AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶಗಳಿಂದ ಬರುವ ಪ್ರಯಾಣಿಕರ ಕ್ವಾರಂಟೈನ್ ನಿಯಮ ಸಡಿಲಿಸಿದ ಭಾರತ

ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿತ ಲಸಿಕೆಗಳ ಬಳಕೆಗೆ ಸಂಬಂಧಿಸಿದಂತೆ ಭಾರತ ಸರ್ಕಾರವು ಇಂಥದ್ದೇ ಒಪ್ಪಂದಗಳನ್ನು ವಿವಿಧ ದೇಶಗಳೊಂದಿಗೆ ಮಾಡಿಕೊಂಡಿದೆ.

ವಿದೇಶಗಳಿಂದ ಬರುವ ಪ್ರಯಾಣಿಕರ ಕ್ವಾರಂಟೈನ್ ನಿಯಮ ಸಡಿಲಿಸಿದ ಭಾರತ
ಪ್ರಾತಿನಿಧಿಕ ಚಿತ್ರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Oct 25, 2021 | 11:14 AM

Share

ದೆಹಲಿ: ವಿದೇಶಗಳಿಂದ ಭಾರತಕ್ಕೆ ಬರುವ ಪ್ರವಾಸಿಗರ ಮೇಲೆ ವಿಧಿಸಲಾಗಿದ್ದ ಕ್ವಾರಂಟೈನ್ ನಿಯಮಗಳು ಇಂದಿನಿಂದ (ಅ.25) ಸಡಿಲಿಕೆಯಾಗಲಿವೆ. ಅವರು ವಿಮಾನ ನಿಲ್ದಾಣಗಳಿಂದ ನೇರವಾಗಿ ಮನೆಗಳಿಗೆ ತೆರಳಲು ಅವಕಾಶವಿದೆ. ಹೋಂ ಕ್ವಾರಂಟೈನ್ ನಿಬಂಧನೆಗಳಿಗೂ ಅವರು ಒಳಪಡಬೇಕಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿತ ಲಸಿಕೆಗಳ ಬಳಕೆಗೆ ಸಂಬಂಧಿಸಿದಂತೆ ಭಾರತ ಸರ್ಕಾರವು ಇಂಥದ್ದೇ ಒಪ್ಪಂದಗಳನ್ನು ವಿವಿಧ ದೇಶಗಳೊಂದಿಗೆ ಮಾಡಿಕೊಂಡಿದೆ.

ಆದರೆ ವಿದೇಶಗಳಿಂದ ಬಂದ ಪ್ರಯಾಣಿಕರು ಕೋವಿಡ್-19 ಆರ್​ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ತೋರಿಸುವುದು ಕಡ್ಡಾಯ. ಕಳೆದ ಫೆಬ್ರುವರಿ 17, 2021ರ ನಂತರ ಈ ಸಂಬಂಧ ಹೊರಡಿಸಲಾಗಿದ್ದ ಎಲ್ಲ ಆದೇಶಗಳೂ ಇನ್ನು ಮುಂದೆ ಅನೂರ್ಜಿತವಾಗಲಿದ್ದು, ಕಳೆದ ಬುಧವಾರ ಸರ್ಕಾರ ಹೊರಡಿಸಿರುವ ಹೊಸ ಆದೇಶವೊಂದೇ ಚಾಲ್ತಿಯಲ್ಲಿರಲಿದೆ. ವಿಶ್ವದ ಹಲವು ದೇಶಗಳಲ್ಲಿ ಕೊವಿಡ್-19 ಪಿಡುಗಿನ ತೀವ್ರತೆ ಕಡಿಮೆಯಾಗುತ್ತಿದೆ. ವೈರಸ್​ನ ರೂಪಾಂತರಗಳ ಬಗ್ಗೆ ನಿಗಾ ಇರಿಸುವುದು ಇಂದಿನ ಆದ್ಯತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ವಿದೇಶಗಳಿಂದ ಬರುವವರಿಗೆ ಅನ್ವಯವಾಗುವ ನಿಯಮಗಳಿವು 1) ಲಸಿಕೆಯ ಎರಡೂ ಡೋಸ್ ಪಡೆಯದಿದ್ದರೆ ಅಥವಾ ಲಸಿಕೆಯನ್ನೇ ತೆಗೆದುಕೊಳ್ಳದಿದ್ದರೆ ಪ್ರವಾಸಿಗರು ಕೊವಿಡ್-19 ತಪಾಸಣೆಯ ಪ್ರಮಾಣ ಪತ್ರವನ್ನು ವಿಮಾನ ನಿಲ್ದಾಣದಲ್ಲಿ ತೋರಿಸಬೇಕಾಗುತ್ತದೆ. ಇಂಥವರು ಏಳು ದಿನ ಹೋಂ ಕ್ವಾರಂಟೈನ್​ನಲ್ಲಿದ್ದು, 8ನೇ ದಿನ ಕೊವಿಡ್ ತಪಾಸಣೆ ಮಾಡಿಕೊಳ್ಳಬೇಕು. ನೆಗೆಟಿವ್ ವರದಿ ಬಂದರೆ ಮುಂದಿನ ಏಳು ದಿನ ಆರೋಗ್ಯದ ಮೇಲೆ ಸ್ವಯಂ ನಿಗಾ ಇರಿಸಿಕೊಳ್ಳಬೇಕು.

