ಇಂದೂ ಏರಿದ ಪೆಟ್ರೋಲ್​, ಡೀಸೆಲ್​ ದರ; ಬೆಂಗಳೂರಿನಲ್ಲಿ ದರ ಎಷ್ಟಿದೆ? ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ನಗರ ಯಾವುದು?

Petrol Diesel Rate Today: : ಇಂದು ಭಾನುವಾರ ಪೆಟ್ರೋಲ್​ ಮತ್ತು ಡೀಸೆಲ್​ ದರ ಏರಿಕೆಯಾಗಿದೆ. ಈ ಮೂಲಕ ಬೆಂಗಳೂರು ಸೇರಿ ಪ್ರಮುಖ ಮೆಟ್ರೋ​ ನಗರಗಳಲ್ಲಿ ತೈಲ ದರ ಎಷ್ಟಾಗಿದೆ? ಎಂಬುದರ ವಿವರ ಇಲ್ಲಿದೆ.

ಇಂದೂ ಏರಿದ ಪೆಟ್ರೋಲ್​, ಡೀಸೆಲ್​ ದರ; ಬೆಂಗಳೂರಿನಲ್ಲಿ ದರ ಎಷ್ಟಿದೆ? ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ನಗರ ಯಾವುದು?
ಪ್ರಾತಿನಿಧಿಕ ಚಿತ್ರ
Follow us
shruti hegde
| Updated By: Digi Tech Desk

Updated on:May 17, 2021 | 8:45 AM

ದೆಹಲಿ: ಪೆಟ್ರೋಲ್​ ಮತ್ತು ಡೀಸೆಲ್​ ದರ ಒಂದು ದಿನದ ವಿರಾಮದ ನಂತರ ಮತ್ತೆ ಏರಿಕೆಯಾಗಿದೆ. ಪ್ರತಿ ಲೀಟರ್​ ಪೆಟ್ರೋಲ್​ ದರದಲ್ಲಿ 22 ರಿಂದ 24 ಪೈಸೆ ಏರಿಕೆಯಾಗಿದೆ. ಅದೇ ರೀತಿ ಪ್ರತಿ ಲೀಟರ್​ ಡೀಸೆಲ್​ ದರದಲ್ಲಿ 27 ರಿಂದ 29 ಪೈಸೆ ಹೆಚ್ಚಳವಾಗಿದೆ. ಕಳೆದ ಶುಕ್ರವಾರ ಪೆಟ್ರೋಲ್​ ಮತ್ತು ಡೀಸೆಲ್​ ದರ ಏರಿಕೆಯಾಗಿತ್ತು. ನಿನ್ನೆ ಶನಿವಾರ ಇಂಧನ ದರದಲ್ಲಿ ಯಾವುದೇ ಬದಲಾವಣೆಗಳು ಇರಲಿಲ್ಲ. ಅದಾದ ನಂತರ ಇಂದು ಭಾನುವಾರ ಮತ್ತೆ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಏರಿಕೆಯಾಗಿದೆ.

ಬೆಲೆ ಏರಿಕೆಯ ಬಳಿಕ ಬೆಂಗಳೂರು ನಗರದಲ್ಲಿ ಒಂದು ಲೀಟರ್​ ಪೆಟ್ರೋಲ್​ ದರ 95.33 ರೂಪಾಯಿಗೆ ತಲುಪಿದೆ. ಹಾಗೆಯೇ ಡೀಸೆಲ್​ ದರ 87.92 ರೂಪಾಯಿ ಹೆಚ್ಚಳವಾಗಿದೆ. ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 92.58 ರೂಪಾಯಿ ಆಗಿದೆ. ಅದೇ ರೀತಿ ಪ್ರತಿ ಲೀಟರ್​ ಡೀಸೆಲ್​ ದರ 83.22 ರೂಪಾಯಿ ಆಗಿದೆ. ಇತರ ಪ್ರಮುಖ ಮೆಟ್ರೋ ನಗರಗಳಿಗೆ ಹೋಲಿಸಿದರೆ ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಒಂದು ಲೀಟರ್​ ಪಟ್ರೋಲ್ ದರ 98.88 ರೂಪಾಯಿಗೆ ತಲುಪಿದೆ. ಹಾಗೂ ತೈಲ ಬೆಲೆ ಹೆಚ್ಚಳ ಹಿಗೆಯೇ ಮುಂದುವರೆದರೆ ಮುಂಬೈ ನಗರದಲ್ಲಿ ಪೆಟ್ರೋಲ್​ ದರ 100ರ ಗಡಿ ದಾಟುವುದರಲ್ಲಿ ಯಾವುದೇ ಸಂದೇಹವಿಲ್ಲ. ಡೀಸೆಲ್​ ದರವೂ ಸಹ ಗರಿಷ್ಠ ಮಟ್ಟದಲ್ಲಿ ದಾಖಲೆಯಾಗಿದ್ದು ಒಂದು ಲೀಟರ್ ಡೀಸೆಲ್​ ದರ 90.40 ರೂಪಾಯಿ ಆಗಿದೆ.

