ಕಾಂಗ್ರೆಸ್ ಸಂಘಟನೆ ಬಲಿಷ್ಠವಾಗಿದ್ದರೆ ಮತ್ತು ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಂಡರೆ ಮಾತ್ರ ಚುನಾವಣೆ ಗೆಲ್ಲಬಹುದು: ಮಲ್ಲಿಕಾರ್ಜುನ ಖರ್ಗೆ
ಭಾನುವಾರದ ಸಭೆಯಲ್ಲಿ ಬಿಜೆಪಿ ವಿರುದ್ಧ ಕಿಡಿ ಕಾರಿದ ಖರ್ಗೆ "ದ್ವೇಷದ ಬೀಜಗಳನ್ನು" ಬಿತ್ತುವ ಮತ್ತು "ವಿಭಜನೆಯ ಫಲವನ್ನು ಕೊಯ್ಯುವ" ಆಡಳಿತ ಶಕ್ತಿಗಳ ವಿರುದ್ಧ ಹೋರಾಡುವುದು ಪಕ್ಷದ ಸದಸ್ಯರ ಕರ್ತವ್ಯ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ರಚಿಸಿರುವ ಪಕ್ಷ ಮುನ್ನಡೆಸುವ ಸಮಿತಿಯ (steering committee) ಸದಸ್ಯರ ಮೊದಲ ಸಭೆಯನ್ನು ಭಾನುವಾರ ನಡೆದಿದೆ. ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸೇರಿದಂತೆ ಪ್ರಮುಖ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು. ಇನ್ನು ಕೆಲವೇ ದಿನಗಳಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ. ದೆಹಲಿಯಲ್ಲಿ ನಿರ್ಣಾಯಕ ನಾಗರಿಕ ಚುನಾವಣೆಗಳು ನಡೆಯುತ್ತಿದ್ದು ಮತ್ತು ಗುಜರಾತ್ (Gujarat) ಸೋಮವಾರ ಎರಡನೇ ಹಂತದ ಮತದಾನಕ್ಕೆ ತಯಾರಿ ನಡೆಸುತ್ತಿರುವ ಹೊತ್ತಲ್ಲೇ ಈ ಸಭೆ ನಡೆಯುತ್ತಿದೆ. ಅಕ್ಟೋಬರ್‌ನಲ್ಲಿ, ಖರ್ಗೆ ಅವರು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಬದಲಿಗೆ 47 ಸದಸ್ಯರ ಪಕ್ಷವನ್ನು ಮುನ್ನಡೆಸುವ ಸಮಿತಿ ರಚಿಸಿದರು. ಸಿಡಬ್ಲ್ಯೂಸಿಯಹೆಚ್ಚಿನ ಸದಸ್ಯರು ಇದರಲ್ಲಿದ್ದಾರೆ. ಮೇಲಿನಿಂದ ಕೆಳಕ್ಕೆ ಸಾಂಸ್ಥಿಕ ಹೊಣೆಗಾರಿಕೆಯು ಪಕ್ಷ ಮತ್ತು ದೇಶದ ಕಡೆಗೆ ನಮ್ಮ ಜವಾಬ್ದಾರಿಯ ದೊಡ್ಡ ಭಾಗವಾಗಿದೆ ಎಂದು ನಾನು ನಂಬುತ್ತೇನೆ. ಕಾಂಗ್ರೆಸ್ ಸಂಘಟನೆ ಬಲಿಷ್ಠವಾಗಿದ್ದರೆ, ಜವಾಬ್ದಾರಿಯುತವಾಗಿ, ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಂಡರೆ ಮಾತ್ರ ಚುನಾವಣೆ ಗೆದ್ದು ದೇಶದ ಜನರ ಸೇವೆ ಮಾಡಲು ಸಾಧ್ಯವಾಗುತ್ತದೆ ಎಂದು ಕಾಂಗ್ರೆಸ್ ಮುಖ್ಯಸ್ಥರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಇದು ಸರಿಯೂ ಅಲ್ಲ ಸ್ವೀಕಾರಾರ್ಹವೂ ಅಲ್ಲ. ತಮ್ಮ ಜವಾಬ್ದಾರಿಯನ್ನು ಪೂರೈಸಲು ಸಾಧ್ಯವಾಗದವರು, ಅವರು ತಮ್ಮ ಸಹೋದ್ಯೋಗಿಗಳಿಗೆ ದಾರಿ ಮಾಡಿಕೊಡಬೇಕಾಗುತ್ತದೆ ಎಂದು ಅವರು ಹೇಳಿದರು.
