ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿದೆ: ಮೋದಿ
ಕಾಂಗ್ರೆಸ್ ಆಡಳಿತದಲ್ಲಿ ಪಿಎಫ್‌ಐನಂತಹ ಭಯೋತ್ಪಾದಕ ಸಂಘಟನೆಗಳು ರಾಜಸ್ಥಾನದಲ್ಲಿ ನಿರ್ಭೀತಿಯಿಂದ ರ‍್ಯಾಲಿಗಳನ್ನು ನಡೆಸುತ್ತಿವೆ. ಇಲ್ಲಿ ಕಾಂಗ್ರೆಸ್ ಸರ್ಕಾರವಿದೆ, ಆದ್ದರಿಂದ ಪಿಎಫ್‌ಐನಂತಹ ಭಯೋತ್ಪಾದಕ ಸಂಘಟನೆಗಳು ನಿರ್ಭಯವಾಗಿ ರ‍್ಯಾಲಿಗಳನ್ನು ನಡೆಸುತ್ತವೆ. ಭಯೋತ್ಪಾದಕರ ಸಹಾನುಭೂತಿ ಹೊಂದಿರುವ ಕಾಂಗ್ರೆಸ್ ಸರ್ಕಾರ ರಾಜಸ್ಥಾನವನ್ನು ನಾಶ ಮಾಡಲಿದೆ
ಉದಯಪುರ ನವೆಂಬರ್ 09: ರಾಜಸ್ಥಾನದ (Rajasthan) ಅಶೋಕ್ ಗೆಹ್ಲೋಟ್ (Ashok Gehlot) ನೇತೃತ್ವದ ಕಾಂಗ್ರೆಸ್ ಸರ್ಕಾರವು “ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿದೆ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಗುರುವಾರ ಆರೋಪಿಸಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಉದಯಪುರದಲ್ಲಿ (Udaipur) ಟೈಲರ್ ಕನ್ಹಯ್ಯಾ ಲಾಲ್ ತೇಲಿ ಹತ್ಯೆ ನಡೆದಿತ್ತು. ಪ್ರವಾದಿ ಮೊಹಮ್ಮದ್ (Prophet Mohammed) ಬಗ್ಗೆ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆಗಳನ್ನು ಬೆಂಬಲಿಸಿದ್ದಕ್ಕಾಗಿ ರಿಯಾಜ್ ಅತ್ತಾರಿ ಮತ್ತು ಗೌಸ್ ಮೊಹಮ್ಮದ್ ಲಾಲ್ ಹತ್ಯೆ ಮಾಡಿದ್ದರು.
ಕಾಂಗ್ರೆಸ್ ಆಡಳಿತದಲ್ಲಿ ಮಾನವೀಯತೆಯನ್ನು ನಾಚಿಸುವಂತಹ ಘಟನೆಗಳು ನಡೆಯುತ್ತಿವೆ. ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಜೊತೆಗಿನ ಭಯೋತ್ಪಾದಕ ಘಟನೆಯು ಕಾಂಗ್ರೆಸ್‌ಗೆ ದೊಡ್ಡ ಕಳಂಕವಾಗಿದೆ. ಕಾಂಗ್ರೆಸ್ ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿರುವುದರಿಂದ ಇದು ಸಂಭವಿಸಿದೆ ಎಂದು ಮೋದಿ ಉದಯಪುರದಲ್ಲಿ ನಡೆದ ರ‍್ಯಾಲಿಯಲ್ಲಿ ಹೇಳಿದರು.