ಇನ್ನು, ಕೊಲ್ಕತ್ತಾದಲ್ಲಿ ಒಂದು ಲೀಟರ್​ ಪೆಟ್ರೋಲ್​ ದರ 92.67 ರೂಪಾಯಿ ತಲುಪಿದೆ. ಹಾಗೆಯೇ ಒಂದು ಲೀಟರ್​ ಡೀಸೆಲ್​ ದರ 86.06 ರೂಪಾಯಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 94.31 ರೂಪಾಯಿಗೆ ಏರಿಕೆಯಾಗಿದ್ದರೆ, ಪ್ರತಿ ಲೀಟರ್​ ಡೀಸೆಲ್​ ದರ 88.07 ರೂಪಾಯಿಗೆ ಹೆಚ್ಚಳವಾಗಿದೆ. ಇನ್ನು ರಾಜಸ್ಥಾನ ಶ್ರೀಗಂಗನಗರದಲ್ಲಿ ಪೆಟ್ರೋಲ್​ ದರ ಒಂದು ಲೀಟರ್​ಗೆ 103.27 ರೂಪಾಯಿಗೆ ಮಾರಾಟವಾಗುತ್ತಿದೆ. ದರ ಏರಿಕೆಯ ಮೂಲಕ ಪ್ರತಿ ಲೀಟರ್​ ಡೀಸೆಲ್​ ದರ 95.70 ರೂಪಾಯಿ ಆಗಿದೆ. ಮೇ 4 ರಿಂದ ಮೇ 16 ರ ವರೆಗೆ ಒಂಭತ್ತು ಬಾರಿ ತೈಲ ದರ ಏರಿಸಲಾಗಿದೆ. ಆದರೆ, ಕಳೆದ ತಿಂಗಳು ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬೆಲೆಗಳು ಸ್ಥಿರವಾಗಿದ್ದವು.

ಪ್ರತಿನಿತ್ಯವೂ ಪರಿಷ್ಕರಿಸಿದ ತೈಲ ದರವನ್ನು ಬೆಳಿಗ್ಗೆ 6 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಗೆ ಅಬಕಾರಿ ಸುಂಕ, ಇತರ ತೆರಿಗೆಗಳು ಸೇರಿ ಇಂಧನ ದರ ಏರಿಕೆಯಾಗುತ್ತದೆ. ಈ ಕೆಲವು ಮಾನದಂಡಗಳ ಆಧಾರದ ಮೇಲೆ ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್​ ದರ ಮತ್ತು ಡೀಸೆಲ್​ ದರವನ್ನು ನಿಗದಿಪಡಿಸುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್‌ನ ಚಿಲ್ಲರೆ ಬೆಲೆಯ ಶೇಕಡಾ 60 ಮತ್ತು ಡೀಸೆಲ್ ಬೆಲೆಯಲ್ಲಿ ಶೇ 54 ರಷ್ಟು ಸಂಗ್ರಹಿಸುತ್ತವೆ. ಇದರಲ್ಲಿ ಕೇಂದ್ರವು ಪೆಟ್ರೋಲ್‌ಗೆ 32.90 ರೂಪಾಯಿ ಮತ್ತು ಡೀಸೆಲ್‌ಗೆ 31.80 ರೂಪಾಯಿ ಅಬಕಾರಿ ಸುಂಕವನ್ನು ವಿಧಿಸುತ್ತದೆ.

ವಿವಿಧ ನಗರದಲ್ಲಿ ಪೆಟ್ರೋಲ್​ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html

Published On - 8:33 am, Sun, 16 May 21