Lok sabha Election: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶೇ50ರಷ್ಟು ಸರ್ಕಾರಿ ಉದ್ಯೋಗ ಮಹಿಳೆಯರಿಗೆ ಮೀಸಲು: ರಾಹುಲ್ ಗಾಂಧಿ

|

Updated on: Mar 29, 2024 | 6:07 PM

ಸುರಕ್ಷಿತ ಆದಾಯ, ಭವಿಷ್ಯ, ಸ್ಥಿರತೆ ಮತ್ತು ಸ್ವಾಭಿಮಾನ ಹೊಂದಿರುವ ಮಹಿಳೆಯರು ನಿಜವಾಗಿಯೂ ಸಮಾಜದ ಶಕ್ತಿಯಾಗುತ್ತಾರೆ. 50 ರಷ್ಟು ಸರ್ಕಾರಿ ಹುದ್ದೆಗಳಲ್ಲಿ ಮಹಿಳೆಯರು ಇರುವುದು ದೇಶದ ಪ್ರತಿಯೊಬ್ಬ ಮಹಿಳೆಗೆ ಶಕ್ತಿ ನೀಡುತ್ತದೆ. ಶಕ್ತಿಯುತ ಮಹಿಳೆಯರು ಭಾರತದ ಭವಿಷ್ಯವನ್ನು ಬದಲಾಯಿಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Lok sabha Election: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶೇ50ರಷ್ಟು ಸರ್ಕಾರಿ ಉದ್ಯೋಗ ಮಹಿಳೆಯರಿಗೆ ಮೀಸಲು: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us on

ದೆಹಲಿ ಮಾರ್ಚ್ 29: ಲೋಕಸಭೆ ಚುನಾವಣೆಯಲ್ಲಿ (Lok sabha Elections) ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಶೇ 50ರಷ್ಟು ಸರ್ಕಾರಿ ಉದ್ಯೋಗಗಳನ್ನು ಮಹಿಳೆಯರಿಗೆ ಮೀಸಲಿಡುವುದಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಶುಕ್ರವಾರ ಭರವಸೆ ನೀಡಿದ್ದಾರೆ.  ಭಾರತದಲ್ಲಿ ಮಹಿಳೆಯರ ಜನಸಂಖ್ಯೆ ಶೇಕಡ 50 ಅಲ್ಲವೇ? ಹೈಯರ್ ಸೆಕೆಂಡರಿ ಮತ್ತು ಉನ್ನತ ಶಿಕ್ಷಣದಲ್ಲಿ (higher education) ಮಹಿಳೆಯರ ಉಪಸ್ಥಿತಿ ಶೇಕಡ 50 ಅಲ್ಲವೇ? ಹಾಗಿದ್ದಲ್ಲಿ, ವ್ಯವಸ್ಥೆಯಲ್ಲಿ ಅವರ ಪಾಲು ಏಕೆ ಕಡಿಮೆಯಾಗಿದೆ.? ‘ಆಧಿ ಆಬಾದಿ ಪೂರಾ ಹಕ್’ (ಅರ್ಧ ಜನಸಂಖ್ಯೆಗೆ ಪೂರ್ತಿ ಹಕ್ಕು) ಎಂದು ಕಾಂಗ್ರೆಸ್ ಬಯಸುತ್ತದೆ. ದೇಶವನ್ನು ನಡೆಸುವ ಸರ್ಕಾರದಲ್ಲಿ ಮಹಿಳೆಯರಿಗೆ ಸಮಾನ ಕೊಡುಗೆ ನೀಡಿದಾಗ ಮಾತ್ರ ಮಹಿಳೆಯರ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ.

ಎಲ್ಲಾ ಹೊಸ ಸರ್ಕಾರಿ ಉದ್ಯೋಗಗಳಲ್ಲಿ ಅರ್ಧದಷ್ಟು ನೇಮಕಾತಿಗಳನ್ನು ಮಹಿಳೆಯರಿಗೆ ಮೀಸಲಿಡಬೇಕು ಎಂದು ಕಾಂಗ್ರೆಸ್ ನಿರ್ಧರಿಸಿದೆ. ಸಂಸತ್ತಿನಲ್ಲಿ ಮತ್ತು ಅಸೆಂಬ್ಲಿಗಳಲ್ಲಿ ಮಹಿಳಾ ಮೀಸಲಾತಿಯ ತಕ್ಷಣದ ಅನುಷ್ಠಾನದ ಪರವಾಗಿ ನಾವು ಕೂಡ ಇದ್ದೇವೆ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.


