DC vs CSK Qualifier 1, IPL 2021: ಇಂದು ಮೊದಲ ಕ್ವಾಲಿಫೈಯರ್​ನಲ್ಲಿ ಡೆಲ್ಲಿ-ಚೆನ್ನೈ ಮುಖಾಮುಖಿ: ಗೆದ್ದರೆ ನೇರ ಫೈನಲ್​ಗೆ

TV9 Digital Desk

| Edited By: Vinay Bhat

Updated on: Oct 10, 2021 | 7:16 AM

Delhi Capitals vs Chennai Super Kings: ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ ಒಟ್ಟು 25 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 15 ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡ 10 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

DC vs CSK Qualifier 1, IPL 2021: ಇಂದು ಮೊದಲ ಕ್ವಾಲಿಫೈಯರ್​ನಲ್ಲಿ ಡೆಲ್ಲಿ-ಚೆನ್ನೈ ಮುಖಾಮುಖಿ: ಗೆದ್ದರೆ ನೇರ ಫೈನಲ್​ಗೆ
DC vs CSK Qualifier 1, IPL 2021

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ (IPL 2021) ಅಂತಿಮ ಹಂತಕ್ಕೆ ತಲುಪುತ್ತಿದ್ದು ಈಗಾಗಲೇ ಲೀಗ್ ಹಂತದ ಪಂದ್ಯಗಳು ಮುಗಿದು ಕ್ವಾಲಿಫೈ ಸುತ್ತು ಆರಂಭವಾಗಲಿದೆ. ಇಂದು ಮೊದಲ ಕ್ವಾಲಿಫೈಯರ್​ನಲ್ಲಿ (Qualifier 1) ಟೇಬಲ್ ಟಾಪರ್​ನಲ್ಲಿರುವ ರಿಷಭ್ ಪಂತ್ (Rishabh Pant) ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಎರಡನೇ ಸ್ಥಾನದಲ್ಲಿರುವ ಎಂ. ಎಸ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (DC vs CSK) ತಂಡಗಳು ಸೆಣೆಸಾಟ ನಡೆಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್​ಗೆ (IPL 2021 Final) ಪ್ರವೇಶಿಸಿದರೆ ಸೋತ ತಂಡ ಎಲಿಮಿನೇಟರ್ 1 ರಲ್ಲಿ ಗೆದ್ದ ತಂಡದೊಂದಿಗೆ ಕಾದಾಡಲಿದೆ. ಡೆಲ್ಲಿ-ಚೆನ್ನೈ ಎರಡೂ ತಂಡಗಳು ಬಲಿಷ್ಠವಾಗಿದ್ದು, ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ (Dubai International Cricket Stadium) ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ ನಾಲ್ಕರಲ್ಲಷ್ಟೆ ಸೋತಿದೆ. 10 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಚೆನ್ನೈ ಆಡಿದ 14 ಪಂದ್ಯಗಳಲ್ಲಿ ಒಂಬತ್ತರಲ್ಲಿ ಗೆಲುವು ಕಂಡಿದ್ದು ಐದರಲ್ಲಿ ಸೋತಿದೆ. ಅಚ್ಚರಿ ಎಂದರೆ ಲೀಗ್ ಹಂತದ ಎರಡೂ ಪಂದ್ಯಗಳಲ್ಲಿ ಚೆನ್ನೈ ತಂಡ ಡೆಲ್ಲಿ ವಿರುದ್ಧ ಸೋತಿದೆ. ಹೀಗಾಗಿ ಈ ಮೊದಲ ಕ್ವಾಲಿಫೈಯರ್ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ.

ಚೆನ್ನೈ ತಂಡದ ಪ್ರಮುಖ ಅಸ್ತ್ರ ಆರಂಭಿಕ ಬ್ಯಾಟರ್​ಗಳು ಮತ್ತು ಫಿನಿಶರ್​ಗಳು, ಮಧ್ಯಮ ಕ್ರಮಾಂಕದಲ್ಲಿ ಕೊಂಚ ಮಂಕಾಗಿದೆ. ಓಪನರ್​ಗಳಾದ ರುತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡುಪ್ಲೆಸಿಸ್ ಬಹುತೇಕದ ಪಂದ್ಯಗಳಲ್ಲಿ ತಂಡಕ್ಕೆ ಬೊಂಬಾಟ್ ಆರಂಭ ಒದಗಿಸಿದ್ದಾರೆ. ಅಂಬಟಿ ರಾಯುಡು ಕೂಡ ತಂಡಕ್ಕೆ ನೆರವಾಗುತ್ತಿದ್ದಾರೆ. ಮೊಯೀನ್ ಅಲಿ ಬ್ಯಾಟ್​ನಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಬಂದಿಲ್ಲ. ರಾಬಿನ್ ಉತ್ತಪ್ಪ ಅಥವಾ ಸುರೇಶ್ ರೈನಾ ಇವರಿಬ್ಬರಲ್ಲಿ ಯಾರನ್ನು ಕಣಕ್ಕಿಳಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.

