AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ದಂಪತಿ ಆತ್ಮಹತ್ಯೆ, ಗೋಡೆಯ ಮೇಲೆ ಲಿಪ್​ಸ್ಟಿಕ್​ನಲ್ಲಿ ಬರೆದಿತ್ತು ಡೆತ್ ನೋಟ್

ಮನೆಯೊಳಗೆ ದಂಪತಿ ಆತ್ಮಹತ್ಯೆ(Suicide)ಗೆ ಶರಣಾಗಿರುವ ಘಟನೆ ಛತ್ತೀಸ್​ಗಢದ ಬಿಲಾಸ್​ಪುರದಲ್ಲಿ ನಡೆದಿದೆ. ಪತಿ ಮತ್ತು ಪತ್ನಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಆರಂಭದಲ್ಲಿ ಕೌಟುಂಬಿಕ ಕಲಹದಂತೆ ಕಂಡರೂ ಬಳಿಕ ಗೋಡೆಯ ಮೇಲೆ ಲಿಪ್​ಸ್ಟಿಕ್​ನಲ್ಲಿ ಬರೆದ ಡೆತ್​ ನೋಟ್ ತನಿಖೆಯ ದಿಕ್ಕನ್ನೇ ಬದಲಿಸಿದೆ. ಮೂವತ್ತು ವರ್ಷದ ಶಿವಾನಿ ತಾಂಬೆ ಅಲಿಯಾಸ್ ನೇಹಾ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದರೆ, ಆಕೆಯ ಪತಿ ರಾಜ್ ತಾಂಬೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮನೆಯಲ್ಲಿ ದಂಪತಿ ಆತ್ಮಹತ್ಯೆ, ಗೋಡೆಯ ಮೇಲೆ ಲಿಪ್​ಸ್ಟಿಕ್​ನಲ್ಲಿ ಬರೆದಿತ್ತು ಡೆತ್ ನೋಟ್
ಕ್ರೈಂImage Credit source: NDTV
ನಯನಾ ರಾಜೀವ್
|

Updated on:Nov 26, 2025 | 12:20 PM

Share

ಬಿಲಾಸ್​ಪುರ, ನವೆಂಬರ್ 26: ಮನೆಯೊಳಗೆ ದಂಪತಿ ಆತ್ಮಹತ್ಯೆ(Suicide)ಗೆ ಶರಣಾಗಿರುವ ಘಟನೆ ಛತ್ತೀಸ್​ಗಢದ ಬಿಲಾಸ್​ಪುರದಲ್ಲಿ ನಡೆದಿದೆ. ಪತಿ ಮತ್ತು ಪತ್ನಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಆರಂಭದಲ್ಲಿ ಕೌಟುಂಬಿಕ ಕಲಹದಂತೆ ಕಂಡರೂ ಬಳಿಕ ಗೋಡೆಯ ಮೇಲೆ ಲಿಪ್​ಸ್ಟಿಕ್​ನಲ್ಲಿ ಬರೆದ ಡೆತ್​ ನೋಟ್ ತನಿಖೆಯ ದಿಕ್ಕನ್ನೇ ಬದಲಿಸಿದೆ. ಮೂವತ್ತು ವರ್ಷದ ಶಿವಾನಿ ತಾಂಬೆ ಅಲಿಯಾಸ್ ನೇಹಾ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದರೆ, ಆಕೆಯ ಪತಿ ರಾಜ್ ತಾಂಬೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಆದರೆ ಪೊಲೀಸರನ್ನು ಇನ್ನಷ್ಟು ಆಘಾತಗೊಳಿಸಿದ್ದು ಗೋಡೆಗಳ ಮೇಲೆ ಲಿಪ್‌ಸ್ಟಿಕ್‌ನಿಂದ ಬರೆಯಲಾದ ಸಂದೇಶಗಳು ಅವರ ಹತಾಶೆಯನ್ನು ಸೂಚಿಸುತ್ತದೆ. ಆ ಬರಹಗಳಲ್ಲಿ ರಾಜೇಶ್ ವಿಶ್ವಾಸ್ ಎಂಬ ವ್ಯಕ್ತಿಯ ಹೆಸರು ಮತ್ತು ಮೊಬೈಲ್ ಸಂಖ್ಯೆಯೂ ಇತ್ತು. ದಂಪತಿ ದಾಂಪತ್ಯದಲ್ಲಿ ಗೊಂದಲ ಉಂಟು ಮಾಡುತ್ತಿದ್ದಾನೆ ಎಂದು ಅದು ಆರೋಪಿಸಲಾಗಿದೆ. ಒಂದು ಸಾಲಿನಲ್ಲಿ ರಾಜೇಶ್ ವಿಶ್ವಾಸ್‌ನಿಂದಾಗಿ ನಾವು ಸಾಯುತ್ತಿದ್ದೇವೆ ಎಂದು ಬರೆದಿದ್ದರೆ, ಇನ್ನೊಂದು ಮತ್ತೊಂದು ಸಾಲಿನಲ್ಲಿ ಮಕ್ಕಳೇ, ನಾವು ನಿಮ್ಮನ್ನು ಪ್ರೀತಿಸುತ್ತೇವೆ ಎಂದು ಬರೆಯಲಾಗಿತ್ತು. ಹೆಂಡತಿಯ ಫೋನ್ ಕರೆಗಳ ಕುರಿತು ಆಗಾಗ ಜಗಳಗಳು ನಡೆಯುತ್ತಿದ್ದವು ಎಂಬುದು ಸಂದೇಶದಿಂದ ಬಹಿರಂಗಗೊಂಡಿದೆ.

