ರಮ್ಯಾ ಬರೆದ ಚಿತ್ರ ನೋಡಿ ತಲೆ ಕೆರೆದುಕೊಂಡ ಫ್ಯಾನ್ಸ್​; ಜೀವನದ ಅರ್ಥ ವಿವರಿಸಿದ ಗೆರೆಗಳು​

TV9 Digital Desk

| Edited By: ಮದನ್​ ಕುಮಾರ್​

Updated on:Oct 10, 2021 | 10:07 AM

ರಮ್ಯಾ ಹಂಚಿಕೊಂಡಿರುವ ಈ ಚಿತ್ರ ನೋಡಿ ಅನೇಕ ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ. ಯೋಗದಿಂದ ತಮ್ಮ ಬದುಕಿನಲ್ಲಿ ಆದ ಬದಲಾವಣೆಗಳೇನು ಎಂಬುದನ್ನು ಹಲವರು ಹಂಚಿಕೊಳ್ಳುತ್ತಿದ್ದಾರೆ.

ರಮ್ಯಾ ಬರೆದ ಚಿತ್ರ ನೋಡಿ ತಲೆ ಕೆರೆದುಕೊಂಡ ಫ್ಯಾನ್ಸ್​; ಜೀವನದ ಅರ್ಥ ವಿವರಿಸಿದ ಗೆರೆಗಳು​
ನಟಿ ರಮ್ಯಾ ಈ ಚಿತ್ರ ಹಂಚಿಕೊಂಡಿದ್ದು, ಇದನ್ನು ನೋಡಿದ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಂತಾಗಿದೆ.

Follow us on

ನಟಿ ರಮ್ಯಾ ಅವರು ಚಿತ್ರರಂಗದಿಂದ ದೂರಾಗಿದ್ದರೂ ಕೂಡ ಸೋಶಿಯಲ್​ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿ ಇರುತ್ತಾರೆ. ಸಮಾಜದ ಅನೇಕ ಆಗುಹೋಗುಗಳಿಗೆ ಇನ್​ಸ್ಟಾಗ್ರಾಮ್​​ ಮೂಲಕ ಅವರು ಸ್ಪಂದಿಸುತ್ತಾರೆ. ಈಗ ಅವರೊಂದು ಚಿತ್ರ ಹಂಚಿಕೊಂಡಿದ್ದು, ಅದನ್ನು ನೋಡಿದ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಂತಾಗಿದೆ. ಹಾಗಂತ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಈ ಚಿತ್ರದ ಅರ್ಥ ಏನು ಎಂಬುದನ್ನು ಸ್ವತಃ ರಮ್ಯಾ ಅವರೇ ವಿವರಿಸಿದ್ದಾರೆ.

‘ಇದು ಏನೆಂದು ನೀವು ಆಶ್ಚರ್ಯ ಪಡುತ್ತಿದೀರಾ? ಇದು ಸೂರ್ಯ ನಮಸ್ಕಾರದ ದೃಷ್ಟಾಂತ. ಬೆಳಗ್ಗೆ ಸೂರ್ಯ ನಮಸ್ಕಾರ ಮಾಡುವಾಗ ಇದು ಜೀವನಕ್ಕೆ ಎಷ್ಟು ಹತ್ತಿರ ಎನಿಸಿತು. ಈ ಆಸನದಂತೆ ಜೀವನವೂ ಏರು ಇಳಿತದಿಂದ ಹಾಗೂ ಸ್ಥಿರತೆಯಿಂದ ಕೂಡಿದೆ. ನಾನು ಯೋಗಾಭ್ಯಾಸ ಪ್ರಾರಂಭಿಸಿ ಕೆಲವು ದಿನಗಳು ಕಳೆದಿವೆ. ಯೋಗದಿಂದ ನೀವೇನಾದರು ಜೀವನ ಪಾಠಗಳನ್ನು ಕಲಿತಿದ್ದಲ್ಲಿ ದಯಮಾಡಿ ಹಂಚಿಕೊಳ್ಳಿ’ ಎಂದು ರಮ್ಯಾ ಪೋಸ್ಟ್​ ಮಾಡಿದ್ದಾರೆ.

