ಇದೂ ನಾಟಕ !- ವೈರಲ್ ಆದ ಎರಡು ಫೋಟೋಗಳಲ್ಲಿ ವ್ಯತ್ಯಾಸ ಗುರುತಿಸಿ, ತೋರಿಸಿದ ಕಾಂಗ್ರೆಸ್
ಪ್ರತಿಪಕ್ಷ ಕಾಂಗ್ರೆಸ್ ಇಲ್ಲಿಯೂ ವ್ಯಂಗ್ಯವಾಡಿದೆ. ಕ್ಯಾಂಡಿಡ್ನಂತೆ ಕಾಣುವ ಈ ಫೋಟೋಗಳು ಖಂಡಿತ ಕ್ಯಾಂಡಿಡ್ ಅಲ್ಲ. ಪಕ್ಕಾ ಪೋಸ್ ಎಂದು ಹೇಳಿದೆ.
ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಜತೆಗಿರುವ ಎರಡು ಫೋಟೋಗಳು ನಿನ್ನೆಯಿಂದ ವೈರಲ್ ಆಗುತ್ತಿವೆ. ಈ ಫೋಟೋವನ್ನು ನೋಡಿ ಅನೇಕರು ಮೆಚ್ಚಿಕೊಂಡಿದ್ದರೆ, ಪ್ರತಿಪಕ್ಷಗಳೂ ಸೇರಿ ಹಲವರು ವ್ಯಂಗ್ಯವಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಲಖನೌಗೆ ಭೇಟಿ ಕೊಟ್ಟಿದ್ದರು. ಈ ವೇಳೆ ತೆಗೆದ ಫೋಟೋಗಳನ್ನು ಯೋಗಿ ಆದಿತ್ಯನಾಥ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದರು. ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ್ ಇಬ್ಬರೂ ಆಳವಾದ ಚರ್ಚೆಯಲ್ಲಿ ತೊಡಗಿರುವ ಫೋಟೋಗಳು ಇವಾಗಿದ್ದು, ಮೋದಿಯವರು ಯೋಗಿಯವರ ಹೆಗಲ ಮೇಲೆ ಕೈಹಾಕಿದ್ದಾರೆ. ಹಾಗಾಗಿ ಇವು ವಿಶೇಷ ಫೋಟೋಗಳು ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು.
ಆದರೆ ಪ್ರತಿಪಕ್ಷ ಕಾಂಗ್ರೆಸ್ ಇಲ್ಲಿಯೂ ವ್ಯಂಗ್ಯವಾಡಿದೆ. ಕ್ಯಾಂಡಿಡ್ನಂತೆ ಕಾಣುವ ಈ ಫೋಟೋಗಳು ಖಂಡಿತ ಕ್ಯಾಂಡಿಡ್ ಅಲ್ಲ. ಪಕ್ಕಾ ಪೋಸ್ ಎಂದು ಹೇಳಿದೆ. ಕೆಲವು ಕಾಂಗ್ರೆಸ್ ನಾಯಕರು ತಮ್ಮ ಟ್ವಿಟರ್ನಲ್ಲಿ ಎರಡೂ ಫೋಟೋಗಳನ್ನು ಶೇರ್ ಮಾಡಿಕೊಂಡು ಇವೆರಡೂ ಫೋಟೋಗಳ ಮಧ್ಯೆ ಇರುವ ವ್ಯತ್ಯಾಸವನ್ನೂ ತೋರಿಸಿದ್ದಾರೆ. ಎರಡೂ ಫೋಟೋಗಳು ಒಂದೇ ಬಾರಿ ತೆಗೆದಿದ್ದಾದರೆ, ಕ್ಯಾಂಡಿಡ್ ಆಗಿದ್ದರೆ ಹೀಗೇಕೆ ವಿಭಿನ್ನತೆ ಗೋಚರಿಸುತ್ತಿತ್ತು? ಪ್ರಧಾನಿ ಮೋದಿಯವರ ಉಡುಪಿನಲ್ಲೇಕೆ ಬದಲಾವಣೆ ಆಗುತ್ತಿತ್ತು ಎಂಬುದು ಕಾಂಗ್ರೆಸ್ಸಿಗರ ಪ್ರಶ್ನೆ.
ಈ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಲ್ಲವೂ ಸರಿಯಾಗಿದೆ ಎಂದು ಬಿಂಬಿಸಲು ಹೊರಟಿದ್ದಾರೆ. ಆದರೆ ಒಂದು ಫೋಟೋದಲ್ಲಿ ಪ್ರಧಾನಿ ಮೋದಿಯವರು ಹೆಗಲಿಗೆ ಅಂಗೋಚಾ ಹೊದ್ದಿದ್ದಾರೆ. ಇನ್ನೊಂದರಲ್ಲಿ ಶಾಲು ಹಾಕಿಕೊಂಡಿದ್ದಾರೆ. ಎದುರಿನಿಂದ ತೆಗೆದ ಫೋಟೋದಲ್ಲಿ ಮೋದಿಯವರ ಮುಖದಲ್ಲಿ ಕಿರಿಕಿರಿ ಮತ್ತು ಭಯ ಎದ್ದು ಕಾಣುತ್ತಿದೆ. ಈ ಫೋಟೋದಿಂದ ಯೋಗಿಯವರಿಗೆ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಲಿದೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶಿರಂತೆ ಹೇಳಿದ್ದಾರೆ.
सूबे के मुख्यमंत्री को फ़ोटो लगा के यह साबित करना पड़ रहा है, सब ठीक है
एक फ़ोटो में मोदी जी अँगोछा डाले हैं एक में शॉल। झुँझलाहट और घबराहट दोनों साफ हैं
इस तस्वीर से फ़ायदा कम नुक़सान ज़्यादा हो रहा है योगी जी। सूचना सलाहकार ले डूबेंगे pic.twitter.com/iKp8NTisnX
— Supriya Shrinate (@SupriyaShrinate) November 21, 2021
ಇನ್ನು ಯುತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಕೂಡ ಎರಡೂ ಫೋಟೋ ಶೇರ್ ಮಾಡಿಕೊಂಡು ವ್ಯತ್ಯಾಸ ಗುರುತಿಸಿ ಎಂದು ಮಾರ್ಕ್ ಮಾಡಿ ತೋರಿಸಿದ್ದಾರೆ.
Spot the difference ? pic.twitter.com/f5XJ2uz7Of
— Srinivas BV (@srinivasiyc) November 21, 2021
ಇದನ್ನೂ ಓದಿ: ಮೋದಿ ಜೀ-ಯೋಗಿ ಜೀ: ಅಪರೂಪದ ಫೋಟೋ ಶೇರ್ ಮಾಡಿಕೊಂಡು ಸಣ್ಣ ಕವನವನ್ನೇ ಬರೆದ ಉತ್ತರಪ್ರದೇಶ ಸಿಎಂ
ಕೇರಳದಲ್ಲಿ ಹಲಾಲ್ ಆಹಾರಗಳನ್ನು ನಿಷೇಧಿಸುವಂತೆ ಬಿಜೆಪಿ ನಾಯಕರ ಆಗ್ರಹ; ಅದು ಉಗ್ರಗಾಮಿಗಳ ಅಸ್ತ್ರವೆಂದ ಪಕ್ಷ