ರಫೇಲ್ ವಿಮಾನವನ್ನು ಆಟಿಕೆ ಎಂದು ಕರೆದ ಕಾಂಗ್ರೆಸ್‌ನ ಅಜಯ್ ರಾಯ್ಗೆ ಬಿಜೆಪಿ ತಿರುಗೇಟು
ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ ರಫೇಲ್ ಯುದ್ಧ ವಿಮಾನದ ಕುರಿತು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ಅವರ ಹೇಳಿಕೆ ನೀಡಿದ್ದು ಅದಕ್ಕೆ ಬಿಜೆಪಿ ಆಕ್ರೋಶಗೊಂಡಿದೆ. ಪಾಕಿಸ್ತಾನವನ್ನು ಸಹೋದರ ಎಂದು ಕರೆಯುವುದು ಮತ್ತು ಸಶಸ್ತ್ರ ಪಡೆಗಳನ್ನು ಅವಮಾನಿಸುವುದು ಕಾಂಗ್ರೆಸ್‌ನ ಗುರುತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲಾ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವು ಪಾಕಿಸ್ತಾನಿ ಭಯೋತ್ಪಾದನೆಯ ಅಧಿಕೃತ ವಕ್ತಾರ, ರಾಹುಲ್ ಗಾಂಧಿ ಮುಂದೆ ಬಂದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ , ಪಾಕಿಸ್ತಾನಿ ಭಯೋತ್ಪಾದನಾ ಆಳ ರಾಜ್ಯದ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದಾಗಲೆಲ್ಲಾ, 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಕೆಲವು ಕಾಂಗ್ರೆಸ್ ನಾಯಕರು ಬಂದು ಪಾಕಿಸ್ತಾನವನ್ನು ಬೆಂಬಲಿಸಿ ಮಾತನಾಡುತ್ತಾರೆ.

ನವದೆಹಲಿ, ಮೇ 05: ರಫೇಲ್(Rafale) ಯುದ್ಧ ವಿಮಾನವನ್ನು ಆಟಿಕೆ ಎಂದು ಕರೆದ ಕಾಂಗ್ರೆಸ್ ನಾಯಕ ಅಜಯ್ ರಾಯ್(Ajay Rai)ಗೆ ಬಿಜೆಪಿ ತಿರುಗೇಟು ನೀಡಿದೆ. ಕಾಂಗ್ರೆಸ್ ನಾಯಕ ಅಜಯ್ ರೈ ರಫೇಲ್ ಯುದ್ಧ ವಿಮಾನವನ್ನು ಆಟಿಕೆ ಎಂದು ಲೇವಡಿ ಮಾಡಿ, ಅದರ ಮೇಲೆ ನಿಂಬೆ ಮತ್ತು ಮೆಣಸಿನಕಾಯಿ ನೇತುಹಾಕುವ ಮೂಲಕ ಕೇಂದ್ರ ಸರ್ಕಾರವನ್ನು ಟೀಕಿಸಿದರು.
ಕಾಂಗ್ರೆಸ್ ಪಕ್ಷವು ಪಾಕಿಸ್ತಾನಿ ಭಯೋತ್ಪಾದನೆಯ ಅಧಿಕೃತ ವಕ್ತಾರ, ರಾಹುಲ್ ಗಾಂಧಿ ಮುಂದೆ ಬಂದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ , ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದಾಗಲೆಲ್ಲಾ, 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಕೆಲವು ಕಾಂಗ್ರೆಸ್ ನಾಯಕರು ಬಂದು ಪಾಕಿಸ್ತಾನವನ್ನು ಬೆಂಬಲಿಸಿ ಮಾತನಾಡುತ್ತಾರೆ.
24 ಗಂಟೆಗಳ ಹಿಂದೆ ಚರಣ್‌ಜಿತ್ ಸಿಂಗ್ ಚನ್ನಿ ಸರ್ಜಿಕಲ್ ಸ್ಟ್ರೈಕ್‌ಗೆ ಪುರಾವೆ ಕೇಳುತ್ತಿದ್ದರು, ಅವರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡರು. ನಂತರ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಯುಪಿ ಕಾಂಗ್ರೆಸ್ ಅಧ್ಯಕ್ಷರು ನಮ್ಮ ಸಶಸ್ತ್ರ ಪಡೆಗಳನ್ನು ಅಣಕಿಸಿ ಆಟಿಕೆ ವಿಮಾನವನ್ನು ತೋರಿಸುತ್ತಾರೆ ಎಂದು ಬಿಜೆಪಿ ನಾಯಕ ಪ್ರದೀಪ್ ಭಂಡಾರಿ ಹೇಳಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಆರೋಪಿಗಳ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಕೇವಲ ದೊಡ್ಡ ಮಾತುಗಳನ್ನಾಡಿದೆ ಎಂದು ಅಜಯ್ ರಾಯ್ ಭಾನುವಾರ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಸರ್ಕಾರ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿದೆ, ಆದರೆ ಅವು ಹ್ಯಾಂಗರ್‌ನಲ್ಲಿ ಬಿದ್ದಿವೆ ಮತ್ತು ಅವುಗಳ ಮೇಲೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿಗಳು ನೇತಾಡುತ್ತಿವೆ ಎಂದ ರಾಯ್ ರಫೇಲ್ ಎಂದು ಬರೆದು ನಿಂಬೆ-ಮೆಣಸಿನಕಾಯಿ ತೂಗು ಹಾಕಿರುವ ಆಟಿಕೆ ವಿಮಾನವನ್ನು ತೋರಿಸಿದರು.
ಮತ್ತಷ್ಟು ಓದಿ: ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಹಜಾದ್ ಪೂನಾವಾಲಾ ಮಾತನಾಡಿ, ರಫೇಲ್ ಆಟಿಕೆ ವಿಮಾನದ ಮೂಲಕ ಕಾಂಗ್ರೆಸ್ ಪಕ್ಷವು ಭಾರತದ ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯದ ಜೊತೆ ಆಟವಾಡುತ್ತಿದೆ ಎಂದು ಹೇಳಿದರು. ರಾಹುಲ್ ಗಾಂಧಿಯವರ ಆಜ್ಞೆಯ ಮೇರೆಗೆ ಇದನ್ನು ಮಾಡಲಾಗುತ್ತಿದೆ.
#WATCH | Varanasi | Uttar Pradesh Congress President Ajay Rai shows a ‘toy plane’ with Rafale written on it and lemon-chillies hanging in it.
Ajay Rai says, “Terrorist activities have increased in the country, and people are suffering from it. Our youth lost their lives in the… pic.twitter.com/wIwLsa4akD
— ANI (@ANI) May 4, 2025
ಅಜಯ್ ರಾಯ್ ಅವರನ್ನು ರಾಹುಲ್ ಗಾಂಧಿಯ ಅತ್ಯಂತ ಆಪ್ತ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಸರ್ವಪಕ್ಷ ಸಭೆಯಲ್ಲಿ ರಾಹುಲ್ ಗಾಂಧಿ ಅವರು ದೇಶ ಮತ್ತು ಸೈನ್ಯದೊಂದಿಗೆ ನಿಲ್ಲುವುದಾಗಿ ಹೇಳುತ್ತಾರೆ. ಸರ್ವಪಕ್ಷ ಸಭೆಯಿಂದ ಹೊರಬಂದ ತಕ್ಷಣ, ವರಸೆ ಬದಲಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:38 am, Mon, 5 May 25