ಈ ಚಿತ್ರ ನೋಡಿ ಅನೇಕ ಅಭಿಮಾನಿಗಳು ಕಮೆಂಟ್​ ಮಡುತ್ತಿದ್ದಾರೆ. ಯೋಗದಿಂದ ತಮ್ಮ ಬದುಕಿನಲ್ಲಿ ಆದ ಬದಲಾವಣೆಗಳೇನು ಎಂಬುದನ್ನು ಹಲವರು ಹಂಚಿಕೊಳ್ಳುತ್ತಿದ್ದಾರೆ. ರಮ್ಯಾ ಆದಷ್ಟು ಬೇಗ ಚಿತ್ರರಂಗಕ್ಕೆ ಕಮ್​ಬ್ಯಾಕ್​ ಮಾಡಲಿ ಎಂಬುದು ಅಭಿಮಾನಿಗಳ ಆಸೆ. ಅದು ಯಾವಾಗ ಈಡೇರತ್ತೋ ಗೊತ್ತಿಲ್ಲ. ಇತ್ತೀಚೆಗೆ ಅವರು ಅನೇಕ ಸಿನಿಮಾತಂಡಗಳ ಬೆನ್ನು ತಟ್ಟುತ್ತಿದ್ದಾರೆ. ‘ಕೋಟಿಗೊಬ್ಬ 3’ ಟ್ರೇಲರ್​ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.

ಅ.14ರಂದು ಅದ್ದೂರಿಯಾಗಿ ‘ಕೋಟಿಗೊಬ್ಬ 3’ ಚಿತ್ರ ಬಿಡುಗಡೆ ಆಗಲಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ಕ್ರೇಜ್​ ಇದೆ. ಅ.7ರಂದು ಟ್ರೇಲರ್​ ರಿಲೀಸ್​ ಆಗಿದ್ದು, ಅದನ್ನು ನೋಡಿ ರಮ್ಯಾ ಕೂಡ ಮೆಚ್ಚಿಕೊಂಡಿದ್ದಾರೆ. ಈ ಟ್ರೇಲರ್​ನಲ್ಲಿ ಸುದೀಪ್​ ಹಲವು ಗೆಟಪ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಎನರ್ಜಿ ನೋಡಿ ಫಿದಾ ಆಗದವರೇ ಇಲ್ಲ. ಕೆಲವು ದೃಶ್ಯಗಳಲ್ಲಿ ಸುದೀಪ್​ ಹದಿಹರೆಯದ ತರುಣನಂತೆ ಕಾಣುತ್ತಾರೆ. ಅದು ಅಭಿಮಾನಿಗಳಿಗೆ ಮಾತ್ರವಲ್ಲದೆ, ರಮ್ಯಾಗೂ ಅಚ್ಚರಿ ಮೂಡಿಸಿದೆ.

‘ಟ್ರೇಲರ್​ ಅದ್ಭುತವಾಗಿದೆ. ಕಿಚ್ಚ ಸುದೀಪ್​ ಅವರೇ, ನಿಮಗೆ ವಯಸ್ಸು ಆಗುವುದೇ ಇಲ್ಲವಾ?’ ಎಂದು ರಮ್ಯಾ ಬರೆದುಕೊಂಡಿದ್ದಾರೆ. ದಿನದಿಂದ ದಿನಕ್ಕೆ ಸುದೀಪ್​ ವಯಸ್ಸು ಕಮ್ಮಿ ಆಗುತ್ತಿದೆ ಎಂಬರ್ಥದಲ್ಲಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘ರಂಗ ಎಸ್​ಎಸ್​ಎಲ್​ಸಿ’, ‘ಜಸ್ಟ್​ ಮಾತ್​ ಮಾತಲ್ಲಿ’, ‘ಮುಸ್ಸಂಜೆ ಮಾತು’ ಸಿನಿಮಾಗಳಲ್ಲಿ ರಮ್ಯಾ ಮತ್ತು ಸುದೀಪ್​ ನಟಿಸಿದ್ದರು. ಮತ್ತೆ ಅವರು ತೆರೆಮೇಲೆ ಜೋಡಿಯಾಗಿ ಕಾಣಿಸಿಕೊಳ್ಳಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.

ಇದನ್ನೂ ಓದಿ:

ಆರ್ಯನ್​ ಖಾನ್​ ಬಂಧನದ ವಿಚಾರದಲ್ಲಿ ಅನುಮಾನ ಹೊರಹಾಕಿದ ನಟಿ ರಮ್ಯಾ

‘ನಾನು ಸಿನಿಮಾ ಮಾಡಲ್ಲ ಅಂದ್ರೆ ಅನೇಕರಿಗೆ ಬೇಸರ ಆಗತ್ತೆ’; ಚಿತ್ರರಂಗಕ್ಕೆ ಬರುವ ಸೂಚನೆ ನೀಡಿದ ರಮ್ಯಾ?

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada