Lakhimpur Kheri Violence: ಅಜಯ್​ ಮಿಶ್ರಾ ರಾಜೀನಾಮೆಗೆ ಕಾಂಗ್ರೆಸ್​ ಆಗ್ರಹ; ಅ.11ರಂದು ಮೌನವ್ರತ ಆಚರಿಸಲು ನಿರ್ಧಾರ

| Updated By: Lakshmi Hegde

Updated on: Oct 10, 2021 | 10:53 AM

ಲಖಿಂಪುರ ಖೇರಿ ಹಿಂಸಾಚಾರ ನಡೆದಾಗಿನಿಂದಲೂ ಕಾಂಗ್ರೆಸ್​ ತಿರುಗಿಬಿದ್ದಿದೆ. ನಿನ್ನೆ ಭಾರತೀಯ ಯುವ ಕಾಂಗ್ರೆಸ್​ (IYC) ದೆಹಲಿಯಲ್ಲಿ ಪ್ರತಿಭಟನೆ ನಡೆಸಿ, ಅಜಯ್​ ಮಿಶ್ರಾ ರಾಜೀನಾಮೆಗೆ ಆಗ್ರಹಿಸಿದೆ.

Lakhimpur Kheri Violence: ಅಜಯ್​ ಮಿಶ್ರಾ ರಾಜೀನಾಮೆಗೆ ಕಾಂಗ್ರೆಸ್​ ಆಗ್ರಹ; ಅ.11ರಂದು ಮೌನವ್ರತ ಆಚರಿಸಲು ನಿರ್ಧಾರ
ಕಾಂಗ್ರೆಸ್​ ಬಾವುಟ
Follow us on

ಲಖನೌ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ (Lakhimpur Kheri violence)ದಲ್ಲಿ ಆಶಿಶ್​ ಮಿಶ್ರಾ ಬಂಧನವಾಗುತ್ತಿದ್ದಂತೆ, ಅವರ ಅಪ್ಪ, ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್​ ಮಿಶ್ರಾ (Ajay Mishra) ರಾಜೀನಾಮೆಗೆ ಆಗ್ರಹ ಹೆಚ್ಚುತ್ತಿದೆ. ಸಚಿವ ಸ್ಥಾನದಿಂದ ಅವರನ್ನು ಕೆಳಗೆ ಇಳಿಸಬೇಕು ಎಂದು ಕಾಂಗ್ರೆಸ್​ ಸೇರಿ ಹಲವು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಇದೀಗ ಕಾಂಗ್ರೆಸ್​ ಮೌನ ವ್ರತ ನಡೆಸಲು ಮುಂದಾಗಿದೆ. ಅಜಯ್​ ಮಿಶ್ರಾರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ, ಅಕ್ಟೋಬರ್​ 11ರಂದು ಮೌನವ್ರತ ಆಚರಿಸುವಂತೆ ಕಾಂಗ್ರೆಸ್​ ಹೈಕಮಾಂಡ್​ ದೇಶಾದ್ಯಂತ ಎಲ್ಲ ರಾಜ್ಯಗಳ ಕಾಂಗ್ರೆಸ್​ ಮುಖ್ಯಸ್ಥರಿಗೆ ಸೂಚನೆ ನೀಡಿದೆ.

ಅಕ್ಟೋಬರ್​ 11ರಂದು ಎಲ್ಲ​ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾಂಗ್ರೆಸ್​ ಮುಖ್ಯಸ್ಥರು, ಆಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ರಾಜಭವನದ ಎದುರು ಅಥವಾ ಕೇಂದ್ರ ಸರ್ಕಾರದ ಕಚೇರಿಗಳ ಎದುರಿಗೆ  ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೌನ ವ್ರತ ಪ್ರತಿಭಟನೆ ನಡೆಸಲಿದ್ದಾರೆ. ಇದಕ್ಕೂ ಮೊದಲು ಪಂಜಾಬ್​ ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​ ಸಿಧು, ಆಶಿಶ್​ ಮಿಶ್ರಾ ಬಂಧನಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆಶಿಶ್​ ಮಿಶ್ರಾ ನಿನ್ನೆ ಉತ್ತರಪ್ರದೇಶ ಪೊಲೀಸರ ಎದುರು ವಿಚಾರಣೆಗೆ ಹಾಜರಾದ ನಂತರವಷ್ಟೇ ತಮ್ಮ ಉಪವಾಸ ಕೈಬಿಟ್ಟಿದ್ದರು.

ಲಖಿಂಪುರ ಖೇರಿ ಹಿಂಸಾಚಾರ ನಡೆದಾಗಿನಿಂದಲೂ ಕಾಂಗ್ರೆಸ್​ ತಿರುಗಿಬಿದ್ದಿದೆ. ನಿನ್ನೆ ಭಾರತೀಯ ಯುವ ಕಾಂಗ್ರೆಸ್​ (IYC) ದೆಹಲಿಯಲ್ಲಿ ಪ್ರತಿಭಟನೆ ನಡೆಸಿ, ಅಜಯ್​ ಮಿಶ್ರಾ ರಾಜೀನಾಮೆಗೆ ಆಗ್ರಹಿಸಿದೆ. ಸುನೀಲ್​ ಭಾಗ್​ ರಸ್ತೆಯಿಂದ ಕೃಷ್ಣಾ ಮೆನನ್​ ಮಾರ್ಗದಲ್ಲಿರುವ ಅಮಿತ್​ ಶಾ ನಿವಾಸಕ್ಕೆ ಇವರೆಲ್ಲ ಮೆರವಣಿಗೆ ಹೊರಟಿದ್ದರು. ಆದರೆ ಪೊಲೀಸರು ಅವರನ್ನು ತಡೆದು, ಬ್ಯಾರಿಕೇಡ್​ಗಳನ್ನು ಹಾಕಿದ್ದರು. ಪ್ರತಿಭಟನಾನಿರತರಲ್ಲಿ ಕೆಲವರು ಬ್ಯಾರಿಕೇಡ್​​ಗಳನ್ನೂ ಹತ್ತಿದ್ದರು. ಹಾಗೇ, ಇಂದು ಕಾಂಗ್ರೆಸ್​ ಪ್ರಧಾನಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ವಾರಾಣಸಿಯಲ್ಲಿ ಕಿಸಾನ್​ ನ್ಯಾಯ ರ್ಯಾಲಿ ಹಮ್ಮಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿ ಈ ರ್ಯಾಲಿ ಹಮ್ಮಿಕೊಂಡಿದ್ದು, ರೈತರಿಗೆ ನ್ಯಾಯ ಒದಗಿಸಲು ಆಗ್ರಹಿಸಲಿದೆ. ಇನ್ನು ಆಶಿಶ್​ ಮಿಶ್ರಾ ಈಗಾಗಲೇ ಬಂಧನವಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ: IPL 2021 Qualifier 1: ದಾಖಲೆಯ 23ನೇ ಪ್ಲೇ ಆಫ್ ಪಂದ್ಯಕ್ಕೆ ಸಜ್ಜಾದ ಸಿಎಸ್​ಕೆ: ಪ್ಲೇಯಿಂಗ್ XI ನಲ್ಲಿ ಪ್ರಮುಖ ಬದಲಾವಣೆ?

ರಮ್ಯಾ ಬರೆದ ಚಿತ್ರ ನೋಡಿ ತಲೆ ಕೆರೆದುಕೊಂಡ ಫ್ಯಾನ್ಸ್​; ಜೀವನದ ಅರ್ಥ ವಿವರಿಸಿದ ಗೆರೆಗಳು​