ಎಂ. ಎಸ್ ಧೋನಿ ಬ್ಯಾಟ್ ಸದ್ದು ಮಾಡದಿರುವುದು ಬೇಸರದ ಸಂಗತಿ. ಆದರೆ, ಇದರಿಂದ ತಂಡಕ್ಕೆ ದೊಡ್ಡ ಮಟ್ಟದ ನಷ್ಟ ಉಂಟಾಗಿಲ್ಲ. ಯಾಕಂದ್ರೆ ಫಿನಿಶಿಂಗ್ ಜವಾಬ್ದಾರಿಯನ್ನು ರವೀಂದ್ರ ಜಡೇಜಾ ಮತ್ತು ಡ್ವೇನ್ ಬ್ರಾವೋ ಅಮೋಘವಾಗಿ ಮಾಡುತ್ತಿದ್ದಾರೆ. ಬೌಲಿಂಗ್​ನಲ್ಲಿ ಜೋಶ್ ಹ್ಯಾಜ್ಲೆವುಡ್ ಪರಿಣಾಮಕಾರಿಯಾಗಿ ಗೋಚರಿಸುತ್ತಿದ್ದಾರೆ. ಇವರಿಗೆ ದೀಪಕ್ ಚಹಾರ್ ಮತ್ತು ಶಾರ್ದೂಲ್ ಠಾಕೂರ್ ಸಾಥ್ ನೀಡಬೇಕಿದೆ.

ಇತ್ತ ಡೆಲ್ಲಿ ತಂಡ ಕಳೆದ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಅಂತಿಮ ಹಂತದಲ್ಲಿ ಎಡವಿತ್ತು. ಚೆನ್ನೈಯಂತೆ ಡೆಲ್ಲಿಗೂ ಓಪನರ್​ಗಳೇ ಪ್ರಮುಖ ಅಸ್ತ್ರ. ಶಿಖರ್ ಧವನ್ ಹಾಗೂ ಪೃಥ್ವಿ ಶಾ ತಂಡಕ್ಕೆ ಭರ್ಜರಿ ಆರಂಭ ಒದಗಿಸುತ್ತುದ್ದಾರೆ. ಆದರೆ, ಶ್ರೇಯಸ್ ಅಯ್ಯರ್ ಫಾರ್ಮ್​ನಲ್ಲಿ ಇಲ್ಲದಿರುವುದು ಹಿನ್ನಡೆಯಾಗಿದೆ. ನಾಯಕ ರಿಷಭ್ ಪಂತ್ ಕೂಡ ಮಾರಕವಾಗಿ ಕಾಣುತ್ತಿಲ್ಲ. ಶ್ರಿಮ್ರೋನ್ ಹೆಟ್ಮೇರ್ ಫಿನಿಶಿಂಗ್ ಜವಾಬ್ದಾರಿ ವಹಿಸುತ್ತಿದ್ದಾರೆ. ಮಾರ್ಕಸ್ ಸ್ಟಾಯಿನಿಸ್ ಇಂಜುರಿಯಿಂದ ಗುಣಮುಖರಾಗಿದ್ದರೆ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಡೆಲ್ಲಿ ಬೌಲಿಂಗ್ ಅದ್ಭುತವಾಗಿದೆ. ಆವೇಶ್ ಖಾನ್ ಬೆಂಕಿ ಚೆಂಡು ಉಗುಳುತ್ತಿದ್ದರೆ ಇವರಿಗೆ ಆನ್ರಿಚ್ ನಾರ್ಟ್ಜೆ ಮತ್ತು ಕಗಿಸೊ ರಬಾಡ ಉತ್ತಮ ಸಾಥ್ ನೀಡುತ್ತಿದ್ದಾರೆ. ಆರ್. ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಸ್ಪಿನ್ ಕೂಡ ವರ್ಕೌಟ್ ಆಗುತ್ತಿದೆ.

ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ ಒಟ್ಟು 25 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 15 ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡ 10 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

ಟೀಮ್ ಇಂಡಿಯಾಗೆ ನೆಟ್ಸ್​​ನಲ್ಲಿ ಬೌಲ್ ಮಾಡಲು ಜೆ&ಕೆ ಎಕ್ಸ್​ಪ್ರೆಸ್​ ಮಲಿಕ್​ರನ್ನು ಯುಎಈಯಲ್ಲೇ ಉಳಿಯುವಂತೆ ಹೇಳಲಾಗಿದೆ

(DC vs CSK Qualifier 1 Rishabh Pant Delhi Capitals take on MS Dhoni Chennai Super Kings in Qualifier 1 of the IPL 2021)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada