AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರಪತಿ ದ್ರೌಪದಿ ಮುರ್ಮು ಬಗ್ಗೆ ಚಮ್ಚಾಗಿರಿ ಪದ ಬಳಸಿದ ಕಾಂಗ್ರೆಸ್ ನಾಯಕ; ಬಿಜೆಪಿಯಿಂದ ಟೀಕೆ

ಯಾವುದೇ ದೇಶಕ್ಕೆ ದ್ರೌಪದಿ ಮುರ್ಮು ಅವರಂಥಾ ರಾಷ್ಟ್ರಪತಿ ಸಿಗಬಾರದು. ಚಮ್ಚಾಗಿರಿಗೂ ಒಂದು ಮಿತಿ ಇದೆ. ಶೇ70ರಷ್ಟು ಜನರು ಗುಜರಾತಿನ ಉಪ್ಪು ತಿನ್ನುತ್ತಾರೆ ಎಂದು ಅವರು ಹೇಳುತ್ತಾರೆ. ಬರೀ ಉಪ್ಪು ತಿಂದು ಬದುಕಿ ನೋಡಲಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಬಗ್ಗೆ ಚಮ್ಚಾಗಿರಿ ಪದ ಬಳಸಿದ ಕಾಂಗ್ರೆಸ್ ನಾಯಕ; ಬಿಜೆಪಿಯಿಂದ ಟೀಕೆ
ದ್ರೌಪದಿ ಮುರ್ಮು
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Oct 06, 2022 | 3:17 PM

Share

ದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಬಗ್ಗೆ ಕಾಂಗ್ರೆಸ್ ನೇತಾರ ಉದಿತ್ ರಾಜ್ (Udit Raj) ‘ಚಮ್ಚಾಗಿರಿ’ (Chamchagiri) ಎಂಬ ಪದ ಬಳಸಿದ್ದನ್ನು ಬಿಜೆಪಿ ನಾಯಕ ಶೆಹಜಾದ್ ಪೂನವಲ್ಲಾ ತೀವ್ರವಾಗಿ ಖಂಡಿಸಿದ್ದಾರೆ. ಯಾವುದೇ ದೇಶಕ್ಕೆ ದ್ರೌಪದಿ ಮುರ್ಮು ಅವರಂಥಾ ರಾಷ್ಟ್ರಪತಿ ಸಿಗಬಾರದು. ಚಮ್ಚಾಗಿರಿಗೂ ಒಂದು ಮಿತಿ ಇದೆ. ಶೇ70ರಷ್ಟು ಜನರು ಗುಜರಾತಿನ ಉಪ್ಪು ತಿನ್ನುತ್ತಾರೆ ಎಂದು ಅವರು ಹೇಳುತ್ತಾರೆ. ಬರೀ ಉಪ್ಪು ತಿಂದು ಬದುಕಿ ನೋಡಲಿ, ಆಗ ಅವರಿಗೆ ಗೊತ್ತಾಗುತ್ತದೆ ಎಂದು ಉದಿತ್ ರಾಜ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪೂನವಲ್ಲಾ, ಕಾಂಗ್ರೆಸ್ ಮತ್ತೆ ಕೆಳಮಟ್ಟಕ್ಕೆ ಇಳಿದಿದೆ. ದೇಶದ ಮೊದಲ ಆದಿವಾಸಿ ರಾಷ್ಟ್ರಪತಿ ಬಗ್ಗೆ ಉದಿತ್ ರಾಜ್ ಕೆಟ್ಟ ಪದ ಬಳಕೆ ಮಾಡಿದ್ದಾರೆ. ಆದಿವಾಸಿ ಸಮಾಜಕ್ಕೆ ಮಾಡಿದ ಈ ಅವಮಾನವನ್ನು ಕಾಂಗ್ರೆಸ್ ಬೆಂಬಲಿಸುತ್ತದೆಯೇಎಂದು ಅವರು ಕೇಳಿದ್ದಾರೆ. ಅಜೋಯ್ ಕುಮಾರ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ದುಷ್ಟೆ ಎಂದು ಕರೆದ ನಂತರ ಅಧೀರ್ ರಂಜನ್ ಚೌಧರಿ ಅವರು “ರಾಷ್ಟ್ರಪತ್ನಿ” ಎಂಬ ಪದವನ್ನು ಬಳಸಿದ್ದರು. ಇದೀಗ ಕಾಂಗ್ರೆಸ್ ಹೊಸ ಕೆಳಮಟ್ಟಕ್ಕೆ ಇಳಿದಿದೆ! ಪ್ರಥಮ ಮಹಿಳೆ ಆದಿವಾಸಿ ಆಗಿರುವ ರಾಷ್ಟ್ರಪತಿಗೆ ಉದಿತ್ ರಾಜ್ ಸ್ವೀಕಾರಾರ್ಹವಲ್ಲದ ಭಾಷೆಯನ್ನು ಬಳಸುತ್ತಾರೆ. ಆದಿವಾಸಿ ಸಮಾಜದ ಈ ಅವಮಾನವನ್ನು ಕಾಂಗ್ರೆಸ್ ಅನುಮೋದಿಸುತ್ತದೆಯ” ಎಂದು ಪೂನಾವಲ್ಲ ಟ್ವೀಟ್ ಮಾಡಿದ್ದಾರೆ.

