ತಮಿಳುನಾಡು: ಅಣ್ಣಾಮಲೈ ದೇವಸ್ಥಾನದ ಆವರಣದಲ್ಲಿ ಮಾಂಸಾಹಾರ ಸೇವನೆ, ಉದ್ವಿಗ್ನತೆ
ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ಅಣ್ಣಾಮಲೈ ದೇವಸ್ಥಾನ(Temple)ದ ಆವರಣದಲ್ಲಿ ವ್ಯಕ್ತಿಯೊಬ್ಬ ಮಾಂಸಾಹಾರ ಸೇವಿಸಿದ ಹಿನ್ನೆಲೆ ಉದ್ವಿಗ್ನತೆ ಭುಗಿಲೆದ್ದಿದೆ. ಭಕ್ತರಿಂದ ಆಕ್ರೋಶ ವ್ಯಕ್ತವಾಗಿದೆ.ದೇವಾಲಯದ ಹೊರಾಂಗಣದಲ್ಲಿ ಈ ಘಟನೆ ಸಂಭವಿಸಿದೆ.ವ್ಯಕ್ತಿ ಆಹಾರ ತಿನ್ನುತ್ತಿರುವುದನ್ನು ಗಮನಿಸಿದ ಭಕ್ತರು ತಕ್ಷಣವೇ ದೇವಾಲಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಅವರ ಬಳಿಗೆ ಬಂದು ಏನು ಸೇವಿಸುತ್ತಿದ್ದೀರಿ ಎಂದು ಪ್ರಶ್ನಿಸಿದಾಗ, ಆ ವ್ಯಕ್ತಿ ತಾನು ಸರಳ ಬಿಯರ್ಯನಿ ಆರ್ಡರ್ ಮಾಡಿದ್ದೆ ಆದರೆ ತಪ್ಪಾಗಿ ಚಿಕನ್ ಅದರೊಂದಿಗೆ ಪ್ಯಾಕ್ ಮಾಡಿ ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ.

ಚೆನ್ನೈ, ಜೂನ್ 10: ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ಅಣ್ಣಾಮಲೈ ದೇವಸ್ಥಾನ(Temple)ದ ಆವರಣದಲ್ಲಿ ವ್ಯಕ್ತಿಯೊಬ್ಬ ಮಾಂಸಾಹಾರ ಸೇವಿಸಿದ ಹಿನ್ನೆಲೆ ಉದ್ವಿಗ್ನತೆ ಭುಗಿಲೆದ್ದಿದೆ. ಭಕ್ತರಿಂದ ಆಕ್ರೋಶ ವ್ಯಕ್ತವಾಗಿದೆ.ದೇವಾಲಯದ ಹೊರಾಂಗಣದಲ್ಲಿ ಈ ಘಟನೆ ಸಂಭವಿಸಿದೆ.ವ್ಯಕ್ತಿ ಆಹಾರ ತಿನ್ನುತ್ತಿರುವುದನ್ನು ಗಮನಿಸಿದ ಭಕ್ತರು ತಕ್ಷಣವೇ ದೇವಾಲಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ಅವರ ಬಳಿಗೆ ಬಂದು ಏನು ಸೇವಿಸುತ್ತಿದ್ದೀರಿ ಎಂದು ಪ್ರಶ್ನಿಸಿದಾಗ, ಆ ವ್ಯಕ್ತಿ ತಾನು ಸರಳ ಬಿಯರ್ಯನಿ ಆರ್ಡರ್ ಮಾಡಿದ್ದೆ ಆದರೆ ತಪ್ಪಾಗಿ ಚಿಕನ್ ಅದರೊಂದಿಗೆ ಪ್ಯಾಕ್ ಮಾಡಿ ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ. ಅಧಿಕಾರಿಗಳು ಆ ವ್ಯಕ್ತಿಗೆ ಆಹಾರವನ್ನು ಪ್ಯಾಕ್ ಮಾಡಲು ಸೂಚಿಸಿದರು ಮತ್ತು ತಕ್ಷಣ ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿದರು. ಆ ವ್ಯಕ್ತಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಈ ವಿಷಯದ ಕುರಿತು ಹೆಚ್ಚಿನ ತನಿಖೆ ಪ್ರಸ್ತುತ ನಡೆಯುತ್ತಿದೆ.
ಜನವರಿಯಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ, ತಮಿಳುನಾಡು ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಅಣ್ಣಾಮಲೈ , ಮಧುರೈನ ಪವಿತ್ರ ತಿರುಪರಣಕುಂದ್ರಂ ಸುಬ್ರಹ್ಮಣ್ಯ ಸ್ವಾಮಿ ಬೆಟ್ಟದಲ್ಲಿ ಮಾಂಸಾಹಾರ ಸೇವಿಸಿದ ಆರೋಪದ ಮೇಲೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಮತ್ತು ರಾಮನಾಥಪುರಂ ಸಂಸದ ನವಾಸ್ ಕಾಣಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ಹಿಂದೂಗಳದ್ದು ಶಾಂತಿ ಪ್ರಿಯ ಸಮುದಾಯ.
ಮತ್ತಷ್ಟು ಓದಿ: ತಿರುಪತಿ ದೇವಸ್ಥಾನದ ಹುಂಡಿಯಿಂದ ಹಣ ಕದ್ದ ಭಕ್ತ; ಆಮೇಲೇನಾಯ್ತು?
ಈ ಸಂಸದರು ಬೆಟ್ಟದ ಮೇಲೆ ಹೋಗಿ ಮಾಂಸಾಹಾರ ಸೇವಿಸಿದ್ದಾರೆ. ಇದು ತುಂಬಾ ದುರದೃಷ್ಟಕರ ಎಂದು ಹೇಳಿ ವಿರುದ್ಧದ ಕ್ರಮಕ್ಕೆ ಒತ್ತಾಯಿಸಿದ್ದರು. ಕಾಣಿ ಅವರನ್ನು ನೇರವಾಗಿ ಹೆಸರಿಸದೆ, ಈ ಸಂಸದರನ್ನು ವಜಾಗೊಳಿಸಬೇಕು. ಅವರು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ಸೃಷ್ಟಿಸಿದ್ದಾರೆ, ತೀವ್ರ ದುರದೃಷ್ಟಕರ ಎಂದು ಹೇಳಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:02 am, Tue, 10 June 25