Narendra Modi: ಮೋದಿ ಸರ್ಕಾರದಿಂದ ಜನಸಾಮಾನ್ಯರಿಗೆ ಪರಿಹಾರ! ಅಗತ್ಯ ಔಷಧಿಗಳ ಬೆಲೆ ಏಪ್ರಿಲ್‌ನಿಂದ ಕಡಿಮೆ!
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರ ಪ್ರಕಾರ, ಬಹುಪಾಲು ಅಗತ್ಯ ಔಷಧಿಗಳ ಬೆಲೆಗಳನ್ನು ಸರ್ಕಾರವು ಮಿತಿಗೊಳಿಸುವುದರೊಂದಿಗೆ ಗ್ರಾಹಕರು ವಾರ್ಷಿಕವಾಗಿ ಸುಮಾರು 3,500 ಕೋಟಿ ರೂಪಾಯಿಗಳನ್ನು ಉಳಿಸುತ್ತಾರೆ.
ಸಾಮಾನ್ಯ ಜನರಿಗೆ ಮೋದಿ ಸರಕಾರ ಸಿಹಿ ಸುದ್ದಿ ನೀಡಿದೆ. ಏಪ್ರಿಲ್ 1 ರಿಂದ 651 ಅಗತ್ಯ ಔಷಧಿಗಳ ಬೆಲೆ 6.73ರಷ್ಟು ಕಡಿಮೆಯಾಗಿದೆ ಎಂದು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ಸೋಮವಾರ ತಿಳಿಸಿದೆ. ಈ ಬಗ್ಗೆ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಬಹುಪಾಲು ಅಗತ್ಯ ಔಷಧಿಗಳ ಬೆಲೆಗಳನ್ನು ಸರ್ಕಾರವು ಮಿತಿಗೊಳಿಸುವುದರೊಂದಿಗೆ ಗ್ರಾಹಕರು ವಾರ್ಷಿಕವಾಗಿ ಸುಮಾರು 3,500 ಕೋಟಿ ರೂ. ಗಳನ್ನು ಉಳಿಸುತ್ತಾರೆ ಎಂದು ಸ್ಪಷ್ಟಪಡಿಸಿದ್ದು, ಕಂಪನಿಯು ಪೂರ್ಣವಾಗಿ ಬೆಲೆಯನ್ನು ಹೆಚ್ಚಿಸಿದರೂ ಸರಾಸರಿ 6.73 ರಷ್ಟು ಕಡಿತ ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ.
ಭಾನುವಾರ(ಎ .2ರಂದು ) ಖರ್ಗೆ ಅವರು ಕೆಲವು ಅಗತ್ಯ ಔಷಧಿಗಳ ಬೆಲೆಯಲ್ಲಿ ವರದಿಯಾದ ಹೆಚ್ಚಳದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದು ಅವರು ಜನರ “ಪಿಕ್ ಪಾಕೆಟ್ಸ್” ಗೆ “ಸುಪಾರಿ (ಒಪ್ಪಂದ)” ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದರು. ಅದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೋಮವಾರ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ತಳ್ಳಿಹಾಕುವ ಮೂಲಕ ಸರಣಿ ಟ್ವೀಟ್‌ಗಳಲ್ಲಿ 870 ಅಗತ್ಯ ಔಷಧಿಗಳ ಪೈಕಿ 651 ಔಷಧಿಗಳ ಸೀಲಿಂಗ್ ಬೆಲೆಗಳನ್ನು ನಿಗದಿ ಮಾಡಲು ಈಗಾಗಲೇ ಸರ್ಕಾರವು ಸೂಚಿಸಿದ್ದು, ರಾಷ್ಟ್ರೀಯ ಅಗತ್ಯ ಔಷಧಿಗಳ (ಎನ್‌ಎಲ್‌ಇಎಂ) ಅಡಿಯಲ್ಲಿ ಬೆಲೆಯನ್ನು ಕಡಿಮೆ ಮಾಡಲಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: One Rank One Pension: ಮೋದಿ ಮಹತ್ವಾಕಾಂಕ್ಷಿ ಯೋಜನೆ ಒನ್ ರ‍್ಯಾಂಕ್ ಒನ್ ಪೆನ್ಶನ್ ಜಾರಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ಬಹುಪಾಲು ನಿಗದಿತ ಔಷಧಿಗಳ ಸೀಲಿಂಗ್ ಬೆಲೆಗಳನ್ನು ಮಿತಿಗೊಳಿಸಿದ್ದರಿಂದ, ಅಗತ್ಯ ಔಷಧಿಗಳ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಿದೆ. ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಕರು, ರಾಷ್ಟ್ರೀಯ ಅಗತ್ಯ ಔಷಧಿಗಳ (ಎನ್‌ಎಲ್‌ಇಎಂ) ಅಡಿಯಲ್ಲಿ ಪಟ್ಟಿ ಮಾಡಲಾದ ಒಟ್ಟು 870 ನಿಗದಿತ ಔಷಧಿಗಳ ಪೈಕಿ ಇದುವರೆಗೆ 651 ಔಷಧಿಗಳ ಸೀಲಿಂಗ್ ಬೆಲೆಗಳನ್ನು ನಿಗದಿಪಡಿಸಲು ಸರ್ಕಾರಕ್ಕೆ ಸಾಧ್ಯವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಜನೌಷಧಿ ಅಭಿಯಾನವು ಮಾರುಕಟ್ಟೆಯಲ್ಲಿ ಸ್ಪರ್ಧೆ ಸೃಷ್ಟಿಸಿದ್ದು ಇದರಿಂದಾಗಿ ಕಂಪನಿಗಳು ಸುಖಾ ಸುಮ್ಮನೆ ಬೆಲೆ ಏರಿಕೆ ಮಾಡುವುದನ್ನು ತಡೆಯುತ್ತಿದೆ.
ಬೆಲೆಯಲ್ಲಿ ಇಳಿಕೆ ಏಕೆ?
NPPA ಪ್ರಕಾರ, ಸೀಲಿಂಗ್ ಬೆಲೆಗಳ ಮಿತಿಯೊಂದಿಗೆ ಸರಾಸರಿ 651 ಅಗತ್ಯ ಔಷಧಿಗಳ ಬೆಲೆ ಈಗಾಗಲೇ 16.62 ಶೇಕಡಾ ಕಡಿಮೆಯಾಗಿದೆ. ಡಬ್ಲ್ಯುಪಿಐ ಆಧಾರದ ಮೇಲೆ ಔಷಧಿಗಳ ಬೆಲೆಯಲ್ಲಿ ವಾರ್ಷಿಕ 12.12 ರಷ್ಟು ಹೆಚ್ಚಳದ ಹೊರತಾಗಿಯೂ ಗ್ರಾಹಕರು ಬೆಲೆಯ ಕುಸಿತದಿಂದ ಪ್ರಯೋಜನ ಪಡೆಯುತ್ತಾರೆ ಎಂದಿದೆ. NLEM ನಲ್ಲಿ ಪಟ್ಟಿ ಮಾಡಲಾದ ಔಷಧಿಗಳ ಬೆಲೆಗಳಲ್ಲಿ ವಾರ್ಷಿಕ ಹೆಚ್ಚಳವು WPI ಅನ್ನು ಆಧರಿಸಿದೆ
Published On - 4:08 pm, Tue, 4 April 23