ಸುರಕ್ಷಿತ ಆದಾಯ, ಭವಿಷ್ಯ, ಸ್ಥಿರತೆ ಮತ್ತು ಸ್ವಾಭಿಮಾನ ಹೊಂದಿರುವ ಮಹಿಳೆಯರು ನಿಜವಾಗಿಯೂ ಸಮಾಜದ ಶಕ್ತಿಯಾಗುತ್ತಾರೆ. 50 ರಷ್ಟು ಸರ್ಕಾರಿ ಹುದ್ದೆಗಳಲ್ಲಿ ಮಹಿಳೆಯರು ಇರುವುದು ದೇಶದ ಪ್ರತಿಯೊಬ್ಬ ಮಹಿಳೆಗೆ ಶಕ್ತಿ ನೀಡುತ್ತದೆ. ಶಕ್ತಿಯುತ ಮಹಿಳೆಯರು ಭಾರತದ ಭವಿಷ್ಯವನ್ನು ಬದಲಾಯಿಸುತ್ತಾರೆ ಎಂದು ರಾಹುಲ್ ಹೇಳಿದ್ದಾರೆ.

ಈ ಹಿಂದೆ, ಸಾರ್ವತ್ರಿಕ ಚುನಾವಣೆಗೆ ಮುನ್ನ ಕಾಂಗ್ರೆಸ್ ಮಹಿಳೆಯರಿಗೆ ಐದು ಭರವಸೆಗಳನ್ನು ಘೋಷಿಸಿತ್ತು.  ಪಕ್ಷದ “ಮಹಾಲಕ್ಷ್ಮಿ” ಖಾತ್ರಿಯಡಿ, ಪ್ರತಿ ಬಡ ಕುಟುಂಬದಿಂದ ಒಬ್ಬ ಮಹಿಳೆಗೆ ನೇರ ನಗದು ವರ್ಗಾವಣೆಯ ಮೂಲಕ ವಾರ್ಷಿಕ ₹ 1 ಲಕ್ಷ ಸಹಾಯವನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಮುಖ್ತಾರ್ ಅನ್ಸಾರಿ ಸಾವು: ಪ್ರತಿಪಕ್ಷಗಳ ವಿರುದ್ಧ ಬಿಜೆಪಿ ವಾಗ್ದಾಳಿ, ಸುಪ್ರೀಂ ಮೇಲ್ವಿಚಾರಣೆಯ ತನಿಖೆಗೆ ಅಖಿಲೇಶ್ ಯಾದವ್ ಆಗ್ರಹ

ಇದಲ್ಲದೆ, ಕಾಂಗ್ರೆಸ್ “ಆದಿ ಆಬಾದಿ, ಪೂರಾ ಹಕ್” ಅನ್ನು ಖಚಿತಪಡಿಸುತ್ತದೆ, ಅದರ ಅಡಿಯಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಎಲ್ಲಾ ಹೊಸ ನೇಮಕಾತಿಗಳಲ್ಲಿ 50 ಪ್ರತಿಶತವನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ.

“ಶಕ್ತಿ ಕಾ ಸಮ್ಮಾನ್” ಖಾತರಿ ಅಡಿಯಲ್ಲಿ, ಆಶಾ, ಅಂಗನವಾಡಿ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರ ಮಾಸಿಕ ವೇತನಕ್ಕೆ ಕೇಂದ್ರದ ಕೊಡುಗೆಯನ್ನು ದ್ವಿಗುಣಗೊಳಿಸಲಾಗುವುದು ಎಂದು ಖರ್ಗೆ ಹೇಳಿದ್ದಾರೆ. “ಅಧಿಕಾರ್ ಮೈತ್ರಿ” ಗ್ಯಾರಂಟಿ ಅಡಿಯಲ್ಲಿ, ಮಹಿಳೆಯರಿಗೆ ತಮ್ಮ ಕಾನೂನು ಹಕ್ಕುಗಳ ಬಗ್ಗೆ ಶಿಕ್ಷಣ ನೀಡಲು ಮತ್ತು ಅವರ ಜಾರಿಯಲ್ಲಿ ಅವರಿಗೆ ಸಹಾಯ ಮಾಡಲು ಪ್ಯಾರಾ-ಲೀಗಲ್ ಕಾರ್ಯಕಾರಿಯಾಗಿ ಸೇವೆ ಸಲ್ಲಿಸಲು ಕಾಂಗ್ರೆಸ್ ಪ್ರತಿ ಪಂಚಾಯತ್‌ನಲ್ಲಿ “ಅಧಿಕಾರ್ ಮೈತ್ರಿ” ಯನ್ನು ನೇಮಿಸುತ್ತದೆ.

“ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್‌ಗಳು” ಖಾತರಿಯಡಿಯಲ್ಲಿ, ಕಾಂಗ್ರೆಸ್ ನೇತೃತ್ವದ ಕೇಂದ್ರವು ದೇಶದಲ್ಲಿ ಉದ್ಯೋಗಿ ಮಹಿಳೆಯರಿಗಾಗಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದರಂತೆ ಹಾಸ್ಟೆಲ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:00 pm, Fri, 29 March 24