ಗ್ರಾಹಕರು ಖರೀದಿ ಮಾಡಿದ ನಂತರ ಬಿಲ್ಗಾಗಿ ಫೋನ್ ನಂಬರ್ ಶೇರ್ ಮಾಡುವ ಅಗತ್ಯವಿಲ್ಲ: ಗ್ರಾಹಕ ವ್ಯವಹಾರಗಳ ಸಚಿವಾಲಯ
ವೈಯಕ್ತಿಕ ಸಂಪರ್ಕ ವಿವರಗಳನ್ನು ಒದಗಿಸುವವರೆಗೆ ಅವರು ಬಿಲ್ ಮಾಡಲು ಸಾಧ್ಯವಿಲ್ಲ ಎಂದು ಮಾರಾಟಗಾರರು ಹೇಳುತ್ತಾರೆ. ಇದು ಗ್ರಾಹಕ ಸಂರಕ್ಷಣಾ ಕಾಯಿದೆಯಡಿಯಲ್ಲಿ ಅನ್ಯಾಯ ಮತ್ತು ನಿರ್ಬಂಧಿತ ವ್ಯಾಪಾರದ ಅಭ್ಯಾಸವಾಗಿದೆ. ಅದೇ ವೇಳೆ ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ತಕ್ಕ ಕಾರಣ ಯಾವುದೂ ಇಲ್ಲ ಎಂದು ಸಿಂಗ್ ಹೇಳಿದ್ದಾರೆ.

ಫೋನ್ ಕರೆಗಳು ಮತ್ತು ಪಠ್ಯ ಸಂದೇಶಗಳ ಮೂಲಕ ವಂಚನೆಗಳು (scams) ಹೆಚ್ಚುತ್ತಿರುವ ವರದಿಗಳ ನಡುವೆ, ಗ್ರಾಹಕ ವ್ಯವಹಾರಗಳ ಸಚಿವಾಲಯವು (Consumer Affairs Ministry) ಮಂಗಳವಾರ ಕೆಲವು ಉತ್ಪನ್ನಗಳನ್ನು ನೀಡುವಾಗ ಖರೀದಿದಾರರ ವೈಯಕ್ತಿಕ ಸಂಪರ್ಕ ವಿವರಗಳನ್ನು ಒತ್ತಾಯಿಸದಂತೆ ಚಿಲ್ಲರೆ ವ್ಯಾಪಾರಿಗಳಿಗೆ ಸಲಹೆ ನೀಡಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ (Rohit Kumar Singh) ಹೇಳಿದ್ದಾರೆ.ಗ್ರಾಹಕರು ತಮ್ಮ ಸಂಪರ್ಕ ವಿವರಗಳನ್ನು ಹಂಚಿಕೊಳ್ಳದ ಹೊರತು ಮಾರಾಟಗಾರರು ಸೇವೆಗಳನ್ನು ಒದಗಿಸಲು ನಿರಾಕರಿಸುತ್ತಾರೆ ಎಂದು ಹಲವಾರು ಗ್ರಾಹಕರು ದೂರಿದ ನಂತರ ಈ ಸಲಹೆ ಬಂದಿದೆ.
ವೈಯಕ್ತಿಕ ಸಂಪರ್ಕ ವಿವರಗಳನ್ನು ಒದಗಿಸುವವರೆಗೆ ಅವರು ಬಿಲ್ ಮಾಡಲು ಸಾಧ್ಯವಿಲ್ಲ ಎಂದು ಮಾರಾಟಗಾರರು ಹೇಳುತ್ತಾರೆ. ಇದು ಗ್ರಾಹಕ ಸಂರಕ್ಷಣಾ ಕಾಯಿದೆಯಡಿಯಲ್ಲಿ ಅನ್ಯಾಯ ಮತ್ತು ನಿರ್ಬಂಧಿತ ವ್ಯಾಪಾರದ ಅಭ್ಯಾಸವಾಗಿದೆ. ಅದೇ ವೇಳೆ ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ತಕ್ಕ ಕಾರಣ ಯಾವುದೂ ಇಲ್ಲ ಎಂದು ಸಿಂಗ್ ಹೇಳಿದ್ದಾರೆ.
ಗೌಪ್ಯತೆಯ ಕಾಳಜಿಯೂ ಇದೆ ಎಂದು ಹೇಳಿದ ಸಿಂಗ್, ಗ್ರಾಹಕರ ಹಿತಾಸಕ್ತಿಯಿಂದ ಚಿಲ್ಲರೆ ಉದ್ಯಮ ಮತ್ತು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರಿ (ಎಫ್‌ಐಸಿಸಿಐ) ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ)ಸೇರಿದಂತೆ ಉದ್ಯಮ ಚೇಂಬರ್‌ಗಳಿಗೆ ಈ ಸಲಹೆ ನೀಡಲಾಗಿದೆ.
ಇದನ್ನೂ ಓದಿ: ಚಪ್ಪಲಿ ಖರೀದಿಸಲು ದುಡ್ಡಿಲ್ಲದ ಕಾರಣ ತನ್ನ ಮಕ್ಕಳ ಕಾಲಿಗೆ ಪಾಸ್ಟಿಕ್ ಸುತ್ತಿಕೊಂಡ ಮಹಿಳೆ
ಏನನ್ನಾದರೂ ಡೆಲಿವರಿ ಮಾಡಲು ಅಥವಾ ಬಿಲ್ ಮಾಡಲು ಚಿಲ್ಲರೆ ವ್ಯಾಪಾರಿಗಳಿಗೆ ಫೋನ್ ಸಂಖ್ಯೆಗಳನ್ನು ಒದಗಿಸುವುದು ಭಾರತದಲ್ಲಿ ಅಗತ್ಯವಿಲ್ಲ. ಆದಾಗ್ಯೂ, ಚಿಲ್ಲರೆ ವ್ಯಾಪಾರಿಗಳು ವಹಿವಾಟು ನಡೆಸಲು ಮೊಬೈಲ್ ಸಂಖ್ಯೆಗಳನ್ನು ಕೇಳಿದರೆ ಗ್ರಾಹಕರು ವಿಚಿತ್ರ ಪರಿಸ್ಥಿತಿಗೆ ಒಳಗಾಗುತ್ತಾರೆ. ಇಲ್ಲಿ ಮೊಬೈಲ್ ಸಂಖ್ಯೆ ಒದಗಿಸದೆ ಗ್ರಾಹಕರಿಗೆ ಬೇರೆ ಮಾರ್ಗ ಇರುವುದಿಲ್ಲ ಎಂದು ಸಿಂಗ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