ಬ್ಯಾಂಕ್ ಉದ್ಯೋಗಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಸ್ಥಳದಲ್ಲಿ ಸಿಕ್ಕ ನೋಟ್ನಲ್ಲಿ ಐಪಿಎಸ್ ಅಧಿಕಾರಿ ಹೆಸರು !
ಶ್ರದ್ಧಾ ಗುಪ್ತಾ 2015ರಲ್ಲಿ ಕ್ಲರ್ಕ್ ಆಗಿ ಬ್ಯಾಂಕ್ಗೆ ಸೇರ್ಪಡೆಯಾಗಿದ್ದರು. ಆದರೆ ನಂತರ ಡಿಪಾರ್ಟಮೆಂಟಲ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಬಡ್ತಿ ಪಡೆದಿದ್ದರು. 2018ರಿಂದಲೂ ಫೈಜಾಬಾದ್ನಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಈಗಂತೂ ಡೆಪ್ಯೂಟಿ ಮ್ಯಾನೇಜರ್ ಆಗಿದ್ದರು.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬ್ಯಾಂಕ್ವೊಂದರ ಮಹಿಳಾ ಉದ್ಯೋಗಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೀಗ ಸೋಷಿಯಲ್ ಮೀಡಿಯಾದಲ್ಲಿ ವಿಪರೀತ ವೈರಲ್ ಆಗುತ್ತಿದ್ದು, ಆಕೆಯ ಸಾವಿಗೆ ನ್ಯಾಯ ಬೇಕೆಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಅಯೋಧ್ಯೆಯಲ್ಲಿರುವ ಪಂಜಾಬ್ ನ್ಯಾಶನಲ್ ಬ್ಯಾಂಕ್ ಶಾಖೆಯ ಉದ್ಯೋಗಿ ಶ್ರದ್ಧಾ ಗುಪ್ತಾ(32) ಎಂಬುವರು ತಮ್ಮ ಮನೆಯಲ್ಲಿ ಅಕ್ಟೋಬರ್ 30ರಂದು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆ ಎಂದು ಹೇಳಲಾಗುತ್ತಿದ್ದರೂ, ಆಕೆಯ ಕಾಲು ನೆಲಕ್ಕೆ ತಾಗುವಂತೆ ಇದ್ದು ಬಾಗಿದೆ. ಹಾಗಾಗಿ ಕೊಲೆ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪೋಸ್ಟ್ ಮಾರ್ಟಮ್ ವರದಿ ಬಂದ ನಂತರವಷ್ಟೇ ಮುಂದಿನ ಮಾಹಿತಿ ನೀಡುವುದಾಗಿಯೂ ಹೇಳಿದ್ದಾರೆ.
ಸೂಸೈಡ್ ನೋಟ್ನಲ್ಲಿ ಐಪಿಎಸ್ ಅಧಿಕಾರಿ ಹೆಸರು ಈ ಪ್ರಕರಣ ಬಹುಮುಖ್ಯ ಎನ್ನಿಸಿಕೊಳ್ಳಲು ಕಾರಣ ಶ್ರದ್ಧಾ ಗುಪ್ತಾ ಮೃತಪಟ್ಟ ಜಾಗದಲ್ಲಿ ಸಿಕ್ಕ ಒಂದು ಬರಹ. ಒಂದು ಚಿಕ್ಕ ಕಾಗದದಲ್ಲಿ ಅವರು ಸೂಸೈಡ್ ನೋಟ್ ಬರೆದಿದ್ದಾರೆ. ಅದರಲ್ಲಿ ಈ ಹಿಂದೆ ಅಯೋಧ್ಯೆಯಲ್ಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP)ಯಾಗಿದ್ದ ಆಶೀಶ್ ತಿವಾರಿ ಎಂಬುವರು ಹೆಸರು, ಆಕೆಯ ಮಾಜಿ ಪ್ರಿಯಕರ ವಿವೇಕ್ ಗುಪ್ತಾ ಮತ್ತು ಫೈಜಾಬಾದ್ನಲ್ಲಿ ಪೊಲೀಸ್ ಆಗಿರುವ ಅನಿಲ್ ರಾವತ್ ಎಂಬುವರ ಹೆಸರು ಉಲ್ಲೇಖವಿದೆ. ಆದರೆ ಈ ಮೂವರ ವಿರುದ್ಧ ಮಾಡಿದ ಆರೋಪ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಹಾಲಿನವನೇ ಎಚ್ಚರಿಸಿದ್ದು ಶ್ರದ್ಧಾ ಗುಪ್ತಾ 2015ರಲ್ಲಿ ಕ್ಲರ್ಕ್ ಆಗಿ ಬ್ಯಾಂಕ್ಗೆ ಸೇರ್ಪಡೆಯಾಗಿದ್ದರು. ಆದರೆ ನಂತರ ಡಿಪಾರ್ಟಮೆಂಟಲ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಬಡ್ತಿ ಪಡೆದಿದ್ದರು. 