ರಾಮ ಮಂದಿರಕ್ಕೆ 1 ಇಟ್ಟಿಗೆ, 11 ರೂ. ಕೊಡುಗೆ ನೀಡುವಂತೆ ಯೋಗಿ ಕರೆ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕನಿಷ್ಠ ಒಂದು ಇಟ್ಟಿಗೆ ಮತ್ತು 11 ರೂಪಾಯಿ ಕೊಡುಗೆಯಾಗಿ ನೀಡುವಂತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕರೆ ನೀಡಿದ್ದಾರೆ. ಜಾರ್ಖಂಡ್ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಪ್ರತಿಯೊಂದು ಮನೆಯಿಂದ ಇಟ್ಟಿಗೆ ಮತ್ತು 11 ರೂಪಾಯಿ ನೀಡುವಂತೆ ಕೋರಿದ್ರು. ‘ಗಾಂಧಿಯಾಗಲು ಸಾಧ್ಯವಿಲ್ಲ’: ಕ್ಷಮೆ ಕೇಳೋಕೆ ನಾನು ಸಾವರ್ಕರ್ ಅಲ್ಲ ಗಾಂಧಿ ಎಂದ ರಾಹುಲ್ ಗಾಂಧಿ ಹೇಳಿಕೆಗೆ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಕಿಡಿಕಾರಿದ್ದಾರೆ. ಕೇವಲ ನಿಮ್ಮ ಹೆಸರಿನ ಜೊತೆ ಗಾಂಧಿ ಅಂತ ಸೇರಿಸಿಕೊಳ್ಳುವುದರಿಂದ ನೀವು […]
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕನಿಷ್ಠ ಒಂದು ಇಟ್ಟಿಗೆ ಮತ್ತು 11 ರೂಪಾಯಿ ಕೊಡುಗೆಯಾಗಿ ನೀಡುವಂತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕರೆ ನೀಡಿದ್ದಾರೆ. ಜಾರ್ಖಂಡ್ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಪ್ರತಿಯೊಂದು ಮನೆಯಿಂದ ಇಟ್ಟಿಗೆ ಮತ್ತು 11 ರೂಪಾಯಿ ನೀಡುವಂತೆ ಕೋರಿದ್ರು.
‘ಗಾಂಧಿಯಾಗಲು ಸಾಧ್ಯವಿಲ್ಲ’: ಕ್ಷಮೆ ಕೇಳೋಕೆ ನಾನು ಸಾವರ್ಕರ್ ಅಲ್ಲ ಗಾಂಧಿ ಎಂದ ರಾಹುಲ್ ಗಾಂಧಿ ಹೇಳಿಕೆಗೆ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಕಿಡಿಕಾರಿದ್ದಾರೆ. ಕೇವಲ ನಿಮ್ಮ ಹೆಸರಿನ ಜೊತೆ ಗಾಂಧಿ ಅಂತ ಸೇರಿಸಿಕೊಳ್ಳುವುದರಿಂದ ನೀವು ಗಾಂಧಿ ಆಗಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ.
ಫಾರೂಕ್ ಗೃಹಬಂಧನ ವಿಸ್ತರಣೆ: ಜಮ್ಮು-ಕಾಶ್ಮೀರ ಮಾಜಿ ಸಿಎಂ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರುಕ್ ಅಬ್ದುಲ್ಲಾ ಅವರ ಗೃಹ ಬಂಧನವನ್ನ ಮತ್ತೆ ಮೂರು ತಿಂಗಳು ವಿಸ್ತರಿಸಲಾಗಿದೆ. ಆಗಸ್ಟ್ 5 ರಂದು ಅವರನ್ನ ಗೃಹ ಬಂಧನದಲ್ಲಿರಿಸಲಾಗಿತ್ತು. ಜೊತೆಗೆ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಂತೆ ತಡೆ ಹಿಡಿಯಲಾಗಿತ್ತು.
ಅಮಿತ್ ಶಾಗೆ ರಕ್ತದಲ್ಲಿ ಪತ್ರ: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಅಂತಾರಾಷ್ಟ್ರೀಯ ಶೂಟರ್ ವರ್ತಿಕಾ ಸಿಂಗ್ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳಿಗೆ ಶಿಕ್ಷೆ ಆಗಲಿ ಅಂತಾ ಮನವಿ ಮಾಡಿಕೊಂಡಿದ್ದಾರೆ.
ಸಿಗ್ನಲ್‌ಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿ: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕಾಜಾ ಟೋಲ್ಪ್ಲಾಜಾದ ಸಿಗ್ನಲ್‌ಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿಯಾಗಿದೆ. ಈ ಲಾರಿ ತಮಿಳುನಾಡಿನಿಂದ ಬರುತ್ತಿತ್ತು ಎಂಬ ಮಾಹಿತಿ ದೊರೆತಿದೆ. ಘಟನೆಯಲ್ಲಿ ಚಾಲಕನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾರು ಚಾಲಕನ ಅಟ್ಟಹಾಸ: ಛತ್ತೀಸ್‌ಗಢ್ ರಾಯ್‌ಪುರದ ರಸ್ತೆಯಲ್ಲಿ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ನಡೆದಿದೆ. ಬೈಕ್‌ಗೆ ಗುದ್ದಿದ ಕಾರ್ ಚಾಲಕ ತನ್ನ ಕಾರಿನ ಮುಂದೆ ಸಿಲುಕಿದ ಬೈಕ್ ಹಾಗೂ ಬೈಕ್ ಸವಾರನನ್ನ ಸಾಕಷ್ಟು ದೂರ ತಳ್ಳಿಕೊಂಡು ಹೋಗಿದ್ದಾನೆ. ಬೈಕ್‌ನಲ್ಲಿದ್ದ ಇಬ್ಬರು ಸವಾರರಿಗೆ ಗಂಭೀರ ಗಾಯವಾಗಿದ್ದು, ಕಾರು ಚಾಲಕ ಅರೆಸ್ಟ್ ಆಗಿದ್ದಾನೆ.
ಭೂ ಲೋಕದ ಸ್ವರ್ಗ: ಜಮ್ಮು ಕಾಶ್ಮೀರದ ಡೋಡಾ ಸ್ವರ್ಗದಂತೆ ಕಂಗೊಳಿಸುತ್ತಿದೆ. ಹಿಮ ಮಳೆಯಿಂದ ಡೋಡಾ ಫುಲ್ ಕಲರ್‌ಫುಲ್ ಆಗಿ ಕಾಣುತ್ತಿದ್ದು, ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಮರ, ಮನೆಗಳ ಮೇಲೆ ಹಿಮ ಬಿದ್ದಿದ್ದು, ಮಕ್ಕಳು ಹಿಮದಲ್ಲಿ ಆಟವಾಡಿ ಫುಲ್ ಎಂಜಾಯ್ ಮಾಡುತ್ತಿದ್ದಾರೆ. ಆದ್ರೆ ಪಕ್ಷಿಗಳು ಹಿಮದಲ್ಲಿ ಆಹಾರ ಸಿಗದೆ ಪರದಾಡುತ್ತಿವೆ.