T20 World Cup: ಟಿ20 ವಿಶ್ವಕಪ್​ಗೆ ಭಾರತ ತಂಡದ ಬದಲಾವಣೆ ಕುರಿತು ಬಿಸಿಸಿಐಯಿಂದ ಶಾಕಿಂಗ್ ನಿರ್ಧಾರ

TV9 Digital Desk

| Edited By: Vinay Bhat

Updated on: Oct 10, 2021 | 8:12 AM

Team India T20 World Cup 2021 Squad: ಅಕ್ಟೋಬರ್ 10ರ ಒಳಗೆ ಭಾರತ ಟಿ20 ವಿಶ್ವಕಪ್ ತಂಡದಲ್ಲಿ ಬದಲಾವಣೆ ಖಚಿತ ಅದರಲ್ಲೂ ಯುಜ್ವೇಂದ್ರ ಚಹಾಲ್ ತಂಡಕ್ಕೆ ಕಮ್​ಬ್ಯಾಕ್ ಮಾಡಬಹುದು ಎಂದೇ ನಿರೀಕ್ಷಿಸಲಾಗುತ್ತು. ಆದರೆ, ಸದ್ಯ ಬಿಸಿಸಿಐಯಿಂದ ಶಾಕಿಂಗ್ ಮಾಹಿತಿ ಹೊರಬಿದ್ದಿದೆ.

T20 World Cup: ಟಿ20 ವಿಶ್ವಕಪ್​ಗೆ ಭಾರತ ತಂಡದ ಬದಲಾವಣೆ ಕುರಿತು ಬಿಸಿಸಿಐಯಿಂದ ಶಾಕಿಂಗ್ ನಿರ್ಧಾರ
T20 World Cup BCCI
Follow us

ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಮಹಾ ಟೂರ್ನಿಗೆ ಇನ್ನೇನು ಕೆಲವು ದಿನಗಳಷ್ಟೆ ಬಾಕಿಯಿದೆ. ಹೀಗಿರುವಾಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ. ಇತ್ತೀಚೆಗಷ್ಟೆ ಬಿಸಿಸಿಐ ಟಿ20 ವಿಶ್ವಕಪ್​ಗೆ ವಿರಾಟ್ ಕೊಹ್ಲಿ (Virat Kohli) ಸಾರಥ್ಯದ 15 ಸದಸ್ಯರ ಭಾರತ ತಂಡವನ್ನು (Indian T20 World Cup Squad) ಪ್ರಕಟಮಾಡಿತ್ತು. ಇದರಲ್ಲಿ ಕೆಲವು ಅಚ್ಚರಿಯ ಆಯ್ಕೆಗಳೂ ಇದ್ದವು. ಆದರೆ, ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಪ್ರಕಟ ಮಾಡಿರುವ ತಂಡದಲ್ಲಿ ಬೇಕಿದ್ದರೆ ಬದಲಾವಣೆ ಮಾಡಬಹುದು ಎಂದು ಅಕ್ಟೋಬರ್ 10ರ ವರೆಗೆ ಅವಕಾಶ ನೀಡಿತ್ತು. ಹೀಗಾಗಿ ಭಾರತ ತಂಡದಲ್ಲಿ ಕೆಲವು ಬದಲಾವಣೆ ನಿರೀಕ್ಷಿಸಲಾಗಿತ್ತು. ಆದರೆ, ಸದ್ಯ ಬಿಸಿಸಿಐ ತಂಡದಲ್ಲಿ ಯಾವುದೇ ಹೊಸ ಆಟಗಾರನ ಸೇರ್ಪಡೆಯಿಲ್ಲ ಎಂದು ಹೇಳಿದೆ.

ಹೌದು, ಈ ಮೊದಲು ಟಿ20 ವಿಶ್ವಕಪ್​ಗೆ ಭಾರತ ತಂಡವನ್ನು ಪ್ರಕಟಿಸಿದಾಗ ಕೆಲ ಪ್ರಮುಖ ಆಟಗಾರರ ಗೈರು ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ಪ್ರಮುಖವಾಗಿ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಯುಜ್ವೇಂದ್ರ ಚಹಾಲ್, ಶಿಖರ್ ಧವನ್ ಹಾಗೂ ಹರ್ಷಲ್ ಪಟೇಲ್ ಅವರನ್ನು ಆಯ್ಕೆ ಮಾಡದಿರುವುದು ಅನೇಕರ ಕೆಂಗಣ್ಣಿಗೆ ಗುರಿಯಾಗಿತ್ತು. ಜೊತೆಗೆ 4 ವರ್ಷಗಳ ಬಳಿಕ ರವಿಚಂದ್ರನ್ ಅಶ್ವಿನ್ ಟಿ20 ತಂಡಕ್ಕೆ ಸೇರ್ಪಡೆಯಾದ ಬಗ್ಗೆಯೂ ಮಾತುಗಳು ಬಂದಿದ್ದವು.