ಅವರದ್ದು ಪ್ರೇಮವಿವಾಹ ದಂಪತಿಗೆ ಮೂವರು ಮಕ್ಕಳು, ಹತ್ತು ವರ್ಷಗಳಿಂದ ಸಂಸಾರ ಚೆನ್ನಾಗಿಯೇ ಇತ್ತು. ಆದರೆ ಕೆಲವು ತಿಂಗಳುಗಳಿಂದ ಇಬ್ಬರ ನಡುವೆ ಬಿರುಕು ಮೂಡಿತ್ತು. ಈ ದಂಪತಿ ಖಾಸಗಿ ಕಂಪನಿಯಲ್ಲಿ ಕ್ಲೀನರ್‌ಗಳಾಗಿ ಕೆಲಸ ಮಾಡುತ್ತಿದ್ದರು ಮತ್ತು ಮೂವರು ಚಿಕ್ಕ ಮಕ್ಕಳನ್ನು ಬೆಳೆಸುತ್ತಿದ್ದರು. ಅನುಮಾನದ ವಿಚಾರವಾಗಿ ಪ್ರತಿನಿತ್ಯ ಅವರ ಮಧ್ಯೆ ಜಗಳಗಳಾಗುತ್ತಿದ್ದವು ಎಂದು ಅಕ್ಕಪಕ್ಕದ ಮನೆಯವರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಹಲೋ ಎಲ್ಲಾ ಕೇಳಿಸ್ಕೊಳ್ಳಿ: ವಿಡಿಯೋ ಮಾಡಿಟ್ಟು ನವ ವಿವಾಹಿತ ಆತ್ಮಹತ್ಯೆ, ಹೆಂಡ್ತಿ ವಿರುದ್ಧ ಗಂಭೀರ ಆರೋಪ

ನವೆಂಬರ್ 24 ರಂದು, ರಾಜ್ ಹಾಗೂ ನೇಹಾ ಮಧ್ಯಾಹ್ನದವರೆಗೆ ಮನೆಯಿಂದ ಹೊರಗೆ ಬಾರದಿದ್ದಾಗ, ನೇಹಾಳ ತಾಯಿ ರೀನಾ ಆತಂಕಗೊಂಡು ಅವರನ್ನು ನೋಡಲು ಮನೆಗೆ ಹೋಗಿದ್ದರು. ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಹೇಗೋ ಬಾಗಿಲು ತೆರೆಯುವಲ್ಲಿ ತೆರೆಯುವಲ್ಲಿ ಯಶಸ್ವಿಯಾಗಿದ್ದರು, ಅಲ್ಲಿ ಕಂಡ ದೃಶ್ಯ ಅವರನ್ನು ಆತಂಕಕ್ಕೀಡುಮಾಡಿತ್ತು.

ನೇಹಾಳ ಕುತ್ತಿಗೆಯಲ್ಲಿ ಗೀರು ಗುರುತುಗಳನ್ನು ವಿಧಿವಿಜ್ಞಾನ ತಜ್ಞರು ಪತ್ತೆಹಚ್ಚಿದ್ದು, ರಾಜ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಕೋಣೆಯಲ್ಲಿ ಸಿಕ್ಕ ಆತ್ಮಹತ್ಯಾ ಪತ್ರವು ಗೋಡೆಗಳ ಮೇಲೆ ಬರೆಯಲಾದ ಅದೇ ಆರೋಪಗಳನ್ನು ಪ್ರತಿಧ್ವನಿಸುತ್ತಿದೆ.

ಎಲ್ಲಾ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು, ತಾಂಬೆ ಮನೆಯೊಳಗೆ ನಿಜವಾಗಿಯೂ ಏನಾಯಿತು ಎಂಬುದನ್ನು ನಿರ್ಧರಿಸುವಲ್ಲಿ ವಿಧಿವಿಜ್ಞಾನ ವರದಿಯು ನಿರ್ಣಾಯಕವಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:18 pm, Wed, 26 November 25