ದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯತಿಥಿಯಂದು (Indira Gandhi death anniversary) ಕಾಂಗ್ರೆಸ್ ಪಕ್ಷ ಮತ್ತು ಹಲವಾರು ನಾಯಕರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಅವರು ನವದೆಹಲಿಯಲ್ಲಿ ಇಂದಿರಾ ಗಾಂಧಿ ಅವರ ಸ್ಮಾರಕ “ಶಕ್ತಿ ಸ್ಥಳ” (Shakti Sthal)ದಲ್ಲಿ ಪುಷ್ಪ ನಮನ ಸಲ್ಲಿಸುವ ಸಂದರ್ಭದಲ್ಲಿ ಇಂದಿರಾಗಾಂಧಿ ನಾರಿಶಕ್ತಿಗೆ ಉತ್ತಮ ಉದಾಹರಣೆ ಎಂದು ಶ್ಲಾಘಿಸಿದರು. 1984ರಲ್ಲಿ ಇದೇ ದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರ ಇಬ್ಬರು ಭದ್ರತಾ ಸಿಬ್ಬಂದಿಯಿಂದ ಹತ್ಯೆಗೀಡಾಗಿದ್ದರು.
ನನ್ನ ಅಜ್ಜಿ ಕೊನೆಯ ಕ್ಷಣದವರೆಗೂ ನಿರ್ಭೀತಿಯಿಂದ ದೇಶಕ್ಕೆ ಸೇವೆ ಸಲ್ಲಿಸಿದರು ಅವರ ಜೀವನ ನಮಗೆ ಸ್ಫೂರ್ತಿಯ ಮೂಲವಾಗಿದೆ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. “ಮಹಿಳಾ ಶಕ್ತಿಯ ಅತ್ಯುತ್ತಮ ಉದಾಹರಣೆ, ಇಂದಿರಾ ಗಾಂಧಿಯವರ ಹುತಾತ್ಮ ದಿನದಂದು ಅವರಿಗೆ ನಮ್ರ ಗೌರವಗಳು” ಎಂದು ರಾಹುಲ್ ಹೇಳಿದ್ದಾರೆ.
मेरी दादी अंतिम घड़ी तक निडरता से देश सेवा में लगी रहीं- उनका जीवन हमारे लिए प्रेरणा स्त्रोत है।
नारी शक्ति की बेहतरीन उदाहरण श्रीमती इंदिरा गांधी जी के बलिदान दिवस पर विनम्र श्रद्धांजलि। pic.twitter.com/IoElhOswji
— Rahul Gandhi (@RahulGandhi) October 31, 2021
ಕಾಂಗ್ರೆಸ್ ಪಕ್ಷವೂ ಮಾಜಿ ಪ್ರಧಾನಿ ದೇಶಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದೆ. “ಅವರು ಶಕ್ತಿಯನ್ನು ಪ್ರತಿನಿಧಿಸಿದಳರು. ತ್ಯಾಗವನ್ನು ಸಾಕಾರಗೊಳಿಸಿದರು, ಸೇವೆಯನ್ನು ವ್ಯಕ್ತಿಗತಗೊಳಿಸಿದಳು. ಭಾರತದ ಉಕ್ಕಿನ ಮಹಿಳೆ, ನಮ್ಮ ಮೊದಲ ಮಹಿಳಾ ಪ್ರಧಾನ ಮಂತ್ರಿ, ನಿಜವಾದ ಭಾರತ ರತ್ನ, ಶ್ರೀಮತಿ ಇಂದಿರಾ ಗಾಂಧಿ ಅವರಿಗೆ ಶತಕೋಟಿ ನಮಸ್ಕಾರಗಳು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
Shri @RahulGandhi pays his tribute to former PM Smt. Indira Gandhi at Shakti Stal on the 37th anniversary of her martyrdom. pic.twitter.com/oMEqnuUunm
— Congress (@INCIndia) October 31, 2021
#RememberTheMartyr pic.twitter.com/vnwrQc9oko
— Shashi Tharoor (@ShashiTharoor) October 31, 2021
ಹಿರಿಯ ನಾಯಕ ಮತ್ತು ಸಂಸದ ಶಶಿ ತರೂರ್ ಕೂಡ ಇಂದಿರಾ ಗಾಂದಿ ಚಿತ್ರವನ್ನು ಹಂಚಿಕೊಂಡಿದ್ದು ಹುತಾತ್ಮರ ನೆನಪು ಎಂದು ಬರೆದಿದ್ದಾರೆ.
ಇದನ್ನೂ ಓದಿ: Puneeth Rajkumar: ಪುನೀತ್ ಬಗ್ಗೆ ಅಲ್ಲು ಅರ್ಜುನ್ ಭಾವುಕ ಮಾತು; ತೆಲುಗು ಸಿನಿಮಾ ವೇದಿಕೆಯಲ್ಲಿ ಮೌನಾಚರಣೆ