Shikha Pandey: ಸ್ಪಿನ್ನರ್ಗಳಿಗೂ ಕಷ್ಟ: ವೇಗಿ ಶಿಖಾ ಪಾಂಡೆ ಎಸೆದ ಬಾಲ್ ಟರ್ನ್ ಆದ ಪರಿ ನೋಡಿ: ಕ್ಲೀನ್ ಬೌಲ್ಡ್
Australia Women vs India Women T20 Match: ಎರಡನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಆಟಗಾರ್ತಿ ಶಿಖಾ ಪಾಂಡೆ ತಮ್ಮ ಅದ್ಭುತ ಸ್ವಿಂಗ್ ಬಾಲ್ ಮೂಲಕ ಆಸ್ಟ್ರೇಲಿಯಾ ತಂಡದ ಬ್ಯಾಟರ್ ಅನ್ನು ಔಟ್ ಮಾಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಭಾರತ ಮಹಿಳಾ ಕ್ರಿಕೆಟ್ ತಂಡ (Indian Womens Cricket Team) ಕಾಂಗರೂಗಳ ನಾಡಿನಲ್ಲಿ ಬೀಡುಬಿಟ್ಟಿದ್ದು ಟಿ20 ಸರಣಿ ಆಡುತ್ತಿದೆ. ಶನಿವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತೀಯ ವನಿತೆಯರು (AUSW vs INDW) ಸೋಲು ಕಂಡರಾದರೂ ವೇಗಿ ಶಿಖಾ ಪಾಂಡೆ (Shikha Pandey) ಎಲ್ಲರ ಗಮನ ಸೆಳೆದರು. ತಮ್ಮ ಅದ್ಭುತ ಸ್ವಿಂಗ್ ಬಾಲ್ (Swing Ball) ಮೂಲಕ ಎದುರಾಳಿ ಬ್ಯಾಟರ್ ಅನ್ನು ಔಟ್ ಮಾಡಿದ್ದು ಶತಮಾನದ ಎಸೆತ ಎಂದು ಕರೆಯಲಾಗಿದೆ. ಹೌದು, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ (Team India) ನಿರೀಕ್ಷೆಗೆ ತಕ್ಕಂತೆ ಆಟವಾಡಲಿಲ್ಲ. 25 ರನ್ಗೂ ಮುನ್ನವೇ ಸ್ಮೃತಿ ಮಂದಾನ 1 ರನ್ (Smriti Mandhana), ಶೆಫಾಲಿ ವರ್ಮಾ (3) ಮತ್ತು ಜೆಮಿಯಾ ರೋಡ್ರಿಗಸ್ (7) ವಿಕೆಟ್ ಕಳೆದುಕೊಂಡಿತು. ಯಶ್ತಿಕಾ ಭಾಟಿಯಾ (8) ಹಾಗೂ ರಿಚಾ ಘೋಷ್ (2) ಕೂಡ ಬೇಗನೆ ಔಟ್ ಆದರು.
ಈ ಸಂದರ್ಭ ನಾಯಕಿ ಹರ್ಮನ್ಪ್ರೀತ್ ಕೌರ್ ಕೆಲಹೊತ್ತು ಬ್ಯಾಟ್ ಬೀಸಿ ತಂಡಕ್ಕೆ ಆಸರೆಯಾದರು. 20 ಎಸೆತಗಳಲ್ಲಿ 28 ರನ್ ಗಳಿಸಿದರು. ಚೆನ್ನಾಗಿಯೆ ಆಡುತ್ತಿದ್ದ ದೀಪ್ತಿ ಶರ್ಮಾ 16 ರನ್ ಗಳಿಸಿರುವಾಗ ರನೌಟ್ಗೆ ಬಲಿಯಾದರು. ಅಂತಿಮ ಹಂತದಲ್ಲಿ ಪೂಜಾ ವಸ್ತ್ರಾಕರ್ 26 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಿಡಿಸಿ ಅಜೇಯ 37 ರನ್ ಗಳಿಸಿದ ಪರಿಣಾಮ ಭಾರತ ಮಹಿಳಾ ತಂಡದ ಮೊತ್ತ 20 ಓವರ್ಗೆ 118ಕ್ಕೆ ತಲುಪಿತು. 9 ವಿಕೆಟ್ ಕಳೆದುಕೊಂಡಿದ್ದರು.