एआईसीसी ने आज अपनी पहली स्टीयरिंग कमेटी की बैठक आयोजित की।
हम लोगों की आवाज उठाने और संगठन को फिर से मजबूत करने के लिए दृढ़ संकल्पित हैं।
हम भविष्य की एजेंडे पर चर्चा करते रहेंगे। pic.twitter.com/TWOq4OphJd
— Mallikarjun Kharge (@kharge) December 4, 2022
ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಸಚಿನ್ ಪೈಲಟ್ ಕುರಿತು ಗೆಹ್ಲೋಟ್ ಮಾಡಿದ ಹೇಳಿಕೆಗಳ ನಂತರ ರಾಜಸ್ಥಾನದಲ್ಲಿ ಬಿಕ್ಕಟ್ಟು ಉದ್ಭವಿಸಿದ ದಿನಗಳ ನಂತರ ಅವರ ಈ ಹೇಳಿಕೆಗಳು ಬಂದಿದೆ. ವಿವಾದದ ನಂತರವೇ ಪಕ್ಷವು ಸಮಸ್ಯೆಯನ್ನು ಇತ್ಯರ್ಥಪಡಿಸಲು ಸಾಧ್ಯವಾಯಿತು.
Congress Steering Committee, chaired by Congress President Shri @Kharge and Chairperson CPP Smt. Sonia Gandhi, met at AICC HQ. pic.twitter.com/r813XnPxKU
— Congress, Minority Department (@INCMinority) December 4, 2022
ಭಾನುವಾರದ ಸಭೆಯಲ್ಲಿ ಬಿಜೆಪಿ ವಿರುದ್ಧ ಕಿಡಿ ಕಾರಿದ ಖರ್ಗೆ “ದ್ವೇಷದ ಬೀಜಗಳನ್ನು” ಬಿತ್ತುವ ಮತ್ತು “ವಿಭಜನೆಯ ಫಲವನ್ನು ಕೊಯ್ಯುವ” ಆಡಳಿತ ಶಕ್ತಿಗಳ ವಿರುದ್ಧ ಹೋರಾಡುವುದು ಪಕ್ಷದ ಸದಸ್ಯರ ಕರ್ತವ್ಯ ಎಂದು ಹೇಳಿದ್ದಾರೆ. ಮುಂದಿನ ವರ್ಷ ಹೆಚ್ಚಿನ ರಾಜ್ಯಗಳು ಮತದಾನಕ್ಕೆ ಸಜ್ಜಾಗುತ್ತಿರುವಂತೆಯೇ ಕಾಂಗ್ರೆಸ್ ತನ್ನ ಚುನಾವಣಾ ಭವಿಷ್ಯವನ್ನು ಪುನರುಜ್ಜೀವನಗೊಳಿಸಲು ತೀವ್ರ ಪ್ರಯತ್ನಗಳನ್ನು ಮಾಡುತ್ತಿದೆ.2024 ರ ರಾಷ್ಟ್ರೀಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸೆಪ್ಟೆಂಬರ್‌ನಲ್ಲಿ ರಾಷ್ಟ್ರವ್ಯಾಪಿ ಭಾರತ್ ಜೋಡೋ ಯಾತ್ರೆ ಆರಂಭಿಸಿದೆ.
ಮತ್ತಷ್ಚು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:09 pm, Sun, 4 December 22