AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಜೆನಗರ ಪಿಎಸ್​ಐ ಪದ್ಮನಾಭ್ ವಿರುದ್ಧ ಹಲ್ಲೆ ಆರೋಪ!

ಜೆಜೆನಗರ ಪಿಎಸ್​ಐ ಪದ್ಮನಾಭ್ ವಿರುದ್ಧ ಹಲ್ಲೆ ಆರೋಪ!

ಭಾವನಾ ಹೆಗಡೆ
|

Updated on:May 17, 2026 | 1:40 PM

Share

ಜೆಜೆನಗರ ಪೊಲೀಸ್ ಠಾಣೆಯ ಪಿಎಸ್‌ಐ ಪದ್ಮನಾಭ್ ವಿರುದ್ಧ ಕೌಟುಂಬಿಕ ವಿವಾದದ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಬರ್ಕತ್ ಪಾಷಾ ಎಂಬುವವರನ್ನು ಪಿಎಸ್‌ಐ ಪದ್ಮನಾಭ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕುತ್ತಿಗೆ ಹಿಸುಕುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಲಾಗಿದೆ. ಘಟನೆ ಜೆಜೆನಗರ ಠಾಣಾ ವ್ಯಾಪ್ತಿಯ ಪಾದರಾಯನಪುರದಲ್ಲಿ ನಡೆದಿದೆ. ಪತಿ-ಪತ್ನಿ ನಡುವೆ ಕೆಲಸಕ್ಕೆ ಹೋಗುವ ವಿಚಾರವಾಗಿ ಪದೇ ಪದೇ ಜಗಳ ನಡೆಯುತ್ತಿತ್ತು. ಸೀಮಂತದ ನಂತರ ಪತ್ನಿ ತವರಿಗೆ ಹೋದಾಗ, ಆಕೆಯನ್ನು ಕರೆತರಲು ಹೋದಾಗ ಗಲಾಟೆ ನಡೆದಿದೆ. ಈ ಘಟನೆಯು ಪೊಲೀಸ್ ಅಧಿಕಾರಿಯೊಬ್ಬರ ದುರ್ನಡತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬೆಂಗಳೂರು, ಮೇ 17: ಜೆಜೆನಗರ ಪೊಲೀಸ್ ಠಾಣೆಯ ಪಿಎಸ್‌ಐ ಪದ್ಮನಾಭ್ ವಿರುದ್ಧ ಕೌಟುಂಬಿಕ ವಿವಾದದ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಬರ್ಕತ್ ಪಾಷಾ ಎಂಬುವವರನ್ನು ಪಿಎಸ್‌ಐ ಪದ್ಮನಾಭ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕುತ್ತಿಗೆ ಹಿಸುಕುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಲಾಗಿದೆ. ಘಟನೆ ಜೆಜೆನಗರ ಠಾಣಾ ವ್ಯಾಪ್ತಿಯ ಪಾದರಾಯನಪುರದಲ್ಲಿ ನಡೆದಿದೆ. ಪತಿ-ಪತ್ನಿ ನಡುವೆ ಕೆಲಸಕ್ಕೆ ಹೋಗುವ ವಿಚಾರವಾಗಿ ಪದೇ ಪದೇ ಜಗಳ ನಡೆಯುತ್ತಿತ್ತು. ಸೀಮಂತದ ನಂತರ ಪತ್ನಿ ತವರಿಗೆ ಹೋದಾಗ, ಆಕೆಯನ್ನು ಕರೆತರಲು ಹೋದಾಗ ಗಲಾಟೆ ನಡೆದಿದೆ. ಈ ಘಟನೆಯು ಪೊಲೀಸ್ ಅಧಿಕಾರಿಯೊಬ್ಬರ ದುರ್ನಡತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published on: May 17, 2026 01:04 PM

Follow Us