ಉತ್ತರಾಖಂಡ ಕೋರ್ಟ್ ಆವರಣಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ ಕಾಡಾನೆ
ಅಧಿಕಾರಿಗಳು ಅಸಾಮಾನ್ಯ ಪರಿಸ್ಥಿತಿಗೆ ತ್ವರಿತವಾಗಿ ಪ್ರತಿಕ್ರಿಯಿಸಿದರು. ಆನೆ ಇರುವ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಆನೆಯನ್ನು ಹೆದರಿಸಿ ರಾಜಾಜಿ ಹುಲಿ ಸಂರಕ್ಷಿತ ಅರಣ್ಯಕ್ಕೆ ಆನೆಯನ್ನು ಓಡಿಸಿದ್ದಾರೆ.
ದೆಹಲಿ ಡಿಸೆಂಬರ್ 28: ಉತ್ತರಾಖಂಡದ (Uttarakhand Court) ಹರಿದ್ವಾರದ (Haridwar)ನ್ಯಾಯಾಲಯವೊಂದರಲ್ಲಿ ಬುಧವಾರ ಆನೆಯೊಂದು ಗೇಟ್ ನಿಂದ ಕೆಳಗಿಳಿದು ಆವರಣದೊಳಗೆ ನುಗ್ಗಿದ ಘಟನೆ ನಡೆದಿದೆ. ಹರಿದ್ವಾರದ ರೋಶನಾಬಾದ್ ಪ್ರದೇಶದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ. ಹತ್ತಿರದ ರಾಜಾಜಿ ರಕ್ಷಿತಾರಣ್ಯದಿಂದ ಹೊರಬಂದಿದೆ ಎಂದು ನಂಬಲಾದ ಆನೆ (Elephant) ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ಮತ್ತು ನ್ಯಾಯಾಲಯದ ಆವರಣದಲ್ಲಿ ಸಂಚರಿಸುತ್ತಿದ್ದಂತೆ ಗೊಂದಲವನ್ನು ಸೃಷ್ಟಿಸಿತು. ಆನೆ ಗೇಟ್ ಗಳನ್ನು ಮುರಿದು ಗೋಡೆಯನ್ನು ಹಾನಿಗೊಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ಘಟನೆಯ ವಿಡಿಯೊಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆನೆಯು ನ್ಯಾಯಾಲಯದ ಆವರಣವನ್ನು ಪ್ರವೇಶಿಸುವ ಮೊದಲು ಮುಖ್ಯ ದ್ವಾರದಿಂದ ಕೆಳಗಿಳಿದು ತಿರುಗಾಡುವುದನ್ನು ತೋರಿಸುತ್ತದೆ.
In areas adjacent to jungles, there have been many occurrences where an Elephant made its way into Haridwar, in this instance it was the District Collector’s office, the Elephant advanced towards the main gate of the District Court Judiciary and forcefully opened the closed gate.… pic.twitter.com/zuy8OhL7og
— Dr. PM Dhakate (@paragenetics) December 27, 2023
ಅಧಿಕಾರಿಗಳು ಅಸಾಮಾನ್ಯ ಪರಿಸ್ಥಿತಿಗೆ ತ್ವರಿತವಾಗಿ ಪ್ರತಿಕ್ರಿಯಿಸಿದರು. ಆನೆ ಇರುವ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಆನೆಯನ್ನು ಹೆದರಿಸಿ ರಾಜಾಜಿ ಹುಲಿ ಸಂರಕ್ಷಿತ ಅರಣ್ಯಕ್ಕೆ ಆನೆಯನ್ನು ಓಡಿಸಿದ್ದಾರೆ.
ಇದನ್ನೂ ಓದಿ:ರಾಮನಗರ: ಆನೆ ಪಳಗಿಸುತ್ತೇನೆ ಎಂದು ಕಾಡಿಗೆ ಹೋದವನು ಕಾಡಾನೆಗೆ ಬಲಿ
ಉತ್ತರಾಖಂಡದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿಎಂ ಧಾಕಾಟೆ ಅವರ ಪ್ರಕಾರ, ಸಿಬ್ಬಂದಿ ಅಂತಿಮವಾಗಿ ಪ್ರಾಣಿಯನ್ನು ಹೆದರಿಸಿ ರಾಜಾಜಿ ಹುಲಿ ರಕ್ಷಿತಾರಣ್ಯ ಪ್ರದೇಶಕ್ಕೆ ಓಡಿಸುವಲ್ಲಿ ಯಶಸ್ವಿಯಾದರು. “ಕಾಡಿನ ಪಕ್ಕದ ಪ್ರದೇಶಗಳಲ್ಲಿ, ಆನೆ ಹರಿದ್ವಾರಕ್ಕೆ ಪ್ರವೇಶಿಸಿದ ಅನೇಕ ಘಟನೆಗಳು ನಡೆದಿವೆ, ಈ ಸಂದರ್ಭದಲ್ಲಿ ಅದು ಜಿಲ್ಲಾಧಿಕಾರಿ ಕಚೇರಿ, ಆನೆ ಜಿಲ್ಲಾ ನ್ಯಾಯಾಲಯದ ನ್ಯಾಯಾಂಗದ ಮುಖ್ಯ ಗೇಟ್ ಕಡೆಗೆ ಮುಂದುವರಿಯಿತು ಮತ್ತು ಮುಚ್ಚಿದ ಗೇಟ್ ಅನ್ನು ಬಲವಂತವಾಗಿ ತೆರೆಯಿತು. ಸಾಂಪ್ರದಾಯಿಕ ಮಾರ್ಗಗಳಲ್ಲಿ ಆನೆ ಬಂದಿರುವುದನ್ನು ಗಮನಿಸಬೇಕು. ಹೆಚ್ಚಿನ ಪ್ರಯತ್ನದ ನಂತರ, ಉತ್ತರಾಖಂಡ ಅರಣ್ಯ ಇಲಾಖೆಯ ತಂಡವು ಆನೆಯನ್ನು ಅದರ ನೈಸರ್ಗಿಕ ಆವಾಸಸ್ಥಾನಕ್ಕೆ ಓಡಿಸಿದ್ದಾರೆ ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಬರೆದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:51 pm, Thu, 28 December 23