IPL 2021 Qualifier 1: ದಾಖಲೆಯ 23ನೇ ಪ್ಲೇ ಆಫ್ ಪಂದ್ಯಕ್ಕೆ ಸಜ್ಜಾದ ಸಿಎಸ್ಕೆ: ಪ್ಲೇಯಿಂಗ್ XI ನಲ್ಲಿ ಪ್ರಮುಖ ಬದಲಾವಣೆ?
CSK likely playing XI vs DC Qualifier 1 IPL 2021: ಸಿಎಸ್ಕೆ ನಾಕೌಟ್ ಹಂತಕ್ಕೇರಿರುವುದು ಇದು ದಾಖಲೆಯ 11ನೇ ಬಾರಿ. ಈ ವರೆಗೆ ಯಾವುದೇ ತಂಡ ಈ ಸಾಧನೆ ಮಾಡಿಲ್ಲ. ಹೀಗಾಗಿ ಇಂದಿನ ಪ್ರಮುಖ ಪಂದ್ಯಕ್ಕೆ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಮಾಡುವ ಅಂದಾಜಿದೆ.
ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಐಪಿಎಲ್ 2021ರ (IPL 2021) ಮೊದಲ ಕ್ವಾಲಿಫೈಯರ್ (Qualifier 1) ಪಂದ್ಯದಲ್ಲಿಂದು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು ಎದುರಿಸುತ್ತಿದೆ. ಪ್ಲೇ ಆಫ್ ಹಂತದಲ್ಲಿ ಸಾಕಷ್ಟು ಬಾರಿ ಆಡಿ ಅನುಭವ ಹೊಂದಿರುವ ಚೆನ್ನೈ (CSK) ಈ ಬಾರಿ ಲೀಗ್ ಪಂದ್ಯದಲ್ಲಿ ಡೆಲ್ಲಿ (DC) ವಿರುದ್ಧ ಎರಡೂ ಮ್ಯಾಚ್ನಲ್ಲಿ ಸೋಲುಂಡಿದೆ. ಹೀಗಾಗಿ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಸಿಎಸ್ಕೆ ನಾಕೌಟ್ ಹಂತಕ್ಕೇರಿರುವುದು ಇದು ದಾಖಲೆಯ 11ನೇ ಬಾರಿ. ಈ ವರೆಗೆ ಯಾವುದೇ ತಂಡ ಈ ಸಾಧನೆ ಮಾಡಿಲ್ಲ. ಇಲ್ಲಿ ಗೆದ್ದರೆ 9ನೇ ಬಾರಿಗೆ ಫೈನಲ್ ಪ್ರವೇಶಿಸಲಿದೆ. ಕಳೆದ ಮೂರು ಪಂದ್ಯಗಳಲ್ಲಿ ಸತತ ಸೋತಿರುವ ಚೆನ್ನೈ ಇಂದಿನ ಪ್ರಮುಖ ಪಂದ್ಯಕ್ಕೆ ಕೆಲವೊಂದು ಬದಲಾವಣೆ (CSK Playing XI) ಮಾಡುವ ಅಂದಾಜಿದೆ.
ಆರಂಭಿಕರಾದ ಫಾಫ್ ಡುಪ್ಲೆಸಿಸ್ ಹಾಗೂ ರುತುರಾಜ್ ಗಾಯಕ್ವಾಡ್ ಹೊರತುಪಡಿಸಿದರೆ, ಅನುಭವಿ ಬ್ಯಾಟ್ಸ್‌ಮನ್‌ಗಳು ಒಳಗೊಂಡ ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷಿತ ನಿರ್ವಹಣೆ ಕಂಡುಬರುತ್ತಿಲ್ಲ. ಇತ್ತ ವೇಗದ ವಿಭಾಗದಲ್ಲಿ ಶಾರ್ದೂಲ್ ಠಾಕೂರ್, ಜೋಸ್ ಹ್ಯಾಸಲ್‌ವುಡ್ ಗಮನಸೆಳೆಯುತ್ತಿದ್ದರೂ ದೀಪಕ್ ಚಹರ್ ಕೊಂಚ ದುಬಾರಿಯಾಗುತ್ತಿದ್ದಾರೆ.
ಇನ್ನೂ ಎಂ. ಎಸ್ ಧೋನಿ ಬ್ಯಾಟ್ ಸದ್ದು ಮಾಡದಿರುವುದು ಬೇಸರದ ಸಂಗತಿ. 14 ಪಂದ್ಯಗಳಿಂದ ಅವರು ಗಳಿಸಿದ್ದು ಬರೀ 96 ರನ್. ಆದರೆ, ಇದರಿಂದ ತಂಡಕ್ಕೆ ದೊಡ್ಡ ಮಟ್ಟದ ನಷ್ಟ ಉಂಟಾಗಿಲ್ಲ. ಯಾಕಂದ್ರೆ ಫಿನಿಶಿಂಗ್ ಜವಾಬ್ದಾರಿಯನ್ನು ರವೀಂದ್ರ ಜಡೇಜಾ ಮತ್ತು ಡ್ವೇನ್ ಬ್ರಾವೋ ಅಮೋಘವಾಗಿ ಮಾಡುತ್ತಿದ್ದಾರೆ.
