AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಮ್ಮೆ ಕಾಲಿವುಡ್​ ಕದ ತಟ್ಟಿದ ಕನ್ನಡದ ನಟಿ ತಾನ್ಯಾ ಹೋಪ್​

 ತಮಿಳು ನಟ ಶಿವ ಅವರು ನಿರ್ದೇಶಕ ಪೊನ್​ ಕುಮಾರನ್​ ಜತೆ ಕೈ ಜೋಡಿಸುತ್ತಿದ್ದಾರೆ. ಪೊನ್​ ಕುಮಾರನ್​ ತಮಿಳು ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಶಿವ ಜತೆ ಜೀವಾ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಮತ್ತೊಮ್ಮೆ ಕಾಲಿವುಡ್​ ಕದ ತಟ್ಟಿದ ಕನ್ನಡದ ನಟಿ ತಾನ್ಯಾ ಹೋಪ್​
ತಾನ್ಯಾ ಹೋಪ್
TV9 Web
| Edited By: |

Updated on: Oct 09, 2021 | 5:53 PM

Share

ಕನ್ನಡದ ನಟಿ ತಾನ್ಯಾ ಹೋಪ್​ಗೆ ಕಾಲಿವುಡ್​ನಲ್ಲೂ ದೊಡ್ಡ ಬೇಡಿಕೆ ಇದೆ. ತೆಲುಗು ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ಕನ್ನಡದಲ್ಲಿ ‘ಯಜಮಾನ’, ‘ಅಮರ್​’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರು ಮತ್ತೆ ತಮಿಳು ಚಿತ್ರರಂಗದ ಕದ ತಟ್ಟೋಕೆ ರೆಡಿ ಆಗಿದೆ. ಅವರಿಗೆ ಕಾಲಿವುಡ್​ನಿಂದ ಆಫರ್ ಒಂದು ಬಂದಿದೆ.

ತಮಿಳು ನಟ ಶಿವ ಅವರು ನಿರ್ದೇಶಕ ಪೊನ್​ ಕುಮಾರನ್​ ಜತೆ ಕೈ ಜೋಡಿಸುತ್ತಿದ್ದಾರೆ. ಪೊನ್​ ಕುಮಾರನ್​ ತಮಿಳು ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಶಿವ ಜತೆ ಜೀವಾ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜಾಗ್ವಾರ್ ಸ್ಟುಡಿಯೋಸ್​ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾ ಮುಂದಿನ ತಿಂಗಳು ಸೆಟ್ಟೇರಲಿದೆ. ಈಗ ಈ ಸಿನಿಮಾ ತಂಡಕ್ಕೆ ತಾನ್ಯಾ ಕೂಡ ಸೇರಿಕೊಂಡಿದ್ದಾರೆ.

ಪಾಯಲ್​ ರಜಪೂತ್​ ಮತ್ತು ತಾನ್ಯಾ ಹೋಪ್​ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಾನ್ಯಾ ಅವರು ಕನ್ನಡದಲ್ಲಿ ಹೆಸರು ಮಾಡಿದ್ದಾರೆ. ಕನ್ನಡದ ‘ಹೋಮ್​ ಮಿನಿಸ್ಟರ್​’ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈಗ ಅವರು ಈ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು, ಪಾಯಲ್​ ರಜಪೂತ್​ ‘ಹೆಡ್​ ಬುಷ್​’ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೂ ಕಾಲಿಡುತ್ತಿದ್ದಾರೆ.

ಈ ಸಿನಿಮಾ ಮೂಲತಃ ತಮಿಳಿನಲ್ಲಿ ಸಿದ್ಧಗೊಳ್ಳುತ್ತಿದೆ. ನಿರ್ದೇಶಕರಿಗೆ ಕನ್ನಡ ಚಿತ್ರರಂಗದ ಜತೆ ಒಳ್ಳೆಯ ನಂಟು ಇರುವುದರಿಂದ ಅವರು ಈ ಸಿನಿಮಾವನ್ನು ಕನ್ನಡದಲ್ಲೂ ರಿಲೀಸ್​ ಮಾಡುತ್ತಾರಾ ಎನ್ನುವ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಸಿನಿಮಾದ ಸಂಪೂರ್ಣ ಕಥೆ ಮಾರಿಷಿಯಸ್​ನಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ಇದಕ್ಕೆ ಚಿತ್ರತಂಡದಿಂದ ಉತ್ತರ ಸಿಗಬೇಕಿದೆ.

