ದೆಹಲಿ: ರಾಜ್ಯಗಳಿಗೆ ಹೆಚ್ಚುವರಿ 2 ಕೋಟಿ ಡೋಸ್ ಲಸಿಕೆ (Corona Vaccine) ನೀಡುವ ಬಗ್ಗೆ ಕೇಂದ್ರ ಸರ್ಕಾರ (Central Government) ಸೂಚನೆ ನೀಡಿದೆ. ಸಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ (Teachers Day) ಹಿನ್ನೆಲೆಯಲ್ಲಿ ದೇಶದ ಎಲ್ಲಾ ಶಿಕ್ಷಕರಿಗೆ ಕೊರೊನಾ ಲಸಿಕೆ ನೀಡುವಂತೆ ಕೇಂದ್ರ ನಿರ್ದೇಶನ ನೀಡಿದೆ. ಈ ಬಗ್ಗೆ, ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
ಕೊವಿಡ್ 3ನೇ ಅಲೆ ಯಾವಾಗ ಬರುತ್ತೆಂದು ಹೇಳಲಾಗಲ್ಲ. ಅಕ್ಟೋಬರ್‌ನಲ್ಲಿ ಕೊರೊನಾ 3ನೇ ಅಲೆ ಬರುವ ಸಾಧ್ಯತೆ ಇದೆ ಎಂದು ಬೆಂಗಳೂರಿನಲ್ಲಿ ಡಾ. ದೇವಿಪ್ರಸಾದ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಗುಂಪು ಸೇರಿ ಯಾವುದೇ ಕಾರ್ಯಕ್ರಮ ಮಾಡಿದ್ರೂ ಸಮಸ್ಯೆ ಆಗಲಿದೆ ಎಂದು ಹೇಳಿದ್ದಾರೆ. ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ಕೊಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಇದು ಸರ್ಕಾರಕ್ಕೆ ಬಿಟ್ಟ ವಿಚಾರ ನಾನು ಏನೂ ಹೇಳಲಾಗಲ್ಲ ಎಂದು ಕೊರೊನಾ ಮೂರನೇ ಅಲೆಯ ಟಾಸ್ಕ್ ಪೋರ್ಸ್ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ದೇವರ ಬಳಿ ಮೂರನೇ ಅಲೆ ಬರಬಾರದು ಅಂತಾ ಪ್ರಾರ್ಥನೆ ಮಾಡ್ಬೇಕು. ಬರಲ್ಲ ಅಂತಾ ಹೇಳಿದ್ರೇ ಎಲ್ಲರೂ ನಿರ್ಲಕ್ಷ್ಯ ಮಾಡ್ತಾರೆ. ಯಾವಾಗ ಬರುತ್ತೆ ಅಂತಾ ಪ್ರಿಡಿಕ್ಷನ್ ಮಾಡೋಕೆ ಆಗಲ್ಲ. ಅಕ್ಟೋಬರ್‌ನಲ್ಲಿ ಕೊವಿಡ್ ಹರಡುವ ಸಾಧ್ಯತೆ ಇದೆ. ಏನೇನು ಮಾಡ್ಬೇಕು ಅಂತಾ ತಜ್ಞರ ಸಮಿತಿಯಿಂದ ಸಲಹೆ ಕೊಟ್ಟಿದ್ದೇವೆ. ಹಂತಹಂತವಾಗಿ ಪ್ರೈಮರಿ ಶಾಲೆ ಆರಂಭ ಮಾಡ್ಬೇಕು ಅಂತಾ ಹೇಳಿದ್ದೇವೆ. ಅದನ್ನ ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಗಣೇಶ ಹಬ್ಬ ಮಾತ್ರ ಅಲ್ಲ, ಗುಂಪು ಸೇರಿ ಯಾವುದೇ ಹಬ್ಬ ಮಾಡಲಿ ಸಮಸ್ಯೆ ಆಗುತ್ತದೆ. ಸಾಮಾಜಿಕ ಅಂತರ ಮಾಸ್ಕ್ ಕಡ್ಡಾಯ ಇರಬೇಕು. ಕೊವಿಡ್ ನಿಯಮಗಳನ್ನ ಪಾಲಿಸಬೇಕು. ಎಚ್ಚರಿಕೆಯಿಂದ ಇರಬೇಕು. ಗಣೇಶೋತ್ಸವಕ್ಕೆ ಅನುಮತಿ ಕೊಡುವುದು, ಬಿಡುವುದು ಸರ್ಕಾರಕ್ಕೆ ಸೇರಿದ್ದು. ನಾವೇನು ಹೇಳೋಕೆ ಆಗಲ್ಲ ಎಂದು ಡಾ. ದೇವಿ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಕೊರೊನಾ ಇನ್ನು ಸ್ಥಳೀಯ ಜಾಡ್ಯ: ವಿಶ್ವ ಆರೋಗ್ಯ ಸಂಸ್ಥೆ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್