IPL 2021: ಕೊಹ್ಲಿಗಾಗಿ ಈ ಸಲ ಕಪ್ ಗೆದ್ದೇ ಗೆಲ್ತೇವೆ ಎಂದ RCB ಆಟಗಾರ

IPL 2021 RCB: ಖಂಡಿತವಾಗಿಯೂ ನಾವು ಈ ಸಲ ಕಪ್ ಗೆಲ್ಲಲಿದ್ದೇವೆ. ಏಕೆಂದರೆ ಇದು ನಾಯಕನಾಗಿ ವಿರಾಟ್ ಕೊಹ್ಲಿ ಅವರಿಗೆ ಇದು ಕೊನೆಯ ಟೂರ್ನಿ.

IPL 2021: ಕೊಹ್ಲಿಗಾಗಿ ಈ ಸಲ ಕಪ್ ಗೆದ್ದೇ ಗೆಲ್ತೇವೆ ಎಂದ RCB ಆಟಗಾರ
RCB

ಐಪಿಎಲ್​ನ (IPL 2021) ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC)​ ವಿರುದ್ದ ಆರ್​ಸಿಬಿ (RCB) ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿತು. ಹೀಗೆ ಆರ್​ಸಿಬಿಗೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದು ಯುವ ಬ್ಯಾಟರ್ ಕೆಎಸ್ ಭರತ್ (Ks Bharat). ಇದೀಗ ಆರ್​ಸಿಬಿ ಪ್ಲೇಆಫ್ ಪಂದ್ಯಕ್ಕೆ ಸಜ್ಜಾಗಿದೆ. ಅದರಂತೆ ಸೋಮವಾರ ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ಕೆಕೆಆರ್ ವಿರುದ್ದ ಆಡಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್​ಸಿಬಿ ಕ್ವಾಲಿಫೈಯರ್ ಪಂದ್ಯವಾಡಲಿದೆ ಎಂದು ಭರತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ಸಲ ಆರ್​ಸಿಬಿ ಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಭರತ್, ಖಂಡಿತವಾಗಿಯೂ ನಾವು ಈ ಸಲ ಕಪ್ ಗೆಲ್ಲಲಿದ್ದೇವೆ. ಏಕೆಂದರೆ ಇದು ನಾಯಕನಾಗಿ ವಿರಾಟ್ ಕೊಹ್ಲಿ ಅವರಿಗೆ ಇದು ಕೊನೆಯ ಟೂರ್ನಿ. ಹೀಗಾಗಿ ನಮ್ಮ ನಾಯಕನಿಗೆ ಕಪ್ ಗೆದ್ದು ಕೊಡುವುದು ನಮ್ಮೆಲ್ಲರ ಕನಸಾಗಿದೆ. ವಿರಾಟ್ ಭಾಯ್​ ಜೊತೆ ಆಡುವುದಾದು ಹೆಮ್ಮೆ. ಅವರು ಯುವ ಆಟಗಾರರನ್ನು ತುಂಬಾ ಪ್ರೊತ್ಸಾಹಿಸುತ್ತಾರೆ ಎಂದು ಭರತ್ ತಿಳಿಸಿದರು.

ಈ ಎಲ್ಲಾ ಕಾರಣಗಳಿಂದಾಗಿ ವಿರಾಟ್ ಕೊಹ್ಲಿ ಅವರಿಗೆ ಕಪ್​ ಗೆದ್ದು ಕೊಡಬೇಕೆಂಬುದು ನಮ್ಮಲ್ಲೆರ ಆಸೆ. ಆರ್​ಸಿಬಿ ನಾಯಕತ್ವಕ್ಕೆ ಅವರು ರಾಜೀನಾಮೆ ನೀಡುವ ಸಂದರ್ಭದಲ್ಲಿ ಕಪ್ ಗೆದ್ದು ಕೊಟ್ಟರೆ ಅದು ಕೇಕ್ ಮೇಲಿರುವ ಚೆರಿಯಂತೆ, ಕೊಹ್ಲಿ ಪಾಲಿಗೆ ಕಿರೀಟವಾಗಿರಲಿದೆ. ಹೀಗಾಗಿ ವಿರಾಟ್ ಕೊಹ್ಲಿ ಅವರಿಗಾಗಿ ಈ ಸಲ ನಾವು ಕಪ್ ಗೆಲ್ಲಲಿದ್ದೇವೆ ಎಂದು ಭರತ್ ತಿಳಿಸಿದರು.

ಇದನ್ನೂ ಓದಿ:  KL Rahul: ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ 7 ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್

ಇದನ್ನೂ ಓದಿ: IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್​ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!

(IPL 2021: Winning the cup and giving Virat Kohli, says RCB’s KS Bharat)

Read Full Article

Click on your DTH Provider to Add TV9 Kannada