AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದ ಬಗ್ಗೆ ಚರ್ಚೆ ಯಾವಾಗ? ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

ಚೀನಾ(China)ದ ವಿಷಯವಾಗಿ ಚರ್ಚೆ ಯಾವಾಗ? ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ಚೀನಾದ ಬಗ್ಗೆ ಚರ್ಚೆ ಯಾವಾಗ? ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ
Mallikarjun Kharge
TV9 Web
| Updated By: ನಯನಾ ರಾಜೀವ್|

Updated on: Dec 17, 2022 | 12:08 PM

Share

ಚೀನಾ(China)ದ ವಿಷಯವಾಗಿ ಚರ್ಚೆ ಯಾವಾಗ? ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಖರ್ಗೆ ಅವರು ಪತ್ರಿಕೆಯ ಕಟಿಂಗ್ ಒಂದನ್ನು ಟ್ವೀಟ್ ಮಾಡಿದ್ದು,  ಡೋಕ್ಲಾಮ್ ಪ್ರದೇಶದಲ್ಲಿ ಆಯಕಟ್ಟಿನ ಸಿಲಿಗುರಿ ಕಾರಿಡಾರ್‌ಗೆ ಸಮೀಪದಲ್ಲಿರುವ ಜಂಫೇರಿ ಪರ್ವತದವರೆಗೆ ಚೀನಾವು ಪಡೆಗಳನ್ನು ನಿರ್ಮಿಸುತ್ತಿವೆ, ಇದು ಈಶಾನ್ಯ ಭಾರತದ ರಾಜ್ಯಗಳಿಗೆ ಹೆಬ್ಬಾಗಿಲು ಈ ವಿಷಯವು ನಮ್ಮ ರಾಷ್ಟ್ರೀಯ ಭದ್ರತೆಗೆ ಅತ್ಯಂತ ಕಳವಳಕಾರಿ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ವಿಟ್ಟರ್‌ನಲ್ಲಿ ಟ್ಯಾಗ್ ಮಾಡಿದ ಖರ್ಗೆ, “ಚೀನಾ ಪೇ ಚರ್ಚಾ ಕಬ್ ಹೋಗೀ?( ಚೀನಾದ ಬಗ್ಗೆ ಚರ್ಚೆ ಯಾವಾಗ ನಡೆಯುತ್ತೆ) ಎಂದು ಪ್ರಶ್ನೆ ಮಾಡಿದ್ದಾರೆ. ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಚಕಮಕಿಯ ಕುರಿತು, ಖರ್ಗೆ ಮಾತನಾಡಿ, ಈ ವಿಷಯದಲ್ಲಿ ಸರ್ಕಾರ ಮೂಕ ಪ್ರೇಕ್ಷಕರಾಗಿ ಉಳಿದಿದೆ ಎಂದು ಟೀಕಿಸಿದರು.

ಮತ್ತಷ್ಟು ಓದಿ: ಚೀನಾ ಯುದ್ಧಕ್ಕೆ ಅಣಿಯಾಗುತ್ತಿದೆ, ಇಲ್ಲಿ ಕೇಂದ್ರ ಸರ್ಕಾರ ನಿದ್ದೆ ಮಾಡುತ್ತಿದೆ: ರಾಹುಲ್ ಗಾಂಧಿ

ಚೀನಾಕ್ಕೆ ಸಂಬಂಧಿಸಿದ ನೆಲದ ವಾಸ್ತವತೆಯನ್ನು ಸರ್ಕಾರ ನಿರಂತರವಾಗಿ ನಿರ್ಲಕ್ಷಿಸುತ್ತಿದೆ. ನಾವು ಸದನದಲ್ಲಿ ಚೀನಾದ ವಿಷಯವನ್ನು ನಿರಂತರವಾಗಿ ಪ್ರಸ್ತಾಪಿಸುತ್ತಿದ್ದೇವೆ, ನಾವು ಚರ್ಚಿಸಲು ಬಯಸಿದ್ದೆವು ಆದರೆ ರಕ್ಷಣಾ ಸಚಿವರು ಉತ್ತರ ನೀಡಿ ನಿರ್ಗಮಿಸಿದರು ಎಂದರು.

ಚೀನಾ ವಿವಾದದ ವಿಷಯವು ತುಂಬಾ ಗಂಭೀರವಾಗಿದೆ ಮತ್ತು ಸೂಕ್ಷ್ಮವಾಗಿದೆ, ಡಿಸೆಂಬರ್ 13 ರಂದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತವಾಂಗ್‌ನಲ್ಲಿ ಡಿಸೆಂಬರ್ 9 ರಂದು ಚೀನಾದ ಉಲ್ಲಂಘನೆಯ ಪ್ರಯತ್ನದ ಕುರಿತು ಉಭಯ ಸದನಗಳಲ್ಲಿ ಹೇಳಿಕೆ ನೀಡಿದರು.

ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯ ನಂತರ, ಕಾಂಗ್ರೆಸ್ ನಿರಂತರವಾಗಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೇರವಾಗಿ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