ಸುಲಭ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ವನಿತೆಯರಿಗೆ ಮೊದಲ ಓವರ್ನಲ್ಲೇ ಶಾಕ್ ನೀಡಿದ್ದು ಶಿಖಾ ಪಾಂಡೆ. ಇವರು ಎಸೆದ ಆ ಒಂದು ಎಸೆತವು ಇಡೀ ಕ್ರಿಕೆಟ್ ಲೋಕವನ್ನು ನಿಬ್ಬೆರಗಾಗಿಸಿದೆ. ತನ್ನ 2ನೇ ಎಸೆತದಲ್ಲಿ ಅಲೈಸಾ ಹೀಲಿ ಅವರನ್ನು ಸ್ವಿಂಗ್ ಎಸೆತದ ಮೂಲಕ ಬೌಲ್ಡ್ ಮಾಡಿದರು. ಸುಮಾರು 6-8 ಸ್ಟಂಪ್ಸ್ ದೂರದಲ್ಲೇ ಬಿದ್ದ ಚೆಂಡು, ಆಸೀಸ್ ಬ್ಯಾಟರ್‌ಗೆ ಕಣ್ತಿಪಿಸಿ ಮಿಡ್ ಸ್ಟಂಪ್‌ಗೆ ಬಡಿಯಿತು. ನಂಬಲಾಗದ ರೀತಿಯಲ್ಲಿ ಸ್ಪಿನ್ ಬಾಲ್ ರೀತಿ ಸ್ವಿಂಗ್ ಆದ ಆ ಚೆಂಡು ಸೀದಾ ಬೇಲ್ ಎಗರಿಸಿತು. ಆಫ್ಸೈಡ್ಆಚೆ ಬಿದ್ದು ಕಟ್ ಆದ ಈ ಚೆಂಡನ್ನ ಎದುರಿಸಲು ಯಾವ ಬ್ಯಾಟರ್ಗೂ ಅಸಾಧ್ಯದ ಮಾತೇ. ಬ್ಯಾಟರ್ ಅಲೈಸಾ ಹೀಲಿ ಈ ಬಾಲ್ನ ಇನ್ಸ್ವಿಂಗ್ ಕಂಡು ಕಕ್ಕಾಬಿಕ್ಕಿಯಾದರು.
Unreeeeeeal! ? How far did that ball move? #AUSvIND pic.twitter.com/D3g7jqRXWK
— cricket.com.au (@cricketcomau) October 9, 2021
ಆಸ್ಟ್ರೇಲಿಯಾ ಕ್ರಿಕೆಟ್ನ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿ ಇದರ ವಿಡಿಯೋ ಹಾಕಿ ಆಶ್ಚರ್ಯ ವ್ಯಕ್ತಪಡಿಸಲಾಯಿತು. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಬಹಳಷ್ಟು ವೈರಲ್ ಆಗುತ್ತಿದೆ.
Ball of the century, women’s cricket edition! Take a bow Shikha Pandey?? #AUSvIND pic.twitter.com/WjaixlkjIp
— Wasim Jaffer (@WasimJaffer14) October 9, 2021
ಆದರೆ, ಭಾರತೀಯ ಬೌಲರ್ಗಳು ನಂತರದಲ್ಲಿ ಇದೇ ರೀತಿಯ ಮಾರಕ ದಾಳಿ ಸಂಘಟಿಸಲು ಸಾಧ್ಯವಾಗಲಿಲ್ಲ. ಬೆತ್ ಮೂನೀ (36 ಎಸೆತ 34 ರನ್) ಮತ್ತು ಟಹಿಲಾ ಮೆಕ್ಗ್ರಥ್ (33 ಎಸೆತ 42* ರನ್) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 19.1 ಓವರ್ನಲ್ಲಿ 6 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿ 4 ವಿಕೆಟ್ಗಳ ಜಯ ಸಾಧಿಸಿದರು.
ಸದ್ಯ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದೆ. ಮೊದಲ ಟಿ-20 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಅಂತಿಮ ಮೂರನೇ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಇಂದು ಮಧ್ಯಾಹ್ನ 1:40ಕ್ಕೆ ಆರಂಭವಾಗಲಿದೆ.
T20 World Cup: ಟಿ20 ವಿಶ್ವಕಪ್ಗೆ ಭಾರತ ತಂಡದ ಬದಲಾವಣೆ ಕುರಿತು ಬಿಸಿಸಿಐಯಿಂದ ಶಾಕಿಂಗ್ ನಿರ್ಧಾರ
(AUSW vs INDW Shikha Pandey produced one of the greatest deliveries in 2nd T20I against Australia)