Rahul Gandhi: ಕೇರಳದಲ್ಲಿ ಆಟೋದಲ್ಲೇ ಪ್ರಯಾಣ ಮಾಡಿದ ರಾಹುಲ್ ಗಾಂಧಿ; ಚಾಲಕ ನನ್ನ ಬಳಿ ನೋವು ಹೇಳಿಕೊಂಡರು ಎಂದ ಕಾಂಗ್ರೆಸ್ ನಾಯಕ
Rahul Gandhi Viral Video: ಬಿಜೆಪಿ ಸತತವಾಗಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತಿದೆ. ಹಣವನ್ನೆಲ್ಲ ಅವರ ಸ್ನೇಹವಲಯಕ್ಕೆ ಮೀಸಲಾಗಿಡುತ್ತಿದೆ. ಇಷ್ಟಾದ ಮೇಲೆ ಕೂಡ ಇಲ್ಲಿಗೆ ಬಂದು ನಿಮ್ಮ ಬಳಿ ಮತ ಕೇಳುತ್ತಾರಲ್ಲ? ಅವರಿಗೆ ಎಷ್ಟು ಧೈರ್ಯ ಇರಬೇಡ ! ಎಂದು ಪ್ರಶ್ನಿಸಿದರು.
ತಿರುವನಂತಪುರಂ: ವಿಧಾನಸಭೆ ಚುನಾವಣೆ ಪ್ರಚಾರದ ನಿಮಿತ್ತ ಕೇರಳದಲ್ಲಿ ಇರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾನುವಾರ ಈಸ್ಟರ್ ನಿಮಿತ್ತ ವಯಾನಾಡಿನಲ್ಲಿ ಅನಾಥಮಕ್ಕಳ ಜತೆ ಔತಣಕೂಟ ನಡೆಸಿದ್ದಾರೆ. ಮಕ್ಕಳ ಜತೆ ಊಟ ಮಾಡಿದ ಅವರು, ಈ ವೇಳೆ ಪ್ರಿಯಾಂಕಾ ಗಾಂಧಿಯವರಿಗೆ ವಿಡಿಯೋ ಕಾಲ್ ಕೂಡ ಮಾಡಿದ್ದರು. ಈ ವಿಡಿಯೋ ಕೂಡ ವೈರಲ್ ಆಗಿತ್ತು. ಹಾಗೇ ಇನ್ನೊಂದು ವಿಡಿಯೋ ಕೂಡ ವೈರಲ್ ಆಗಿದ್ದು, ಅದರಲ್ಲಿ ರಾಹುಲ್ ಗಾಂಧಿ ಆಟೋದಲ್ಲಿ ಪ್ರಯಾಣ ಮಾಡಿದ್ದನ್ನು ನೋಡಹುದು.
ಏಪ್ರಿಲ್ 6 ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಕೇರಳದಲ್ಲಿ ಸಕ್ರಿಯ ಪ್ರಚಾರದಲ್ಲಿ ತೊಡಗಿದ್ದಾರೆ. ಹಾಗೇ ನಿನ್ನೆ ಪ್ರಚಾರದ ಕೊನೇ ದಿನವಾಗಿತ್ತು. ಈ ವೇಳೆ ರಾಹುಲ್ ಗಾಂಧಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು, ಹೆಲಿಪ್ಯಾಡ್ಗೆ ತೆರಳಲು ಆಟೋರಿಕ್ಷಾ ಬಳಸಿದ್ದಾರೆ. ಸತತವಾಗಿ ಏರುತ್ತಿರುವ ಇಂಧನ ಬೆಲೆಯನ್ನು ವಿರೋಧಿಸಲು ಅವರು ಈ ರೀತಿ ಮಾಡಿದ್ದಾರೆ.
ಕೇರಳದ ನೆಮಾಮ್ ನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಅವರು ಸಂಜೆ ಸ್ಥಳಕ್ಕೆ ಆಟೋ ಕರೆಸಿ ಅಚ್ಚರಿ ಮೂಡಿಸಿದರು. ನೆಮಾಮ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಕೆ.ಮುರಳೀಧರನ್ ಸ್ಪರ್ಧಿಸಿದ್ದಾರೆ. 2016ರ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿತ್ತು. ನೆಮಾಮ್ಗೆ ಬರುವಾಗಲೂ ಆಟೋದಲ್ಲೇ ಬಂದಿರುವ ರಾಹುಲ್ ಗಾಂಧಿ, ರೋಡ್ ಶೋ ನಡೆಸಿದ ಬಳಿಕ ಮಾತನಾಡಿ, ನಾನು ಬಂದ ಆಟೋ ಚಾಲಕನನ್ನು ಮಾತನಾಡಿಸಿದೆ. ಅವರಿಗೆ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಇಂಧನ ಬೆಲೆ ಏರಿಕೆಯಿಂದ ಸಂಕಷ್ಟಪಡುತ್ತಿರುವುದಾಗಿ ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಬಿಜೆಪಿ ಸತತವಾಗಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತಿದೆ. ಹಣವನ್ನೆಲ್ಲ ಅವರ ಸ್ನೇಹವಲಯಕ್ಕೆ ಮೀಸಲಾಗಿಡುತ್ತಿದೆ. ಇಷ್ಟಾದ ಮೇಲೆ ಕೂಡ ಇಲ್ಲಿಗೆ ಬಂದು ನಿಮ್ಮ ಬಳಿ ಮತ ಕೇಳುತ್ತಾರಲ್ಲ? ಅವರಿಗೆ ಎಷ್ಟು ಧೈರ್ಯ ಇರಬೇಡ ! ಎಂದು ಪ್ರಶ್ನಿಸಿದರು. ಅಲ್ಲಿಂದ ಕಲಪೆಟ್ಟಾದ ಹೆಲಿಪ್ಯಾಡ್ಗೆ ತೆರಳುವಾಗಲೂ ಆಟೋವನ್ನು ಬಳಸಿದ್ದಾರೆ.
Shri. @RahulGandhi rides an auto on his way to the helipad at Kalpetta,Wayanad.#UDFWinningKerala pic.twitter.com/1ZugmuIiBX
— Congress Kerala (@INCKerala) April 4, 2021
ಇದನ್ನೂ ಓದಿ: ಅನಾಥಾಶ್ರಮ ಮಕ್ಕಳ ಜೊತೆ ಈಸ್ಟರ್ ಹಬ್ಬದ ಭೋಜನ ಸವಿದು ಪ್ರಿಯಾಂಕಾ ಗಾಂಧಿಗೆ ವಿಡಿಯೋ ಕಾಲ್ ಮಾಡಿದ ರಾಹುಲ್ ಗಾಂಧಿ
ಭಾರತದ ಬಗ್ಗೆ ಅಮೆರಿಕ ಮೌನತಾಳಿದೆ: ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಬಿಜೆಪಿ ಗರಂ
Published On - 11:52 am, Mon, 5 April 21