2018ರಿಂದಲೂ ಫೈಜಾಬಾದ್ನಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಈಗಂತೂ ಡೆಪ್ಯೂಟಿ ಮ್ಯಾನೇಜರ್ ಆಗಿದ್ದರು. ಮೂಲತಃ ಲಖನೌದ ರಾಜಾಜಿಪುರಂನವರಾದ ಅವರು ಅವಿವಾಹಿತರು. ಬ್ಯಾಂಕ್ ಶಾಖೆಯಿದ್ದಲ್ಲೇ ಮನೆ ಮಾಡಿದ್ದ ಅವರು ಆಗಾಗ ತಮ್ಮ ಮನೆಗೆ ಭೇಟಿ ಕೊಡುತ್ತಿದ್ದರು. ಶನಿವಾರ ಫೈಜಾಬಾದ್ನಲ್ಲಿರುವ ಅವರ ಮನೆಗೆ ಮುಂಜಾನೆ ಹಾಲು ಕೊಡುವವ ಬಂದಿದ್ದ. ಮೂರ್ನಾಲ್ಕು ಬಾರಿ ಬಾಗಿಲು ಬಡಿದಾಗಲೂ ಯಾರೂ ತೆರೆಯಲಿಲ್ಲ. ಅದನ್ನು ಆತ ಮನೆಯ ಮಾಲೀಕನಿಗೆ ತಿಳಿಸಿದ. ಬಾಗಿಲು ಒಡೆದು ನೋಡಿದಾಗ ಶ್ರದ್ಧಾ ಗುಪ್ತಾ ಹೆಣ ಕಂಡಿತ್ತು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಶೈಲೇಶ್ ಪಾಂಡೆ ವಿವರಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಶ್ರದ್ಧಾ ಗುಪ್ತಾ ಸಾವಿನ ಬೆನ್ನಲ್ಲೇ ಆಕೆಯ ಕೆಲ ಸಹೋದ್ಯೋಗಿಗಳು ಟ್ವಿಟರ್ನಲ್ಲಿ ವಿಷಯ ಪೋಸ್ಟ್ ಮಾಡಿದರು ಶ್ರದ್ಧಾ ಸಾವಿಗೆ ನ್ಯಾಯ ಬೇಕು ಎಂಬಂಥ ಪೋಸ್ಟರ್ಗಳನ್ನು ನೋಡಿದ ಹಲವರು ಅದನ್ನು ಶೇರ್ ಮಾಡಿಕೊಂಡಿದ್ದಾರೆ. ಈಕೆಯ ಸಾವಿನಲ್ಲಿ ಒಬ್ಬ ಐಪಿಎಸ್ ಅಧಿಕಾರಿಯ ಹೆಸರೂ ಕೇಳುತ್ತಿದೆ. ಕೂಡಲೇ ತನಿಖೆಯಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ. #JusticeForShraddha ಹ್ಯಾಷ್ಟ್ಯಾಗ್ ಟ್ರೆಂಡ್ ಆಗುತ್ತಿದೆ.
Ladies & Gentlemen. Never take this route. The pressure might be a lot. But you need to teach the bastards lesson while being alive. Your family & friends will keep asking for justice but you know the system. Do not give up. Fight & make them bloody pay. #JusticeForShraddha pic.twitter.com/zbFnCRQ4Yr
— Ada ???? (@shriadhar_ada) October 30, 2021
ಇದನ್ನೂ ಓದಿ: ದನಗಳಿಗೆ ನೀರು ಕುಡಿಸಲು ಹೋಗಿ ತಾಯಿ, ಮಗ ಮೃತ್ಯು; ಹೊಳೆಗೆ ಜಾರಿಬಿದ್ದು ದುರ್ಘಟನೆ
Rajya Sabha Bypolls: ಖಾಲಿ ಇರುವ ಎರಡು ರಾಜ್ಯಸಭಾ ಸ್ಥಾನಗಳಿಗೆ ಉಪಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