ಮೊಯೀನ್ ಅಲಿ ಬ್ಯಾಟ್ನಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಬಂದಿಲ್ಲ. ರಾಬಿನ್ ಉತ್ತಪ್ಪ ಅವರಿಗೆ ಅವಕಾಶ ನೀಡಿದರೂ ಸರಿಯಾಗಿ ಉಪಯೋಗಿಸಿಕೊಂಡಿಲ್ಲ. ಹೀಗಾಗಿ ಉತ್ತಪ್ಪ ಜಾಗಕ್ಕೆ ಸುರೇಶ್ ರೈನಾ ಕಮ್ಬ್ಯಾಕ್ ಮಾಡುವ ಸಂಭವವಿಇದೆ. ಅಂತೆಯೆ ಮೊಯೀಲ್ ಅಲಿ ಜಾಗದಲ್ಲಿ ಎನ್. ಜಗದೀಶನ್ ಆಡುಬಹುದು. ದುಬಾರಿಯಾಗಿರುವ ದೀಪಕ್ ಚಹಾರ್ ಬದಲು ಲುಂಗಿ ಎನ್ಗಿಡಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಲೀಗ್ ಹಂತದಲ್ಲಿ ಕಡೇ ಪಂದ್ಯದಲ್ಲಿ ಆರ್‌ಸಿಬಿ ಎದುರು ಮುಗ್ಗರಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಗೆಲುವಿನ ಹಳಿಗೇರುವ ವಿಶ್ವಾಸದಲ್ಲಿದೆ. ಲೀಗ್ ಹಂತದಲ್ಲಿ 10 ಗೆಲುವು ದಾಖಲಿಸಿದ್ದರೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ನಿರ್ವಹಣೆ ಬರುತ್ತಿಲ್ಲ. ಶ್ರೇಯಸ್ ಅಯ್ಯರ್ ಫಾರ್ಮ್ನಲ್ಲಿ ಇಲ್ಲದಿರುವುದು ಹಿನ್ನಡೆಯಾಗಿದೆ.
ಮಾರ್ಕಸ್ ಸ್ಟಾಯಿನಿಸ್ ಇಂಜುರಿಯಿಂದ ಗುಣಮುಖರಾಗಿದ್ದರೆ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಡೆಲ್ಲಿ ಬೌಲಿಂಗ್ ಅದ್ಭುತವಾಗಿದೆ. ಆವೇಶ್ ಖಾನ್ ಬೆಂಕಿ ಚೆಂಡು ಉಗುಳುತ್ತಿದ್ದರೆ ಇವರಿಗೆ ಆನ್ರಿಚ್ ನಾರ್ಟ್ಜೆ ಮತ್ತು ಕಗಿಸೊ ರಬಾಡ ಉತ್ತಮ ಸಾಥ್ ನೀಡುತ್ತಿದ್ದಾರೆ. ಆರ್. ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಸ್ಪಿನ್ ಕೂಡ ವರ್ಕೌಟ್ ಆಗುತ್ತಿದೆ.
ಮುಖಾಮುಖಿ ಪಂದ್ಯ: 25, ಡೆಲ್ಲಿ ಕ್ಯಾಪಿಟಲ್ಸ್ ಗೆಲುವು: 10, ಚೆನ್ನೈ ಸೂಪರ್ ಕಿಂಗ್ಸ್ ಗೆಲುವು: 15
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
Shikha Pandey: ಸ್ಪಿನ್ನರ್ಗಳಿಗೂ ಕಷ್ಟ: ವೇಗಿ ಶಿಖಾ ಪಾಂಡೆ ಎಸೆದ ಬಾಲ್ ಟರ್ನ್ ಆದ ಪರಿ ನೋಡಿ: ಕ್ಲೀನ್ ಬೌಲ್ಡ್
T20 World Cup: ಟಿ20 ವಿಶ್ವಕಪ್ಗೆ ಭಾರತ ತಂಡದ ಬದಲಾವಣೆ ಕುರಿತು ಬಿಸಿಸಿಐಯಿಂದ ಶಾಕಿಂಗ್ ನಿರ್ಧಾರ
(IPL 2021 Qualifier 1 DC vs CSK Chennai Super Kings to play their 23rd playoff match Here is CSK Playing XI)