ಮನೆಯಲ್ಲೇ ಐಸೋಲೇಟ್​ ಆಗಿ ಚಿಕಿತ್ಸೆ ಪಡೆಯುವ ಕೊರೊನಾ ಸೋಂಕಿತರು ರೆಮ್​ಡೆಸಿವಿರ್​ ಪಡೆಯಲೇಬಾರದು: ಏಮ್ಸ್ ವೈದ್ಯರ ಸಲಹೆ

|

Updated on: May 15, 2021 | 10:59 PM

ಜ್ವರ, ಒಣಕೆಮ್ಮು, ಸುಸ್ತು, ವಾಸನೆ, ರುಚಿ ಗ್ರಹಿಸಲು ಸಾಧ್ಯವಾಗದೆ ಇರುವ ಸ್ಥಿತಿ ಬಂದ ಕೂಡಲೇ ತಕ್ಷಣ ನಿಮ್ಮಷ್ಟಕ್ಕೇ ನೀವು ಐಸೋಲೇಟ್​ ಆಗಿಬಿಡಿ. ಅದರೊಂದಿಗೆ ಗಂಟಲು ಕಿರಿಕಿರಿ, ತಲೆ ನೋವು, ಮೈಕೈನೋವು, ಅತಿಸಾರ, ದದ್ದು, ಕಣ್ಣುಕೆಂಪಾಗುವುದು ಆದಾಗಲೂ ನಿರ್ಲಕ್ಷ್ಯ ಮಾಡಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಮನೆಯಲ್ಲೇ ಐಸೋಲೇಟ್​ ಆಗಿ ಚಿಕಿತ್ಸೆ ಪಡೆಯುವ ಕೊರೊನಾ ಸೋಂಕಿತರು ರೆಮ್​ಡೆಸಿವಿರ್​ ಪಡೆಯಲೇಬಾರದು: ಏಮ್ಸ್ ವೈದ್ಯರ ಸಲಹೆ
ಪ್ರಾತಿನಿಧಿಕ ಚಿತ್ರ
Follow us on

ಮನೆಯಲ್ಲೇ ಆರೈಕೆ ಮಾಡಿಕೊಳ್ಳುತ್ತಿರುವ ಕೊರೊನಾ ರೋಗಿಗಳು ಅವರೇ ಸ್ವತಃ ಇಚ್ಛೆಯಿಂದ ರೆಮ್​ಡೆಸಿವಿರ್​ ಔಷಧಿಯನ್ನು ತೆಗೆದುಕೊಳ್ಳಬಾರದು. ಆಕ್ಸಿಜನ್​ ಮಟ್ಟ 94ಕ್ಕಿಂತಲೂ ಕಡಿಮೆ ಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಲೇಬೇಕು ಎಂದು ದೆಹಲಿಯ ಏಮ್ಸ್ (AIIMS) ವೈದ್ಯರು ಹೇಳಿದ್ದಾರೆ. ಕೊವಿಡ್​ 19 ರೋಗಿಗಳು ಮನೆಯಲ್ಲೇ ಐಸೋಲೇಟ್​ ಆಗಿ ಚಿಕಿತ್ಸೆ ಪಡೆಯುವ ವಿಧಾನಗಳು, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಡೆಸಿದ ವೆಬಿನಾರ್​​ನಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಐಸೋಲೇಟ್ ಆಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಅವರಷ್ಟಕ್ಕೇ ರೆಮ್​ಡೆಸಿವಿರ್​ನ್ನು ಪಡೆಯಬಾರದು. ಸಕಾರಾತ್ಮಕವಾಗಿ ಇರಬೇಕು. ಕೆಲವು ನಿಯಮಿತ ವ್ಯಾಯಾಮಗಳನ್ನು ರೂಢಿಸಿಕೊಳ್ಳಬೇಕು ಎಂದು ಏಮ್ಸ್​ನ ವೈದ್ಯ ಡಾ.ನೀರಜ್​ ನಿಶ್ಚಲ್ ಹೇಳಿದ್ದಾರೆ.