ಹೀಗಾಗಿ ಅಕ್ಟೋಬರ್ 10ರ ಒಳಗೆ ಭಾರತ ಟಿ20 ವಿಶ್ವಕಪ್ ತಂಡದಲ್ಲಿ ಬದಲಾವಣೆ ಖಚಿತ ಅದರಲ್ಲೂ ಚಹಾಲ್ ತಂಡಕ್ಕೆ ಕಮ್​ಬ್ಯಾಕ್ ಮಾಡಬಹುದು ಎಂದೇ ನಿರೀಕ್ಷಿಸಲಾಗುತ್ತು. ಆದರೆ, ಸದ್ಯ ಬಿಸಿಸಿಐ ಟೀಮ್ ಇಂಡಿಯಾ ಟಿ20 ವಿಶ್ವಕಪ್ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ಆಯ್ಕೆಯಾದ ಆಟಗಾರರ ಪೈಕಿ ಯಾರಿಗಾದರು ಇಂಜುರಿಯಾದರೆ ಮಾತ್ರ ಹೊಸ ಆಟಗಾರನ ಸೇರ್ಪಡೆ ಆಗುತ್ತದೆ ಎಂದು ಖಡಕ್ ಆಗಿ ಹೇಳಿದೆಯೆಂದು ವರದಿ ಆಗಿವೆ.

ನೆಟ್‌ ಬೌಲರ್‌ ಆಗಿ ಉಮ್ರಾನ್‌ ಮಲಿಕ್ ಆಯ್ಕೆ:

ಐಪಿಎಲ್ 2021 ಟೂರ್ನಿಯ ಯುಎಇ ಚರಣದಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನದ ತೋರಿದ್ದ ಉಮ್ರಾನ್‌ ಮಲಿಕ್‌ ಅವರನ್ನು ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಸಲುವಾಗಿ ಭಾರತ ತಂಡಕ್ಕೆ ನೆಟ್‌ ಬೌಲರ್‌ ಆಗಿ ಆಯ್ಕೆ ಮಾಡಲಾಗಿದೆ. ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಪರ ಯುಎಇ ಚರಣದ ಕೊನೆಯ ಎರಡು ಪಂದ್ಯಗಳಲ್ಲಿ ಜಮ್ಮು ಕಾಶ್ಮೀರ ಮೂಲದ ಯುವ ವೇಗಿ ಉಮ್ರಾನ್‌ ತಮ್ಮ ವೇಗದ ಬೌಲಿಂಗ್‌ ಮೂಲಕ ಗಮನ ಸೆಳೆದಿದ್ದರು. 2021ರ ಟೂರ್ನಿಯಲ್ಲಿಯೇ ಅತ್ಯಂತ ವೇಗದ ಎಸೆತ ಹಾಕುವ ಮೂಲಕ ಮಲಿಕ್ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ಬಿಸಿಸಿಐ ಆಯ್ಕೆದಾರರ ಗಮನ ಸೆಳೆದಿದ್ದರು.

ಐಸಿಸಿ ಟಿ20 ವಿಶ್ವಕಪ್ 2021 ಯುಎಇ ಹಾಗೂ ಒಮನ್‌ನಲ್ಲಿ ಅಕ್ಟೋಬರ್‌ 17ರಿಂದ ಶುರುವಾಗಲಿದ್ದು, ನವೆಂಬರ್‌ 14 ರಂದು ದುಬೈನಲ್ಲಿ ಫೈನಲ್‌ ಹಣಾಹಣಿಯ ಮೂಲಕ ಅಂತ್ಯವಾಗಲಿದೆ. ಅಕ್ಟೋಬರ್‌ 24 ರಂದು ಪಾಕಿಸ್ತಾನ ವಿರುದ್ಧ ಕಾದಾಟ ನಡೆಸುವ ಮೂಲಕ ಭಾರತ ತಂಡ ಚುಟುಕು ವಿಶ್ವಕಪ್‌ ಅಭಿಯಾನವನ್ನು ಆರಂಭಿಸಲಿದೆ. ಈ ಬಾರಿಯ ಟೀಮ್ ಇಂಡಿಯಾ ಟಿ20 ವಿಶ್ವಕಪ್​ನಲ್ಲಿ ನೂತನ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ.

DC vs CSK Qualifier 1, IPL 2021: ಇಂದು ಮೊದಲ ಕ್ವಾಲಿಫೈಯರ್​ನಲ್ಲಿ ಡೆಲ್ಲಿ-ಚೆನ್ನೈ ಮುಖಾಮುಖಿ: ಗೆದ್ದರೆ ನೇರ ಫೈನಲ್​ಗೆ

ಟೀಮ್ ಇಂಡಿಯಾಗೆ ನೆಟ್ಸ್​​ನಲ್ಲಿ ಬೌಲ್ ಮಾಡಲು ಜೆ&ಕೆ ಎಕ್ಸ್​ಪ್ರೆಸ್​ ಮಲಿಕ್​ರನ್ನು ಯುಎಈಯಲ್ಲೇ ಉಳಿಯುವಂತೆ ಹೇಳಲಾಗಿದೆ

(T20 World Cup No change in the Team India T20 World Cup 2021 Squad BCCI official said)

ತಾಜಾ ಸುದ್ದಿ

Related Stories

Click on your DTH Provider to Add TV9 Kannada