ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಜೀವ್ ಸಾತವ್ ಕೊರೊನಾ ಸೋಂಕಿಗೆ ಬಲಿ
ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ರಾಜೀವ್ ಸಾತವ್ ಅವರು ಕೊರೊನಾ ಸೋಂಕು ಹಿನ್ನೆಲೆ ನಿಧನರಾಗಿದ್ದಾರೆ.
ದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ರಾಜೀವ್ ಸಾತವ್ ಅವರು ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ. ಏಪ್ರಿಲ್ 23ರಂದು ಕೊವಿಡ್ ಪಾಸಿಟಿವ್ ವರದಿ ಬಳಿಕ ಪುಣೆಯ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು (ಮೇ 16) ಕೊನೆಯುಸಿರೆಳೆದಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲಿಗರಾಗಿ ಗುರುತಿಸಲ್ಪಟ್ಟ ರಾಜೀವ್ ಸಾತವ್ ಅವರ ನಿಧನದ ವಿಷಯ ತಿಳಿದ ರಾಹುಲ್ ಗಾಂಧಿಯವರು ಸಂತಾಪ ಸೂಚಿಸಿದ್ದಾರೆ. ‘ನನ್ನ ಸ್ನೇಹಿತ ರಾಜೀವ್ ಸಾತವ್ ಅವರನ್ನು ಕಳೆದುಕೊಂಡಿರುವುದು ನನಗೆ ತುಂಬಾ ಬೇಸರವಾಗಿದೆ. ಕಾಂಗ್ರೆಸ್ನ ಆದರ್ಶಗಳನ್ನು ಸಾಕಾರಗೊಳಿಸುವಲ್ಲಿ ಅವರ ಪಾತ್ರ ದೊಡ್ಡದು. ಅವರ ನಿಧನದ ವಿಷಯ ನಮಗೆ ಮತ್ತು ಅವರ ಕುಟುಂಬಕ್ಕೆ ದೊಡ್ಡ ನಷ್ಟ ಉಂಟುಮಾಡಿದೆ’ ಎಂದು ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
I’m very sad at the loss of my friend Rajeev Satav. He was a leader with huge potential who embodied the ideals of the Congress.
It’s a big loss for us all. My condolences and love to his family. pic.twitter.com/mineA81UYJ
— Rahul Gandhi (@RahulGandhi) May 16, 2021
ವಿಷಯ ತಿಳಿದ ಮಹಾರಾಷ್ಟ್ರದ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ನಾನಾ ಪಟೋಲೆ, ‘ಇದು ಅತ್ಯಂತ ಆಘಾತಕಾರಿ ಸುದ್ದಿ. ನಾನು ನನ್ನ ಕಿರಿಯ ಸಹೋದರನನ್ನು ಇಂದು ಕಳೆದುಕೊಂಡಿದ್ದೇನೆ. ಇದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ತಂದೊಡ್ಡಿದೆ. ಈ ನಷ್ಟಕ್ಕೆ ಕೇವಲ ಪದಗಳು ನ್ಯಾಯ ಒದಗಿಸಲು ಸಾಧ್ಯವಿಲ್ಲ. ಇಷ್ಟು ಚಿಕ್ಕ ವಯಸ್ಸಿಗೆ ಅವರು ನಿಧನರಾಗಿದ್ದಾರೆ ಎಂಬುದು ವಿಷಾಧನೀಯ’ ಎಂದು ಬೇಸರ ಹೊರಹಾಕಿದ್ದಾರೆ.
Published On - 11:12 am, Sun, 16 May 21