ಮೋದಿ ಸರ್ಕಾರದ ಅವಧಿಯಲ್ಲಿನ ಶಿಕ್ಷಣದ ರಿಪೋರ್ಟ್ ಕಾರ್ಡ್ನಲ್ಲಿ ಎಫ್, ಅಂದ್ರೆ ಫೇಲ್: ಮಲ್ಲಿಕಾರ್ಜುನ ಖರ್ಗೆ
ಇತ್ತೀಚಿನ ವಾರ್ಷಿಕ ಶಿಕ್ಷಣ ಸ್ಥಿತಿ ವರದಿ ಅನ್ನು ಉಲ್ಲೇಖಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಠ್ಯಪುಸ್ತಕಗಳನ್ನು ಓದಲು ಸಾಧ್ಯವಾಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದ್ದಕ್ಕೆ ನಾನು ಎಫ್ ನೀಡುತ್ತೇನೆ ಎಂದಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಭಾನುವಾರ ಟೀಕಿಸಿದ್ದಾರೆ. ಇತ್ತೀಚಿನ ವಾರ್ಷಿಕ ಶಿಕ್ಷಣ ಸ್ಥಿತಿ ವರದಿ ಅನ್ನು ಉಲ್ಲೇಖಿಸಿದ ಕಾಂಗ್ರೆಸ್ ಅಧ್ಯಕ್ಷರು ಪಠ್ಯಪುಸ್ತಕಗಳನ್ನು ಓದಲು ಸಾಧ್ಯವಾಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದ್ದಕ್ಕೆ ನಾನು ಎಫ್ ನೀಡುತ್ತೇನೆ. ‘ಶಿಕ್ಷಣ’ ಕುರಿತ ಮೋದಿ ಸರ್ಕಾರದ ರಿಪೋರ್ಟ್ ಕಾರ್ಡ್ ಫೇಲ್ ಎಂದು ತೋರಿಸಲು ಎಫ್ ಎಂದು ನೀಡಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ASER 2022 ಡೇಟಾವನ್ನು ಉಲ್ಲೇಖಿಸಿದ ಅವರು ಇದು ಸರ್ಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ II ನೇ ತರಗತಿಯ ಪಠ್ಯಪುಸ್ತಕಗಳನ್ನು ಓದಲು ಸಮರ್ಥವಾಗಿರುವ III ನೇ ತರಗತಿ ವಿದ್ಯಾರ್ಥಿಗಳ ಸಂಖ್ಯೆಯು 2018ರಲ್ಲಿ 27.3% ಇದ್ದದ್ದು 2022 ರಲ್ಲಿ 20% ಕ್ಕೆ ಇಳಿದಿದೆ. ಹಾಗೆಯೇ, IIನೇ ತರಗತಿ ಪಠ್ಯಪುಸ್ತಕಗಳನ್ನು ಓದಬಲ್ಲ 5ನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆ 2018 ರಲ್ಲಿ 50.5% ಇದ್ದದ್ದು 2022 ರಲ್ಲಿ 42.8% ಕ್ಕೆ ಇಳಿದಿದೆ ಎಂದಿದ್ದಾರೆ.
Modi Govt’s Report Card on ‘Education’ also earns an ‘?’ ??? ???? !
?Students in Std III who can read Std III textbooks declined to 20% in 2022 from 25% in 2014
?Students in Std V who can read Std II textbooks declined to 42.8% in 2022 from 50% in 2014
(Source:ASER)
— Mallikarjun Kharge (@kharge) January 22, 2023
ನರೇಂದ್ರ ಮೋದಿ ಜಿ, ಸರ್ಕಾರಿ ಇಲಾಖೆಗಳಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ. ನೀವು ಇಂದು ವಿತರಿಸುತ್ತಿರುವ 71,000 ನೇಮಕಾತಿ ಪತ್ರಗಳು ಕೇವಲ ‘ಸಾಗರದಲ್ಲಿ ಒಂದು ಹನಿ’. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ನೀವು ವಾರ್ಷಿಕವಾಗಿ 2 ಕೋಟಿ ಹೊಸ ಉದ್ಯೋಗಗಳನ್ನು ನೀಡುವುದಾಗಿ ಭರವಸೆ ನೀಡಿದ್ದೀರಿ. 8 ವರ್ಷಗಳಲ್ಲಿ 16 ಕೋಟಿ ಉದ್ಯೋಗಗಳು ಎಲ್ಲಿವೆ? ಎಂಬುದನ್ನು ಯುವಕರಿಗೆ ಹೇಳಿ ಎಂದು ಖರ್ಗೆ ಎರಡು ದಿನಗಳ ಕೇಳಿದ್ದರು.
ಇದನ್ನೂ ಓದಿ: ಶಾರುಖ್ ಖಾನ್ ಯಾರು ಎಂದು ಕೇಳಿದ ಅಸ್ಸಾಂ ಸಿಎಂ ಹಿಮಂತ ಶರ್ಮಾ; ಹೇಳಿಕೆ ನೀಡಿದ ಬೆನ್ನಲ್ಲೇ ಬಂತು ಫೋನ್ ಕರೆ
ಈ ಹಿಂದೆ, ಸುಮಾರು 30 ಲಕ್ಷ ಖಾಲಿ ಹುದ್ದೆಗಳಿಗೆ ಬದಲಾಗಿ ಹೊಸದಾಗಿ ಸೇರ್ಪಡೆಗೊಂಡ ಸರ್ಕಾರಿ ನೌಕರರಿಗೆ 71,000 ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಖರ್ಗೆ ಟೀಕಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:55 pm, Sun, 22 January 23