಾಡಿದ ನಂತರ ಅಭ್ಯರ್ಥಿಗಳು ವಿಧವಿಧದ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ತಾವು ಭಾಗವಹಿಸಿದ ಸಭೆ, ಮೆರವಣಿಗೆ, ನೆರೆದ ಅಪಾರ ಪ್ರಮಾಣದ ಜನ..ಹೀಗೆ ಪ್ರತಿಯೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಚುನಾವಣಾ ಪ್ರಚಾರದ ನವ ಮಾಧ್ಯಮವಾಗಿ ಅತ್ಯಂತ ಶಕ್ತಿಯುತ ಮಾಧ್ಯಮವಾಗಿ ಸಾಮಾಜಿಕ ಜಾಲತಾಣಗಳು ಬಳಕೆಯಾಗುತ್ತಿವೆ ಎಂಬುದು ಯಾರಿಗೂ ಗೊತ್ತಿಲ್ಲದ್ದೇನೂ ಅಲ್ಲ. ಹೀಗಿರುವಾಗ, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮುಗಿಸಿದ ಕಾಂಗ್ರೆಸ್ ಅಭ್ಯರ್ಥಿಯೋರ್ವರು ಹಂಚಿಕೊಂಡ ಫೋಟೊ ಅಚ್ಚರಿ ಮೂಡಿಸಿದೆ.
ಇನ್ನೇನು, ನಾಳೆ ಬೆಳಗ್ಗೆ ಆದರೆ ಸಾಕು ತಮಿಳುನಾಡಿನ ಮತದಾರರು ತಮ್ಮ ಹಕ್ಕು ಚಲಾಯಿಸಲು ಶುರುಮಾಡುತ್ತಾರೆ. ಬಹಿರಂಗ ಪ್ರಚಾರಕ್ಕೆ ಈಗಾಗಲೇ ತೆರೆಹಾಡಲಾಗಿದೆ. ಒಮಲೂರ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ 42 ವರ್ಷದ ಮೋಹನ್ ಕುಮಾರಮಂಗಲಮ್, ತಮ್ಮ ಟ್ವಿಟರ್ ಖಾತೆಯಲ್ಲಿ ತಮ್ಮ ಸ್ಲಿಪ್ಪರ್ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಹೊರಭಾಗದಲ್ಲಿ ಅಲ್ಲಲ್ಲಿ ಹರಿದುಹೋಗಿರುವ ಕಪ್ಪು ಬಣ್ಣದ ಚಪ್ಪಲಿಯು ಟ್ವಿಟರ್ನಲ್ಲಿ ಸಂಚಲನ ಮೂಡಿಸಿದೆ.
The end of a campaign. I can honestly say I left it all on the field and saved nothing for the ride home. In god we trust and god comes in all shapes and sizes pic.twitter.com/YvzCvrjfZs
— Mohan Kumaramangalam மோகன் குமாரமங்கலம் (@MKumaramangalam) April 4, 2021
ಅತ್ಯಂತ ಪ್ರಾಮಾಣಿಕತೆಯಿಂದ ಹೇಳಬೇಕೆಂದರೆ ಚುನಾವಣಾ ಪ್ರಚಾರದ ಅಂತ್ಯದಲ್ಲಿ ನಾನು ಕೊನೆಗೆ ಉಳಿಸಿದ್ದು ಅಂದರೆ ಕೇವಲ ಇದೊಂದನ್ನೇ. ದೇವರಲ್ಲಿ ನಾವು ನಂಬಿಕೆ ಇಡುತ್ತೇವೆ. ಆ ದೇವರು ಎಲ್ಲಾ ಆಕಾರ ಮತ್ತು ಗಾತ್ರದಲ್ಲಿ ನಮ್ಮೆದುರಿಗೆ ಬರುತ್ತಾನೆ’ ಎಂದು ಮೋಹನ್ ಅವರು ಬರೆದುಕೊಂಡಿದ್ದಾರೆ.
Good fight, Mohan. It’s been a tough one. But I think you will have the last laugh.
— Sundar (@doc_sund) April 4, 2021
Why not hush puppies?https://t.co/HN1HcNdifK
— Ponniyin Selvan (@Ponniyi56933268) April 4, 2021
ಇದನ್ನೂ ಓದಿ: ತಮಿಳುನಾಡು ಮುಖ್ಯಮಂತ್ರಿ ಇಪಿಎಸ್ ಬಗ್ಗೆ ಅವಹೇಳನಕಾರಿ ಹೇಳಿಕೆ: ಡಿಎಂಕೆ ನಾಯಕ ಎ.ರಾಜಾಗೆ 2 ದಿನ ಚುನಾವಣಾ ಪ್ರಚಾರದಿಂದ ನಿರ್ಬಂಧ