ಭಾರತಕ್ಕೆ ಬರುವ ಅಫ್ಘಾನಿಸ್ತಾನದ ಪ್ರಜೆಗಳಿಗೆ ಇ-ವೀಸಾ ಕಡ್ಡಾಯ; ಕೇಂದ್ರ ಗೃಹ ಸಚಿವಾಲಯ ಘೋಷಣೆ

ಭಾರತಕ್ಕೆ ಬರಲು ಇಚ್ಛಿಸುವ ಅಫ್ಘಾನಿಸ್ತಾನದ ಪ್ರಜೆಗಳು ಇ-ವೀಸಾ ಪೋರ್ಟಲ್ ಮೂಲಕ ತಮ್ಮ ಅಪ್ಲಿಕೇಷನ್ ಭರ್ತಿ ಮಾಡಿ, ಇ-ವೀಸಾ ಪಡೆದುಕೊಳ್ಳಬೇಕಾದುದು ಕಡ್ಡಾಯ. ಇ-ವೀಸಾಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು indianvisaonline.gov.in ವೆಬ್​ಸೈಟ್​ಗೆ ಭೇಟಿ ನೀಡಬಹುದು. ​

ಭಾರತಕ್ಕೆ ಬರುವ ಅಫ್ಘಾನಿಸ್ತಾನದ ಪ್ರಜೆಗಳಿಗೆ ಇ-ವೀಸಾ ಕಡ್ಡಾಯ; ಕೇಂದ್ರ ಗೃಹ ಸಚಿವಾಲಯ ಘೋಷಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 25, 2021 | 1:37 PM

ನವದೆಹಲಿ: ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನದಿಂದ (Afghanistan Crisis) ಭಾರತಕ್ಕೆ ಬರುವ ಅಫ್ಘಾನಿಸ್ತಾನದ ಪ್ರಜೆಗಳಿಗೆ ಇ-ವೀಸಾ (E-Visa) ಕಡ್ಡಾಯಗೊಳಿಸಲಾಗಿದೆ. ಇದುವರೆಗೂ ಪಡೆದಿರುವ ಯಾವ ವೀಸಾಗಳಿಗೂ ಮಾನ್ಯತೆ ಇರುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಘೋಷಿಸಿದೆ. ತಾಲಿಬಾನ್ (Taliban Terrorists) ಅಟ್ಟಹಾಸ ಮಿತಿ ಮೀರಿರುವುದರಿಂದ ಅಫ್ಘಾನಿಸ್ತಾನದಿಂದ ಸಾಕಷ್ಟು ಜನರು ಭಾರತ, ಅಮೆರಿಕ ಸೇರಿದಂತೆ ನಾನಾ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಬರುವ ಅಫ್ಘಾನ್ ನಾಗರಿಕರಿಗೆ ಇ-ವೀಸಾ ಕಡ್ಡಾಯವಾಗಿದೆ.

ಅಫ್ಘಾನಿಸ್ತಾನದಲ್ಲಿ ಇರುವ ಪ್ರಜೆಗಳಿಗೆ ಭದ್ರತಾ ಸಮಸ್ಯೆ ಎದುರಾಗಿರುವುದರಿಂದ ಅವರು ಬೇರೆ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಅಫ್ಘಾನ್ ಪ್ರಜೆಗಳು ಇ-ವೀಸಾ ಮೂಲಕ ಭಾರತಕ್ಕೆ ಬರಬಹುದಾಗಿದೆ. ಆದರೆ, ಬೇರಾವ ವೀಸಾಗಳಿಗೂ ಮಾನ್ಯತೆಯಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ. ಈಗಾಗಲೇ 228 ಭಾರತೀಯ ಪ್ರಜೆಗಳು ಸೇರಿದಂತೆ ಒಟ್ಟು 626 ಜನರನ್ನು ಅಫ್ಘಾನಿಸ್ತಾನದಿಂದ ಭಾರತಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಪುರಿ ಮಾಹಿತಿ ನೀಡಿದ್ದಾರೆ. ಆ 626ರಲ್ಲಿ 77 ಜನರು ಅಫ್ಘಾನ್ ಸಿಖ್ ಸಮುದಾಯದವರಿದ್ದಾರೆ. ಇದರಲ್ಲಿ ಅಫ್ಘಾನ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಭಾರತೀಯ ರಾಯಭಾರಿ ಸಿಬ್ಬಂದಿಯನ್ನು ಸೇರಿಸಿಲ್ಲ. ಅವರನ್ನು ಪ್ರತ್ಯೇಕವಾಗಿ ಏರ್​ಲಿಫ್ಟ್​ ಮಾಡಲಾಗಿದೆ ಎಂದು ಸಚಿವ ಹರ್ದೀಪ್ ಪುರಿ ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ಗಡಿಯಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ತಾಲಿಬಾನ್ ಉಗ್ರರು ಆ. 15ರಂದು ಅಫ್ಘಾನ್ ರಾಜಧಾನಿ ಕಾಬೂಲ್ ಅನ್ನು ವಶಕ್ಕೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ಅಧ್ಯಕ್ಷ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ಇಡೀ ಅಫ್ಘಾನಿಸ್ತಾನವೀಗ ತಾಲಿಬಾನ್ ವಶವಾಗಿದ್ದು, ಅಲ್ಲಿ ಪ್ರಾಣಭೀತಿ ಹೆಚ್ಚಾಗಿರುವುದರಿಂದ ಅಫ್ಘಾನ್ ಜನರು ಬೇರೆ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.

