AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್ ಗಾಂಧಿಯ ‘ಹಿಂದೂ ಶಕ್ತಿ’ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಕಂಗನಾ ರಣಾವತ್

ಬಿಜೆಪಿಯಿಂದ ನಾಮನಿರ್ದೇಶನಗೊಂಡ ನಂತರ ನನಗೆ ಅತೀವ ಸಂತಸವಾಯಿತು. ಮರಳಿ ಮನೆಗೆ ಬರುವ ಖುಷಿಯನ್ನು ಯಾರು ಆಚರಿಸುವುದಿಲ್ಲ ಹೇಳಿ? ಕಾಂಗ್ರೆಸ್‌ನ ಅಗ್ರ ನಾಯಕ ರಾಹುಲ್ ಗಾಂಧಿ ಅವರು 'ಹಿಂದೂಗಳಲ್ಲಿರುವ ಶಕ್ತಿ ನಿರ್ಮೂಲನೆ' ಕುರಿತು ಮಾತನಾಡಿದ್ದಾರೆ. ಅವರ ವಕ್ತಾರರು ಮಂಡಿಯ ಮಹಿಳೆಯರ ಬಗ್ಗೆ ಅಕ್ಷೇಪಾರ್ಹ ಪದ ಬಳಸಿದರು ಎಂದು ಕಾಂಗ್ರೆಸ್ ನಾಯಕತ್ವ ವಿರುದ್ಧ ಕಂಗನಾ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿಯ 'ಹಿಂದೂ ಶಕ್ತಿ' ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಕಂಗನಾ ರಣಾವತ್
ಕಂಗನಾ ರಣಾವತ್ - ರಾಹುಲ್ ಗಾಂಧಿ
ರಶ್ಮಿ ಕಲ್ಲಕಟ್ಟ
|

Updated on: Mar 29, 2024 | 6:55 PM

Share

ದೆಹಲಿ ಮಾರ್ಚ್ 29: ಕಂಗನಾ ರಣಾವತ್ (Kangana Ranaut) ಅವರು ಹಿಮಾಚಲ ಪ್ರದೇಶದ (Himachal Pradesh) ಮಂಡಿಯಲ್ಲಿ 2024 ರ ಲೋಕಸಭಾ ಚುನಾವಣೆಗಾಗಿ (Lok Sabha election) ತಮ್ಮ ಪ್ರಚಾರವನ್ನು ಪ್ರಾರಂಭಿಸುತ್ತಿದ್ದಂತೆ ಇತ್ತೀಚಿನ ವಿವಾದವನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಮಂಡಿಯಿಂದ ತನ್ನ ನಾಮನಿರ್ದೇಶನವನ್ನು ಕಾಂಗ್ರೆಸ್ ಒಪ್ಪುತ್ತಿಲ್ಲ. ಹಾಗಾಗಿ ಅದು ಅಗ್ಗದ ರಾಜಕೀಯದಲ್ಲಿ ತೊಡಗಲು ಪ್ರಾರಂಭಿಸಿತು ಎಂದು ಕಂಗನಾ ತಮ್ಮ ಚೊಚ್ಚಲ ರ‍್ಯಾಲಿಯಲ್ಲಿ ಹೇಳಿದ್ದಾರೆ. ಬಿಜೆಪಿಯಿಂದ ನಾಮನಿರ್ದೇಶನಗೊಂಡ ನಂತರ ನನಗೆ ಅತೀವ ಸಂತಸವಾಯಿತು. ಮರಳಿ ಮನೆಗೆ ಬರುವ ಖುಷಿಯನ್ನು ಯಾರು ಆಚರಿಸುವುದಿಲ್ಲ ಹೇಳಿ? ಕಾಂಗ್ರೆಸ್‌ನ ಅಗ್ರ ನಾಯಕ ರಾಹುಲ್ ಗಾಂಧಿ ಅವರು ‘ಹಿಂದೂಗಳಲ್ಲಿರುವ ಶಕ್ತಿ ನಿರ್ಮೂಲನೆ’ ಕುರಿತು ಮಾತನಾಡಿದ್ದಾರೆ. ಅವರ ವಕ್ತಾರರು ಮಂಡಿಯ ಮಹಿಳೆಯರ ಬಗ್ಗೆ ಅಕ್ಷೇಪಾರ್ಹ ಪದ ಬಳಸಿದರು. ಋಷಿ ಪರಾಶರರು ತಪಸ್ಸಿನಲ್ಲಿ ಕುಳಿತಿದ್ದ ಋಷಿ ಮಾಂಡವ್ಯನ ಹೆಸರನ್ನು ಇಡಲಾಗಿರುವ ಅದೇ ಮಂಡಿ, ಪ್ರತಿ ವರ್ಷ ಅತಿ ದೊಡ್ಡ ಶಿವರಾತ್ರಿ ಜಾತ್ರೆಯನ್ನು ಆಯೋಜಿಸುವ ಸ್ಥಳವಾಗಿದೆ. ಆದರೆ ಅವರಿಂದ (ಕಾಂಗ್ರೆಸ್) ಇನ್ನೇನು ನಿರೀಕ್ಷಿಸಲು ಸಾಧ್ಯ?’’ ಎಂದು ನಟಿ ಕೇಳಿದ್ದಾರೆ.