ಹಾಗೇ, ಆಕ್ಸಿಜನ್​ ಮಟ್ಟ 94ಕ್ಕಿಂತ ಕಡಿಮೆ ಆದ ತಕ್ಷಣ ಸೋಂಕಿತರು ಆಸ್ಪತ್ರೆಗೆ ದಾಖಲಾಗಬೇಕು. ಅದರಲ್ಲೂ ಬೇರೆ ಕೆಲವು ರೋಗಗಳು ಇದ್ದು, ಕೊರೊನಾಕ್ಕೆ ಒಳಗಾಗಿದ್ದರೆ ಇನ್ನೂ ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯ ಡಾ.ಮನೀಶ್​ ತಿಳಿಸಿದ್ದಾರೆ. ಇನ್ನು ಶೇ.80 ರಷ್ಟು ಸೋಂಕಿತರಿಗೆ ಸೌಮ್ಯ ಲಕ್ಷಣಗಳು ಇರುತ್ತವೆ.ಅಂಥವರು ಪರೀಕ್ಷೆ ಮಾಡಿಸಿಕೊಂಡಾಗ ಒಮ್ಮೆ ನೆಗೆಟಿವ್​ ಬಂದಾಗ್ಯೂ.. ಲಕ್ಷಣ ಹಾಗೇ ಮುಂದುವರಿದಿದ್ದರೆ ಮತ್ತೊಮ್ಮೆ ಆರ್​ಟಿ-ಪಿಸಿಆರ್​​ ಟೆಸ್ಟ್ ಮಾಡಿಸಿ ಎಂದೂ ಸಲಹೆ ನೀಡಿದ್ದಾರೆ.

ಇನ್ನು 60 ವರ್ಷ ಮೇಲ್ಪಟ್ಟು, ಡಯಾಬಿಟಿಸ್​, ಹೃದಯಸಮಸ್ಯೆ, ಕಿಡ್ನಿ, ಮೂತ್ರಪಿಂಡ ಸಮಸ್ಯೆಯನ್ನು ಹೊಂದಿದ್ದು ಕೊರೊನಾ ಸೋಂಕಿಗೆ ಒಳಗಾದವರು ಯಾವ ಕಾರಣಕ್ಕೂ ಮನೆಯಲ್ಲಿ ಐಸೋಲೇಶನ್ ಆಗುವ ಆಯ್ಕೆ ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.

ಜ್ವರ, ಒಣಕೆಮ್ಮು, ಸುಸ್ತು, ವಾಸನೆ, ರುಚಿ ಗ್ರಹಿಸಲು ಸಾಧ್ಯವಾಗದೆ ಇರುವ ಸ್ಥಿತಿ ಬಂದ ಕೂಡಲೇ ತಕ್ಷಣ ನಿಮ್ಮಷ್ಟಕ್ಕೇ ನೀವು ಐಸೋಲೇಟ್​ ಆಗಿಬಿಡಿ. ಅದರೊಂದಿಗೆ ಗಂಟಲು ಕಿರಿಕಿರಿ, ತಲೆ ನೋವು, ಮೈಕೈನೋವು, ಅತಿಸಾರ, ದದ್ದು, ಕಣ್ಣುಕೆಂಪಾಗುವುದು ಆದಾಗಲೂ ನಿರ್ಲಕ್ಷ್ಯ ಮಾಡಬೇಡಿ. ಯಾಕೆಂದರೆ ಇದೂ ಕೂಡ ಈ ಬಾರಿಯ ಕೊರೊನಾ ಸೋಂಕಿನ ಲಕ್ಷಣಗಳಾಗಿವೆ ಎಂದು ಹೇಳಿದ್ದರು. ಹಾಗೇ, ರೆವಿಡಾಕ್ಸ್​ ಕೂಡ ಮನೆಯಲ್ಲಿ ಬಳಕೆ ಮಾಡುವಂಥದ್ದಲ್ಲ ಎಂದಿದ್ದಾರೆ.

ಇದನ್ನೂ ಓದಿ: ‘ಸಾರ್ವಜನಿಕರು, ಸರ್ಕಾರಗಳು ಮೈಮರೆತಿದ್ದರಿಂದಲೇ ಕೊರೊನಾ ಎರಡನೇ ಅಲೆಯ ಅಬ್ಬರ ಹೆಚ್ಚಾಗಿದ್ದು’-ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್​

Corona patients who take medicine at home Isolation should not take Remdesivir

Published On - 10:52 pm, Sat, 15 May 21