उदयपुर की जनसभा में जनसैलाब को देखकर ऐसा लग रहा है कि लोगों ने राजस्थान में कमल खिलाने का मन बना लिया है। आशीर्वाद देने आई जनता-जनार्दन का अभिनंदन। https://t.co/l4BbNojWCM
— Narendra Modi (@narendramodi) November 9, 2023
ಕಾಂಗ್ರೆಸ್ ಆಡಳಿತದಲ್ಲಿ ಪಿಎಫ್‌ಐನಂತಹ ಭಯೋತ್ಪಾದಕ ಸಂಘಟನೆಗಳು ರಾಜಸ್ಥಾನದಲ್ಲಿ ನಿರ್ಭೀತಿಯಿಂದ ರ‍್ಯಾಲಿಗಳನ್ನು ನಡೆಸುತ್ತಿವೆ. ಇಲ್ಲಿ ಕಾಂಗ್ರೆಸ್ ಸರ್ಕಾರವಿದೆ, ಆದ್ದರಿಂದ ಪಿಎಫ್‌ಐನಂತಹ ಭಯೋತ್ಪಾದಕ ಸಂಘಟನೆಗಳು ನಿರ್ಭಯವಾಗಿ ರ‍್ಯಾಲಿಗಳನ್ನು ನಡೆಸುತ್ತವೆ. ಭಯೋತ್ಪಾದಕರ ಸಹಾನುಭೂತಿ ಹೊಂದಿರುವ ಕಾಂಗ್ರೆಸ್ ಸರ್ಕಾರ ರಾಜಸ್ಥಾನವನ್ನು ನಾಶ ಮಾಡಲಿದೆ. ನಾವು ರಾಜಸ್ಥಾನವನ್ನು ನಾಶಮಾಡಲು ಬಿಡುತ್ತೇವೆಯೇ?. “ರಾಜಸ್ಥಾನದ ಹಲವಾರು ಪ್ರದೇಶಗಳಿಂದ, ಬಡವರ ವಲಸೆಯ ಬಗ್ಗೆ ಸುದ್ದಿ ಬರಲಾರಂಭಿಸಿವೆ. ಇಲ್ಲಿ ಕಾಂಗ್ರೆಸ್ ಸರ್ಕಾರ ಮುಂದುವರಿದರೆ, ಇದು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಮೋದಿ ಹೇಳಿದ್ದಾರೆ.
ಗೆಹ್ಲೋಟ್ ನೇತೃತ್ವದ ಸರ್ಕಾರವು ರಾಜಸ್ಥಾನದ ಐದು ವರ್ಷಗಳನ್ನು ವ್ಯರ್ಥ ಮಾಡಿದೆ ಎಂದ ಮೋದಿ, ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಜಗಳದ ಬಗ್ಗೆಯೂ ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ಸರ್ಕಾರವು ಸಿಎಂ ಕುರ್ಚಿಯಲ್ಲಿ ಯಾರು ಕುಳಿತುಕೊಳ್ಳಬೇಕು ಎಂದು ನಿರ್ಧರಿಸುವಲ್ಲಿ ನಿರತವಾಗಿದೆ. ರಾಜಸ್ಥಾನದ 5 ವರ್ಷಗಳನ್ನು ವ್ಯರ್ಥ ಮಾಡಿದೆ. ಕುರ್ಚಿಗಾಗಿ ನಡೆದ ಈ ಹೋರಾಟದಲ್ಲಿ ಕಾಂಗ್ರೆಸ್ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ.ರಾಜ್ಯದಲ್ಲಿ ದಲಿತರು, ಹಿಂದುಳಿದವರು ಅಥವಾ ಬಡವರು ಅಥವಾ ಮಹಿಳೆಯರು ಸುರಕ್ಷಿತವಾಗಿಲ್ಲ. ಕಾಂಗ್ರೆಸ್ ಮಹಿಳೆಯರ ಮೇಲಿನ ಅಪರಾಧದ ವಿಷಯದಲ್ಲಿ ರಾಜಸ್ಥಾನವನ್ನು ನಂಬರ್ 1 ಮಾಡಿದೆ. ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಯುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮೋದಿ ಆರೋಪಿಸಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಜಯಭೇರಿ ಬಾರಿಸಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಿದೆ. ಭಾರತದ ಈ ಕ್ಷಿಪ್ರ ಅಭಿವೃದ್ಧಿಯಿಂದ ರಾಜಸ್ಥಾನವೂ ಪ್ರಯೋಜನ ಪಡೆಯಬೇಕಾದರೆ, ಬಿಜೆಪಿ ಸರ್ಕಾರವನ್ನು ಹೊಂದಿರುವುದು ಅವಶ್ಯಕ ಎಂದು ಮೋದಿ ಹೇಳಿದ್ದಾರೆ. ರಾಜಸ್ಥಾನದ 200 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 25 ರಂದು ಚುನಾವಣೆ ನಿಗದಿಯಾಗಿದೆ. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