ಭಾರತ್ ಬಯೋಟೆಕ್ ಕೊರೊನಾ ಲಸಿಕೆ ಬಗ್ಗೆ ಹೆಚ್ಚಿದ ವಿಶ್ವಾಸ: ಕೊವ್ಯಾಕ್ಸಿನ್ ಶೀಘ್ರದಲ್ಲೇ ವಿತರಣೆ?
3 ತಿಂಗಳ ಹಿಂದೆ ಮೊದಲ ಹಂತದ ಕೊವ್ಯಾಕ್ಸಿನ್ ಪರೀಕ್ಷೆಗೆ ಒಳಪಟ್ಟವರಲ್ಲಿ ಟಿ-ಸೆಲ್ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು, ರೋಗ ನಿರೋಧಕ ಶಕ್ತಿಯೂ ಅಭಿವೃದ್ಧಿ ಹೊಂದಿದೆ. ಎರಡನೇ ಹಂತದ ಪರೀಕ್ಷೆಗೆ ಒಳಪಟ್ಟ ವ್ಯಕ್ತಿಗಳಲ್ಲಿಯೂ ಕೊವ್ಯಾಕ್ಸಿನ್ ಉತ್ತಮ ಪರಿಣಾಮ ಬೀರಿದೆ. ಈ ಫಲಿಂತಾಶಗಳನ್ನು ಗಮನಿಸಿದ ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಕುರಿತು ವಿಶ್ವಾಸ ವ್ಯಕ್ತಪಡಿಸಿದೆ.
ಹೈದರಾಬಾದ್: ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆ ಕೊವ್ಯಾಕ್ಸಿನ್ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ತಜ್ಞರು ಅಭಿಮತ ವ್ಯಕ್ತಪಡಿಸಿದ್ದಾರೆ. 3 ತಿಂಗಳ ಹಿಂದೆ ಮೊದಲ ಹಂತದ ಕೊವ್ಯಾಕ್ಸಿನ್ ಪರೀಕ್ಷೆಗೆ ಒಳಪಟ್ಟವರಲ್ಲಿ ಟಿ-ಸೆಲ್ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು, ರೋಗ ನಿರೋಧಕ ಶಕ್ತಿಯೂ ಅಭಿವೃದ್ಧಿ ಹೊಂದಿರುವುದು ಸಾಬೀತಾಗಿದೆ.
ಅಂತೆಯೇ, ಎರಡನೇ ಹಂತದ ಪರೀಕ್ಷೆಗೆ ಒಳಪಟ್ಟ ವ್ಯಕ್ತಿಗಳಲ್ಲಿಯೂ ಕೊವ್ಯಾಕ್ಸಿನ್ ಉತ್ತಮ ಪರಿಣಾಮ ಬೀರಿದೆ. ಈ ಫಲಿಂತಾಶಗಳನ್ನು ಗಮನಿಸಿದ ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಕುರಿತು ವಿಶ್ವಾಸ ವ್ಯಕ್ತಪಡಿಸಿದೆ. ನಮ್ಮ ಸಂಸ್ಥೆ ತಯಾರಿಸಿದ ಕೊರೊನಾ ಲಸಿಕೆ ಪಡೆದವರ ದೇಹದಲ್ಲಿ ಕನಿಷ್ಠ 6ರಿಂದ 12 ತಿಂಗಳ ಕಾಲ ಕೊರೊನಾ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಉಳಿಯಲಿದೆ ಎಂದು ಸಂಶೋಧನಾ ಪತ್ರದಲ್ಲಿ ತಿಳಿಸಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕೊವ್ಯಾಕ್ಸಿನ್ ಲಸಿಕೆ ಸದ್ಯ 3ನೇ ಹಂತದ ಪರೀಕ್ಷೆಗೆ ಒಳಪಟ್ಟಿದೆ. ಈ ಲಸಿಕೆಯು ಅತ್ಯಂತ ಪರಿಣಾಮಕಾರಿ ಎಂದು ಕಂಡುಬರುತ್ತಿರುವುದರಿಂದ ಬೇಡಿಕೆ ಹೆಚ್ಚುವ ಸಾಧ್ಯತೆಯೂ ಇದೆ ಎಂಬ ವಿಶ್ಲೇಷಣೆಗಳು ಈಗಾಗಲೇ ಕೇಳಿ ಬರುತ್ತಿವೆ.
ಕೊರೊನಾ ಲಸಿಕೆಗಾಗಿ ಆರೋಬಿಂದೋ ಮತ್ತು ಅಮೆರಿಕಾ ಸಂಸ್ಥೆಯ ಒಪ್ಪಂದ ಇನ್ನೊಂದೆಡೆ, ಕೊರೊನಾ ಲಸಿಕೆ ತಯಾರಿಸಲು ಆರೋಬಿಂದೋ ಫಾರ್ಮಾ ಸಂಸ್ಥೆಯ ಜೊತೆ ಅಮೆರಿಕಾದ ಔಷಧ ತಯಾರಿಕಾ ಸಂಸ್ಥೆ ಕೈಜೋಡಿಸಲು ಮುಂದಾಗಿದೆ. ಈ ಎರಡೂ ಸಂಸ್ಥೆಗಳು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಲಿವೆ. ಈ ಮೂಲಕ ಆರೋಬಿಂದೋ ಫಾರ್ಮಾ (ಲಿ) ಮತ್ತು ಅಮೆರಿಕಾ ಮೂಲದ ಸಂಸ್ಥೆ ಯುಬಿ-612 ಲಸಿಕೆಯನ್ನು ಕೊರೊನಾ ವಿರುದ್ಧ ಹೋರಾಡಲು ತಯಾರಿಸಲಿವೆ ಎಂದು ಆರೋಬಿಂದೋ ಸಂಸ್ಥೆಯ ಮುಖ್ಯಸ್ಥ ಎನ್.ಗೋವಿಂದರಾಜನ್ ತಿಳಿಸಿದ್ದಾರೆ.
ಕೊವಿಡ್ನಿಂದ ಗುಣಮುಖರಾದವರಿಗೂ ಲಸಿಕೆ ಅಗತ್ಯವಿದೆ: ಭಾರತ್ ಬಯೋಟೆಕ್ ಸಂಸ್ಥೆಯ ಮುಖ್ಯಸ್ಥ ಕೃಷ್ಣ ಎಲ್ಲಾ
Published On - 11:35 am, Thu, 24 December 20