2) ಹೊಸ ನಿಯಮಗಳಲ್ಲಿ ವಿಧಿಸಿರುವ ಶಿಷ್ಟಾಚಾರಗಳನ್ನು ವಿದೇಶಗಳಿಂದ ಬರುವ ಪ್ರಯಾಣಿಕರ ಜೊತೆಗೆ ವಿಮಾನಯಾನ ಕಂಪನಿಗಳ ಸಿಬ್ಬಂದಿ ಸಹ ಅನುಸರಿಸಬೇಕು. ಬಂದರು ಹಾಗೂ ಭೂ ಗಡಿಗಳಲ್ಲಿ ವಿದೇಶಗಳೊಂದಿಗೆ ಸಂಪರ್ಕ ಇರಿಸಿಕೊಳ್ಳುವವರಿಗೂ ಇದು ಅನ್ವಯವಾಗಲಿದೆ.

3) ಈ ಹೊಸ ಶಿಷ್ಟಾಚಾರಗಳು ಇಂದಿನಿಂದ (ಅ.25) ಚಾಲ್ತಿಗೆ ಬರಲಿದೆ. ಇದು ಅಂತಿಮ ಆದೇಶವಲ್ಲ. ಈ ನಿಯಮಗಳನ್ನು ಆರೋಗ್ಯ ಸಚಿವಾಲಯವು ಕಾಲಕಾಲಕ್ಕೆ ಪರಿಷ್ಕರಿಸಲಿದೆ.

4) ವಿಮಾನಗಳಿಗೆ ಟಿಕೆಟ್ ಬುಕ್ ಮಾಡುವಾಗಲೇ ಏರ್ ಸುವಿಧಾ ಪೋರ್ಟಲ್ ಮೂಲಕ ಪ್ರಯಾಣಿಕರು ತಮ್ಮ ಆರ್​ಟಿ-ಪಿಸಿಆರ್ ವರದಿಯನ್ನು ಸಲ್ಲಿಸಬೇಕು. ಪ್ರಯಾಣ ಆರಂಭಿಸುವ 72 ಗಂಟೆಗಳ ಮೊದಲು ಈ ಪರೀಕ್ಷೆ ನಡೆದಿರಬೇಕು.

5) ತಾವು ಸಲ್ಲಿಸುವ ಮಾಹಿತಿ ತಪ್ಪಾಗಿದ್ದರೆ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದು ಎಂಬ ಮುಚ್ಚಳಿಕೆಯನ್ನೂ ಪ್ರಯಾಣಿಕರು ಬರೆದುಕೊಡಬೇಕಾಗುತ್ತದೆ.

6) ಕೊವಿಡ್ ಆತಂಕದ ಪಟ್ಟಿಯಲ್ಲಿ ಇಲ್ಲದ ದೇಶಗಳಿಂದ ಬರುವ ಪ್ರಯಾಣಿಕರು 14 ದಿನಗಳ ಕಾಲ ಆರೋಗ್ಯದ ಮೇಲೆ ಸ್ವಯಂ ನಿಗಾ ಇರಿಸಿಕೊಳ್ಳಬೇಕು.

7) ಈ ಅವಧಿಯಲ್ಲಿ ಕೊವಿಡ್ ಲಕ್ಷಣಗಳು ಕಂಡುಬಂದರೆ ತಕ್ಷಣ 1075 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಸ್ವಯಂ ಕ್ವಾರಂಟೈನ್​ಗೆ ಒಳಪಟ್ಟು ಚಿಕಿತ್ಸೆ ಪಡೆದುಕೊಳ್ಳಬೇಕು.

ಇದನ್ನೂ ಓದಿ: Narendra Modi: ಭಾರತದ 7 ಕೊವಿಡ್ ಲಸಿಕೆ ಉತ್ಪಾದಕರ ಜೊತೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಇದನ್ನೂ ಓದಿ: ಆತಂಕ ಶುರು! ವಿದೇಶಗಳಲ್ಲಿ ಹೊಸ ತಳಿಯ ಕೊರೊನಾ ವೈರಸ್ ಪತ್ತೆ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