ತಾನ್ಯಾ ಹಾಗೂ ಪಾಯಲ್ ಈ ಮೊದಲು ಒಟ್ಟಿಗೆ ನಟಿಸಿದ ಅನುಭವ ಹೊಂದಿದ್ದಾರೆ. ರವಿತೇಜ ನಟನೆಯ ‘ಡಿಸ್ಕೋ ರಾಜ’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈಗ ಇಬ್ಬರೂ ಮತ್ತೊಮ್ಮೆ ಒಂದಾಗುತ್ತಿದ್ದಾರೆ ಅನ್ನೋದು ವಿಶೇಷ.

ಇದನ್ನೂ ಓದಿ: ‘ತಾಯಿ ಆಗಲು ಬಯಸಿದ್ರು ಸಮಂತಾ, ಆದರೆ..’; ನಾಗ ಚೈತನ್ಯ ಜತೆಗಿನ ಡಿವೋರ್ಸ್​ ಬಳಿಕ ನಿರ್ಮಾಪಕಿ ಅಚ್ಚರಿ ಹೇಳಿಕೆ

ನಂಬ್ತೀರೋ, ಬಿಡ್ತೀರೋ! ಒಂಬತ್ತು ವರ್ಷದ ಈ ಯೂಟ್ಯೂಬರ್​ ಗಳಿಕೆ ₹ 217 ಕೋಟಿ

Follow Us
ಲವ್ ಜಿಹಾದ್ ಕೇಸ್​: 50ಕ್ಕೂ ಹೆಚ್ಚು ಜನರಿಂದ ಸಮೀರ್​ಗೆ ಮನಸೋ ಇಚ್ಛೆ ಥಳಿತ
ಲವ್ ಜಿಹಾದ್ ಕೇಸ್​: 50ಕ್ಕೂ ಹೆಚ್ಚು ಜನರಿಂದ ಸಮೀರ್​ಗೆ ಮನಸೋ ಇಚ್ಛೆ ಥಳಿತ
ಕೇರಳದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
ಕೇರಳದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
ಸಿಎಂ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಬಳಿ ಅನುಮಾನಾಸ್ಪದ ಡ್ರೋನ್ ಹಾರಾಟ
ಸಿಎಂ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಬಳಿ ಅನುಮಾನಾಸ್ಪದ ಡ್ರೋನ್ ಹಾರಾಟ
ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಸಿದ್ದರಾಮಯ್ಯ
ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಸಿದ್ದರಾಮಯ್ಯ
ಹಸಿವಿನಿಂದ ಊಟ ಕೇಳಿದ ಭಿಕ್ಷುಕನ ಮೇಲೆ ಬಿಸಿನೀರು ಎರಚಿದ ಹೋಟೆಲ್ ಸಿಬ್ಬಂದಿ!
ಹಸಿವಿನಿಂದ ಊಟ ಕೇಳಿದ ಭಿಕ್ಷುಕನ ಮೇಲೆ ಬಿಸಿನೀರು ಎರಚಿದ ಹೋಟೆಲ್ ಸಿಬ್ಬಂದಿ!
ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ವಂಚನೆ: ಲಿಂಕ್​ ಕ್ಲಿಕ್​ ಮಾಡಿದ್ರೆ ಹಣ ಮಾಯ
ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ವಂಚನೆ: ಲಿಂಕ್​ ಕ್ಲಿಕ್​ ಮಾಡಿದ್ರೆ ಹಣ ಮಾಯ
ಡೆಲ್ಲಿ ವಿರುದ್ಧ ವಿಶೇಷ ಮೈಲಿಗಲ್ಲು ದಾಟಿದ ರೋಹಿತ್ ಶರ್ಮಾ
ಡೆಲ್ಲಿ ವಿರುದ್ಧ ವಿಶೇಷ ಮೈಲಿಗಲ್ಲು ದಾಟಿದ ರೋಹಿತ್ ಶರ್ಮಾ
IPL ಟಿಕೆಟ್​​ ಪಡೆದ ಶಾಸಕರಿಗೆ ಮಾಜಿ ಸಿಎಂ ಸದಾನಂದಗೌಡ ಕ್ಲಾಸ್​​
IPL ಟಿಕೆಟ್​​ ಪಡೆದ ಶಾಸಕರಿಗೆ ಮಾಜಿ ಸಿಎಂ ಸದಾನಂದಗೌಡ ಕ್ಲಾಸ್​​
ಕಣ್ಣಿಗೆ ಕಂಡವರಿಗೆಲ್ಲಾ ಎಗರಿ.. ಎಗರಿ ಕಚ್ಚಿದ ನಾಯಿ
ಕಣ್ಣಿಗೆ ಕಂಡವರಿಗೆಲ್ಲಾ ಎಗರಿ.. ಎಗರಿ ಕಚ್ಚಿದ ನಾಯಿ
ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಸೋಮಣ್ಣ ಸವಾಲ್​​: ಕಾರಣ ಏನು?
ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಸೋಮಣ್ಣ ಸವಾಲ್​​: ಕಾರಣ ಏನು?