ಕಂಗನಾ ರಣಾವತ್ ಅವರ ತವರು ಮಂಡಿಯಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಅಲ್ಲಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಕಂಗನಾ ಅವರ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದಕ್ಕಾಗಿ ಚುನಾವಣಾ ಆಯೋಗವು ಸುಪ್ರಿಯಾ ಶ್ರಿನೇಟ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಇನ್ ಸ್ಟಾಗ್ರಾಮ್ ನಲ್ಲಿ ಅವರು ಅದನ್ನು ಡಿಲೀಟ್ ಮಾಡಿದ್ದು, ಅದನ್ನು ಅವರು ಪೋಸ್ಟ್ ಮಾಡಿಲ್ಲ ಎಂದು ಹೇಳಿದ್ದಾರೆ. ತನ್ನ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಖಾತೆಗಳನ್ನು ಅನೇಕ ಜನರು ನಿರ್ವಹಿಸುತ್ತಿದ್ದಾರೆ ಅದನ್ನು ತನಗೆ ತಿಳಿಯದೆ ಪೋಸ್ಟ್ ಮಾಡಲಾಗಿದೆ ಎಂದು ಸುಪ್ರಿಯಾ ಹೇಳಿದ್ದಾರೆ.

ಕಂಗನಾ ಭಾಷಣ

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರಿಂದ ಸುಪ್ರಿಯಾ ಶ್ರಿನೇಟ್ ಅವರ ಖಾತೆಯಿಂದ ಹೇಗೆ ಪೋಸ್ಟ್ ಮಾಡಲಾಗಿದೆ ಎಂಬ ವಿವರವಾದ ತನಿಖೆಯ ವರದಿಯನ್ನು ಕೇಳಿದರು.

ಕ್ಷೇತ್ರದಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಇನ್ನೂ ಘೋಷಿಸದಿರುವಾಗ ಮಂಡಿ ತೀವ್ರ ಪೈಪೋಟಿಗೆ ಸಾಕ್ಷಿಯಾಗಲು ಸಿದ್ಧವಾಗಿದೆ. ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಅವರು ಮಂಡಿಯಿಂದ ಹಾಲಿ ಸಂಸದರಾಗಿದ್ದು, ಆರಂಭದಲ್ಲಿ ಮಂಡಿಯಿಂದ ಸ್ಪರ್ಧಿಸಲು ಇಚ್ಛೆ ವ್ಯಕ್ತಪಡಿಸಲಿಲ್ಲ ಆದರೆ ಕಂಗನಾ ರಣಾವತ್ ಅವರ ಹೆಸರನ್ನು ಘೋಷಿಸಿದ ನಂತರ, ಅವರು ನಿರ್ಧಾರವನ್ನು ಹೈಕಮಾಂಡ್‌ಗೆ ಬಿಟ್ಟಿರುವುದಾಗಿ ಹೇಳಿದರು.

ಇದನ್ನೂ ಓದಿ: ‘ಮಂಗಳ ಗ್ರಹದಿಂದ ಬಂದಂತೆ ವಿಚಿತ್ರವಾಗಿದ್ದಾರೆ’; ರಾಹುಲ್​ ಗಾಂಧಿಗೆ ಕಂಗನಾ ಟೀಕೆ

ರಾಹುಲ್ ಗಾಂಧಿ ಅವರು ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ಮಾಡಿದ ಶಕ್ತಿ ಹೇಳಿಕೆಯ ಮೇಲೆ ದೊಡ್ಡ ಗದ್ದಲ ಭುಗಿಲೆದ್ದಿದೆ. “ಹಿಂದೂ ಧರ್ಮದಲ್ಲಿ ಶಕ್ತಿ ಎಂಬ ಪದವಿದೆ. ನಾವು ಶಕ್ತಿಯ ವಿರುದ್ಧ ಹೋರಾಡುತ್ತಿದ್ದೇವೆ. ಆ ಶಕ್ತಿ ಯಾವುದು ಎಂಬುದು ಪ್ರಶ್ನೆ? ರಾಜನ ಆತ್ಮ ಇವಿಎಂನಲ್ಲಿದೆ. ದೇಶದ ಪ್ರತಿಯೊಂದು ಸಂಸ್ಥೆಗಳಲ್ಲಿ, ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯಲ್ಲಿದೆ.” ಎಂದು ರಾಹುಲ್ ಗಾಂಧಿ ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್