ಬಜೆಟ್ಗೆ ಕೌಂಟ್ಡೌನ್ ಶುರು, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಲು ವಿಪಕ್ಷಗಳು ಸಜ್ಜು
ದೆಹಲಿ: ಕುಸಿಯುತ್ತಿರುವ ಆರ್ಥಿಕತೆ, ಹೆಚ್ಚುತ್ತಿರುವ ನಿರುದ್ಯೋಗ. ಇದೆಲ್ಲಾ ಕೇಂದ್ರ ಸರ್ಕಾರದ ನಿದ್ದೆಗೆಡಿಸಿದೆ. ಇದೆಲ್ಲದ್ರ ಮಧ್ಯೆ ಇಂದಿನಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು, ಬಜೆಟ್ಗೆ ಕೌಂಟ್ಡೌನ್ ಶುರುವಾಗಿದೆ. ಈ ಸಂದರ್ಭವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸರ್ವಪಕ್ಷ ಸಭೆ ನಡೆಸಿದ್ದರೂ ಸಂಸತ್ನಲ್ಲಿ ದೊಡ್ಡ ಕೋಲಾಹಲದ ಮುನ್ಸೂಚನೆ ಸಿಕ್ಕಿದೆ. ದೇಶದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಒಂದುಕಡೆ ಬೇಡಿಕೆ ಕುಸಿದಿದ್ದು, ಮತ್ತೊಂದ್ಕಡೆ ಉತ್ಪಾದನೆ ಕೂಡ ಕುಂಠಿತವಾಗಿದೆ. ಇದು ಉದ್ಯೋಗದ ಮೇಲೆ ನೇರ ಪ್ರಭಾವ ಬೀರಿದ್ದು, ಹಲವು ದಶಕಗಳ ನಂತರ ದೇಶದಲ್ಲಿ ಭಾರಿ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗಿದೆ. […]
ದೆಹಲಿ: ಕುಸಿಯುತ್ತಿರುವ ಆರ್ಥಿಕತೆ, ಹೆಚ್ಚುತ್ತಿರುವ ನಿರುದ್ಯೋಗ. ಇದೆಲ್ಲಾ ಕೇಂದ್ರ ಸರ್ಕಾರದ ನಿದ್ದೆಗೆಡಿಸಿದೆ. ಇದೆಲ್ಲದ್ರ ಮಧ್ಯೆ ಇಂದಿನಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು, ಬಜೆಟ್ಗೆ ಕೌಂಟ್ಡೌನ್ ಶುರುವಾಗಿದೆ. ಈ ಸಂದರ್ಭವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸರ್ವಪಕ್ಷ ಸಭೆ ನಡೆಸಿದ್ದರೂ ಸಂಸತ್ನಲ್ಲಿ ದೊಡ್ಡ ಕೋಲಾಹಲದ ಮುನ್ಸೂಚನೆ ಸಿಕ್ಕಿದೆ.
ದೇಶದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಒಂದುಕಡೆ ಬೇಡಿಕೆ ಕುಸಿದಿದ್ದು, ಮತ್ತೊಂದ್ಕಡೆ ಉತ್ಪಾದನೆ ಕೂಡ ಕುಂಠಿತವಾಗಿದೆ. ಇದು ಉದ್ಯೋಗದ ಮೇಲೆ ನೇರ ಪ್ರಭಾವ ಬೀರಿದ್ದು, ಹಲವು ದಶಕಗಳ ನಂತರ ದೇಶದಲ್ಲಿ ಭಾರಿ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗಿದೆ. ಇದೆಲ್ಲದರ ಮಧ್ಯೆ 2020-21ರ ಬಜೆಟ್ಗೆ ಕ್ಷಣಗಣನೆ ಆರಂಭವಾಗಿದ್ದು, ಕುಸಿದು ಬಿದ್ದಿರುವ ಆರ್ಥಿಕತೆಗೆ ಮರುಜೀವ ಸಿಗುವ ನಿರೀಕ್ಷೆ ಎಲ್ಲೆಡೆ ಮೂಡಿದೆ.
ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಲು ವಿಪಕ್ಷಗಳು ಸಜ್ಜು! ಇನ್ನು ಕೇಂದ್ರಸರ್ಕಾರ ಜಾರಿಗೆ ತರಲು ಹೊರಟಿರುವ ಸಿಎಎ ಮತ್ತು ಎನ್ಆರ್ಸಿ ವಿರುದ್ಧ ವಿಪಕ್ಷ ನಾಯಕರು ತೊಡೆತಟ್ಟಿದ್ದಾರೆ. ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ ಇಷ್ಟುದಿನ ಸಂಸತ್ ಹೊರಗೆ ನಡೆಯುತ್ತಿದ್ದ ವಾಗ್ದಾಳಿ ಈಗ ಸಂಸತ್ ಒಳಗೆ ನಡೆಯುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ವಿಪಕ್ಷಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಕೇಂದ್ರ ನಾಯಕರು ಸರ್ವಪಕ್ಷ ಸಭೆ ನಡೆಸಿದ್ದಾರೆ. ಆದ್ರೆ ಇದು ವರ್ಕೌಟ್ ಆಗುವ ಲಕ್ಷಣ ಕಾಣುತ್ತಿಲ್ಲ. ಇದೆಲ್ಲದರ ಮಧ್ಯೆ ಕೇಂದ್ರ ಸರ್ಕಾರ ಆರ್ಥಿಕತೆ ಸರಿಪಡಿಸುವಂಥ ಬಜೆಟ್ ನೀಡಬೇಕಿದೆ.
ಜನಪರ v/s ಜನಪ್ರಿಯ! ಲೋಕಸಭೆಯಲ್ಲಿಂದು ಆರ್ಥಿಕ ಸಲಹೆಗಾರರು ಸಿದ್ಧಪಡಿಸಿರುವ ಆರ್ಥಿಕ ಸಮೀಕ್ಷೆ ಮಂಡಿಸಲಾಗುತ್ತೆ. ನಾಳೆ ಬಜೆಟ್ ಮಂಡನೆಯಾಗಲಿದೆ. ಫೆಬ್ರವರಿ 11ರವರೆಗೆ ಮೊದಲ ಸುತ್ತಿನ ಅಧಿವೇಶನ ನಡೆದ್ರೆ, 2ನೇ ಹಂತದಲ್ಲಿ ಮಾರ್ಚ್ 2 ರಿಂದ ಏಪ್ರಿಲ್ 3 ರವರೆಗೆ ನಡೆಯಲಿದೆ. ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಕೇಂದ್ರ ಸರ್ಕಾರ ಒತ್ತು ನೀಡುವ ಸಾಧ್ಯತೆ ಇದೆ. ಮತ್ತೊಂದ್ಕಡೆ ನಿರುದ್ಯೋಗ ಸಮಸ್ಯೆ 45 ವರ್ಷಗಳಲ್ಲೇ ಅತಿ ಹೆಚ್ಚಾಗಿರೋದು ಕೇಂದ್ರಸರ್ಕಾರವನ್ನ ಚಿಂತೆಗೀಡು ಮಾಡಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಜನಪ್ರಿಯ ಬಜೆಟ್ಗೆ ಮೊರೆ ಹೋಗುವ ಬದಲು ಜನಪರ ಬಜೆಟ್ಗೆ ಒತ್ತು ನೀಡುವ ಸಾಧ್ಯತೆ ಇದೆ.
ಇದಿಷ್ಟೂ ಬಜೆಟ್ ಬಗೆಯದ್ದಾದ್ರೆ ಇನ್ನೂ ಹಲವು ವಿಚಾರಗಳಲ್ಲಿ ಈ ಬಾರಿ ಸಂಸತ್ ಅಧಿವೇಶನ ಸದ್ದು ಮಾಡುವ ಸಾಧ್ಯತೆ ಇದೆ. ಸಿಎಎ ವಿರೋಧಿಸಿ ವಿಪಕ್ಷಗಳು ಸಂಸತ್ನಲ್ಲಿ ಕೋಲಾಹಲ ಎಬ್ಬಿಸುವ ಸಾಧ್ಯತೆ ಇದ್ರೆ ಮತ್ತಷ್ಟು ಹೊಸ ಮಸೂದೆಗಳನ್ನ ಸಂಸತ್ನಲ್ಲಿ ಪಾಸ್ ಮಾಡಲು ಕೇಂದ್ರಸರ್ಕಾರ ಸಿದ್ಧತೆ ನಡೆಸಿದೆ. ಒಟ್ನಲ್ಲಿ ಆರ್ಥಿಕ ಕುಸಿತದ ಬೆನ್ನಲ್ಲೇ ಮಂಡನೆಯಾಗ್ತಿರೋ ಪ್ರಸಕ್ತ ಬಜೆಟ್ ಎಷ್ಟರಮಟ್ಟಿಗೆ ಪ್ರಾಕ್ಟಿಕಲ್ ಆಗಿರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
Published On - 8:29 am, Fri, 31 January 20