ಸೋಮವಾರ ಗಾಂಧಿನಗರದಲ್ಲಿ ಗುಜರಾತ್ ಸರ್ಕಾರ ಆಯೋಜಿಸಿದ್ದ ನಾಗರಿಕ ಸತ್ಕಾರ ಸಮಾರಂಭದಲ್ಲಿ ರಾಷ್ಟ್ರಪತಿ ಮುರ್ಮು ಅವರು ಗುಜರಾತ್ ದೇಶದ ಶೇ.76 ರಷ್ಟು ಉಪ್ಪನ್ನು ಉತ್ಪಾದಿಸುತ್ತಿದೆ. ಇಲ್ಲಿನ ಉಪ್ಪನ್ನು ದೇಶದ ಎಲ್ಲರೂ ಬಳಸುತ್ತಾರೆ (ಯೇ ಕಹಾ ಜಾ ಸಕ್ತಾ ಹೈ ಕಿ ಸಭಿ ದೇಶವಾಸಿ ಗುಜರಾತ್ ಕಾ ನಮಕ್ ಖಾತೇ ಹೈ) ಎಂದಿದ್ದರು.

ಜುಲೈ 13 ರಂದು ಕಾಂಗ್ರೆಸ್ ನಾಯಕ ಅಜೋಯ್ ಕುಮಾರ್ ಅವರು ದ್ರೌಪದಿ ಮುರ್ಮು “ಭಾರತದ ಅತ್ಯಂತ ದುಷ್ಟ ತತ್ವ” ವನ್ನು ಪ್ರತಿನಿಧಿಸುತ್ತಾರೆ. ಅವರನ್ನು “ಆದಿವಾಸಿಗಳ ಸಂಕೇತ” ಎಂದು ಮಾಡಬಾರದು ಎಂದು ಹೇಳಿದ್ದರು. ಆದಾಗ್ಯೂ, ಮುರ್ಮು ಅವರು ಒಳ್ಳೆಯ ಮಹಿಳೆ. ಎನ್​​ಡಿಎ ನಿಲುವಿನಲ್ಲಿ ಸಮಸ್ಯೆ ಇದೆ. ನಾನು ಅದರ ಬಗ್ಗೆ ಹೇಳಿದ್ದೇವೆ. ದ್ರೌಪದಿ ಮುರ್ಮು ಬಗ್ಗೆ ತಾನು ನೀಡಿರುವ ಹೇಳಿಕೆಯ ತಿರುಚಿದ ವಿಡಿಯೊವನ್ನು ಅಮಿತ್ ಮಾಳವೀಯ ಹಂಚಿಕೊಂಡಿದ್ದಾರೆ ಎಂದು ಕುಮಾರ್ ಆರೋಪಿಸಿದ್ದಾರೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ತಿರುಚಿದ ವಿಡಿಯೊ ಶೇರ್ ಮಾಡಿದ್ದಾರೆ. ಒಂದು ನಿಮಿಷದ ವಿಡಿಯೊವನ್ನು 17 ಸೆಕೆಂಡ್ ಗೆ ಇಳಿಸಿ ತಿರುಚಲಾಗಿದೆ. ಇದನ್ನು ನಾವು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಅಜೋಯ್ ಕುಮಾರ್ ಬಿಜೆಪಿ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದರು.

ಅದೇ ತಿಂಗಳು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಹೇಳಿ ವಿವಾದಕ್ಕೀಡಾಗಿದ್ದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಬಿಜೆಪಿ ಸಂಸದರು ರಾಷ್ಟ್ರಪತಿಯವರ ಮೇಲೆ ಮಾಡಿದ ಆಪಾದನೆಗಾಗಿ ಕಾಂಗ್ರೆಸ್ ನಾಯಕ ಮತ್ತು ಪಕ್ಷದಿಂದ “ಕ್ಷಮೆಯಾಚಿಸುವಂತೆ” ಕೋರಿದರು. ಭಾರೀ ಟೀಕೆಗಳನ್ನು ಎದುರಿಸಿದ ನಂತರ, ಚೌಧರಿ ಮುರ್ಮು ಅವರ ಕ್ಷಮೆಯಾಚಿಸಿದ್ದರು.

ನನ್ನ ಹೇಳಿಕೆ ವೈಯಕ್ತಿಕ, ಪಕ್ಷದ್ದಲ್ಲ: ಉದಿತ್ ರಾಜ್

ಇದು ಅವರ ವೈಯಕ್ತಿಕ ಹೇಳಿಕೆಗಳಾಗಿದ್ದು, ಪಕ್ಷದ ನಿಲುವು ಎಂದು ತಿಳಿದುಕೊಳ್ಳಬಾರದು ಎಂದು ಉದಿತ್ ರಾಜ್ ಹೇಳಿದ್ದಾರೆ. “ಆಕೆಯ ಉಮೇದುವಾರಿಕೆ ಮತ್ತು ಪ್ರಚಾರವು ಆದಿವಾಸಿ ಹೆಸರಿನಲ್ಲಿತ್ತು, ಇದರರ್ಥ ಅವರು ಇನ್ನೂ ಆದಿವಾಸಿ ಅಲ್ಲ ಎಂದಲ್ಲ. ಎಸ್‌ಸಿ/ಎಸ್‌ಟಿ ಉನ್ನತ ಸ್ಥಾನಕ್ಕೆ ಬಂದಾಗ, ಅವರು ತಮ್ಮ ಸಮುದಾಯಗಳನ್ನು ಕಡೆಗಣಿಸಿ ಸುಮ್ಮನಿದ್ದುಬಿಡುತ್ತಾರೆ ಎಂದಿದ್ದಾರೆ.