AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೇದಿಕೆಯಲ್ಲಿ ಖಾಲಿ ಬೊಕ್ಕೆ ಕೊಟ್ಟ ಕಾಂಗ್ರೆಸ್ ನಾಯಕ, ಇದೇನ್ರಿ ಹೂವೇ ಇಲ್ಲ ಎಂದ ಪ್ರಿಯಾಂಕಾ ಗಾಂಧಿ

ಮಧ್ಯಪ್ರದೇಶದ ಇಂದೋರ್​ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ(Priyanka Gandhi Vadra) ಚುನಾವಣಾ ಜಾಥಾದಲ್ಲಿ ಪಾಲ್ಗೊಂಡಿದ್ದರು. ವೇದಿಕೆ ಮೇಲೆ ಬರಮಾಡಿಕೊಳ್ಳುವ ಸಂದರ್ಭದಲ್ಲಿ ಕಾಂಗ್ರೆಸ್​ ನಾಯಕರೊಬ್ಬರು ಪ್ರಿಯಾಂಕಾ ಗಾಂಧಿಗೆ ಹೂವಿಲ್ಲ ಖಾಲಿ ಬೊಕ್ಕೆಯನ್ನು ಕೊಟ್ಟು ಸ್ವಾಗತಿಸಿದ್ದಾರೆ, ಆಗ ಪ್ರಿಯಾಂಕಾ ಇದೇನ್ರಿ ಖಾಲಿ ಇದೆ ಹೂವೆ ಇಲ್ಲ ಎಂದು ನಗುತ್ತಲೇ ಕೇಳಿದ್ದಾರೆ.

ವೇದಿಕೆಯಲ್ಲಿ ಖಾಲಿ ಬೊಕ್ಕೆ ಕೊಟ್ಟ ಕಾಂಗ್ರೆಸ್ ನಾಯಕ, ಇದೇನ್ರಿ ಹೂವೇ ಇಲ್ಲ ಎಂದ ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿImage Credit source: Free Press Journal
ನಯನಾ ರಾಜೀವ್
|

Updated on: Nov 07, 2023 | 9:05 AM

Share

ಮಧ್ಯಪ್ರದೇಶದ ಇಂದೋರ್​ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ(Priyanka Gandhi Vadra) ಚುನಾವಣಾ ಜಾಥಾದಲ್ಲಿ ಪಾಲ್ಗೊಂಡಿದ್ದರು. ವೇದಿಕೆ ಮೇಲೆ ಬರಮಾಡಿಕೊಳ್ಳುವ ಸಂದರ್ಭದಲ್ಲಿ ಕಾಂಗ್ರೆಸ್​ ನಾಯಕರೊಬ್ಬರು ಪ್ರಿಯಾಂಕಾ ಗಾಂಧಿಗೆ ಹೂವಿಲ್ಲ ಖಾಲಿ ಬೊಕ್ಕೆಯನ್ನು ಕೊಟ್ಟು ಸ್ವಾಗತಿಸಿದ್ದಾರೆ, ಆಗ ಪ್ರಿಯಾಂಕಾ ಇದೇನ್ರಿ ಖಾಲಿ ಇದೆ ಹೂವೆ ಇಲ್ಲ ಎಂದು ನಗುತ್ತಲೇ ಕೇಳಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಇಂದೋರ್-5 ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಪ್ರಿಯಾಂಕಾ ಅವರನ್ನು ವೇದಿಕೆಯಲ್ಲಿ ಸ್ವಾಗತಿಸುತ್ತಿದ್ದಾಗ, ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ಖಾಲಿ ಹೂಗುಚ್ಛವನ್ನು ನೀಡಿದರು. ಈ ಹೂಗುಚ್ಚದಲ್ಲಿ ಕೆಲವೇ ಎಲೆಗಳಿದ್ದವು ಮತ್ತು ಅದರ ಹೂವುಗಳು ಎಲ್ಲೋ ಬಿದ್ದಿದ್ದವು.

ಮತ್ತಷ್ಟು ಓದಿ: ಬಿಳಿ ಲಕೋಟೆ ಬಗ್ಗೆ ಹಸಿ ಸುಳ್ಳು; ಮೋದಿ ಕುರಿತ ಟೀಕೆಗೆ ಪ್ರಿಯಾಂಕಾ ಗಾಂಧಿಗೆ ಬಿಜೆಪಿ ತಿರುಗೇಟು

ಆಗ ಪ್ರಿಯಾಂಕಾ ಇದ್ರಲ್ಲಿ ಹೂವೆ ಇಲ್ಲ ಎಂದು ಹೇಳಿದ್ದಾರೆ, ಇದರಿಂದ ಕಾಂಗ್ರೆಸ್ ನಾಯಕರು ಕೂಡ ಮುಜುಗರ ಅನುಭವಿಸಿದ್ದಾರೆ. ತನ್ನ ಭಾಷಣದಲ್ಲಿ, ಪ್ರಿಯಾಂಕಾ ಈ ಆಸಕ್ತಿದಾಯಕ ಘಟನೆಯನ್ನು ಸ್ವತಃ ಪ್ರಸ್ತಾಪಿಸಿದ್ದಲ್ಲದೆ, ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಗುರಿಯಾಗಿಸಲು ಖಾಲಿ ಪುಷ್ಪಗುಚ್ಚ ಎಂಬ ಪದವನ್ನು ಬಳಸಿದರು.

ನಾನು ವೇದಿಕೆಯ ಮೇಲೆ ಬಂದಾಗ, ಯಾರೋ ನನಗೆ ಹೂಗುಚ್ಚ ನೀಡುವುದನ್ನು ನೀವು ನೋಡಿರಬೇಕು. ಹೂವುಗಳಿರಲಿಲ್ಲ ಮತ್ತು ಅದು ಖಾಲಿಯಾಗಿತ್ತು. ಚುನಾವಣೆಗಳು ಬಂದಾಗ ಅವರು (ಬಿಜೆಪಿ ನಾಯಕರು) ಇದೇ ರೀತಿಯ ಧರ್ಮ, ಜಾತಿ ಮತ್ತು ಘೋಷಣೆಗಳನ್ನು ಮಾಡಿ ನಿಮಗೆ (ಮತದಾರರಿಗೆ) ಹುಸಿ ಭರವಸೆಯನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