ಭಾರತಕ್ಕೆ ಬರಲು ಇಚ್ಛಿಸುವ ಅಫ್ಘಾನಿಸ್ತಾನದ ಪ್ರಜೆಗಳು ಇ-ವೀಸಾ ಅಪ್ಲಿಕೇಷನ್ ಪೋರ್ಟಲ್ ಮೂಲಕ ತಮ್ಮ ಅಪ್ಲಿಕೇಷನ್ ಭರ್ತಿ ಮಾಡಿ, ಇ-ವೀಸಾ ಪಡೆದುಕೊಳ್ಳಬೇಕಾದುದು ಕಡ್ಡಾಯ. ಇ-ವೀಸಾಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು www.indianvisaonline.gov.in ವೆಬ್​ಸೈಟ್​ನಲ್ಲಿ ಇ-ವೀಸಾ ಪಡೆಯಬಹುದು.

ಮಂಗಳವಾರ ಕಾಬೂಲ್​ (Kabul)ನಿಂದ ಬಂದ 78 ಜನರಲ್ಲಿ 16 ಮಂದಿಗೆ ಕೊವಿಡ್​ 19 ಸೋಂಕು ಇರುವುದು ದೃಢಪಟ್ಟಿದೆ. ಅದರಲ್ಲೀಗ ಅಫ್ಘಾನಿಸ್ತಾನದ ಗುರುದ್ವಾರಗಳಿಂದ ಗುರು ಗ್ರಂಥ ಸಾಹೀಬ್​​ ಪವಿತ್ರ ಗ್ರಂಥ ತಂದ ಮೂವರಲ್ಲೂ ಸಹ ಕೊರೊನಾ ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಕೇಂದ್ರ ಸಚಿವ ಹರ್ದೀಪ್​ ಸಿಂಗ್​ ಪುರಿಯವರಿಗೂ ಸೋಂಕಿನ ಆತಂಕ ಶುರುವಾಗಿದೆ. ಅಫ್ಘಾನಿಸ್ತಾನದಿಂದ ಜನರನ್ನು ಸ್ಥಳಾಂತರ ಮಾಡುವ ಕಾರ್ಯವನ್ನು ಆಗಸ್ಟ್​ 31ರೊಳಗೆ ಮುಗಿಸಬೇಕು ಎಂದು ಹೇಳಿದೆ. ಅದಕ್ಕೆ ಪ್ರತಿಯಾಗಿ ಜೋ ಬೈಡನ್​ ಕೂಡ, ತಾವು ಆಗಸ್ಟ್​ 31ರೊಳಗೆ ಸ್ಥಳಾಂತರ ಕಾರ್ಯ ಪೂರ್ಣಗೊಳಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ನೇಲ್ ಪಾಲಿಶ್ ಹಚ್ಚಿದರೆ ಅಫ್ಘಾನಿಸ್ತಾನದ ಮಹಿಳೆಯರ ಬೆರಳೇ ಕಟ್!; ತಾಲಿಬಾನ್ ಹೊಸ ನಿಯಮ

ಅಫ್ಘಾನಿಸ್ತಾನ ತಾಲಿಬಾನ್ ವಶವಾಗಿದ್ದಕ್ಕೆ ಪಾಕಿಸ್ತಾನದಲ್ಲಿ ಜೈಕಾರ; ಮಹಿಳಾ ಮದರಸಾಗಳ ಮೇಲೆ ತಾಲಿಬಾನ್ ಬಾವುಟ!

(Afghanistan Crisis: India Makes e-Visa Mandatory for all Afghanistan Nationals Indian Government Announces)