ಚೀನಾ, ಯುಕೆ, ಸಿಂಗಾಪುರಗಳಲ್ಲಿ ಮಿತಿಮೀರುತ್ತಿದೆ ಕೊರೊನಾ ಪ್ರಕರಣ; ಇದು ಭಾರತಕ್ಕೆ ಎಚ್ಚರಿಕೆ, ಆರೋಗ್ಯ ಸಚಿವರಿಂದ ಉನ್ನತ ಸಭೆ

ಕೊರೊನಾ ಶುರುವಾದ ಮೇಲೆ ಕಳೆದ ಎರಡು ವರ್ಷಗಳಿಂದಲೂ ರದ್ದುಗೊಂಡಿದ್ದ  ಅಂತಾರಾಷ್ಟ್ರೀಯ ವಿಮಾನ ನಿಯಮಿತ ಸಂಚಾರವನ್ನು ಮತ್ತೆ ಮಾರ್ಚ್​ 27ರಿಂದ ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ ಉಳಿದ ವಿದೇಶಗಳಲ್ಲಿ ಕೊರೊನಾ ಹೆಚ್ಚುತ್ತಿರುವುದು ಆತಂಕಕ್ಕೀಡು ಮಾಡಿದೆ.

ಚೀನಾ, ಯುಕೆ, ಸಿಂಗಾಪುರಗಳಲ್ಲಿ ಮಿತಿಮೀರುತ್ತಿದೆ ಕೊರೊನಾ ಪ್ರಕರಣ; ಇದು ಭಾರತಕ್ಕೆ ಎಚ್ಚರಿಕೆ, ಆರೋಗ್ಯ ಸಚಿವರಿಂದ ಉನ್ನತ ಸಭೆ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Mar 17, 2022 | 11:50 AM

ದೆಹಲಿ: ಭಾರತದಲ್ಲಿ ಕೊವಿಡ್ 19 ಪ್ರಕರಣಗಳ ಸಂಖ್ಯೆ ತುಸು ಕಡಿಮೆಯಾಗುತ್ತಿದ್ದರೂ ಮತ್ತೆ ಚೀನಾ, ಹಾಂಗ್​ಕಾಂಗ್​, ಸಿಂಗಾಪುರ, ದಕ್ಷಿಣ ಕೊರಿಯಾ, ಯುಕೆ ಮತ್ತಿತರ ದೇಶಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮಿತಿಮೀರುತ್ತಿದೆ. ಹೀಗಾಗಿ ಭಾರತದಲ್ಲಿಯೂ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಹೇಳಿದ್ದಾರೆ. ಹಾಗೇ, ದೇಶದಲ್ಲಿ ಜಿನೋಮ್​ ಸಿಕ್ವೆನ್ಸಿಂಗ್​, ಕೊರೊನಾ ತಪಾಸಣೆ, ಕೊರೊನಾ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತೀವ್ರ ಕಣ್ಗಾವಲು ಇಡಬೇಕು ಎಂದೂ ಮನ್​ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಮನ್​ಸುಖ್​ ಮಾಂಡವಿಯಾ ಬುಧವಾರ (ಮಾ.16) ಉನ್ನತ ಮಟ್ಟದ ಸಭೆ ಕರೆದಿದ್ದರು. ಕೊವಿಡ್​ 19 ಸ್ಥಿತಿಗತಿ, ಲಸಿಕೆ ಅಭಿಯಾನದ ವೇಗ ಇತ್ಯಾದಿಗಳ ಪರಿಶೀಲನೆ ಮಾಡಿದ್ದಾರೆ.

ಏಷ್ಯಾದ ಹಲವು ದೇಶಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಬೆನ್ನಲ್ಲೇ ಭಾರತದಲ್ಲೂ ಮತ್ತೆ ಕಟ್ಟೆಚ್ಚರ ಘೋಷಿಸಲಾಗಿದೆ. ಕೊರೊನಾ ಶುರುವಾದ ಮೇಲೆ ಕಳೆದ ಎರಡು ವರ್ಷಗಳಿಂದಲೂ ರದ್ದುಗೊಂಡಿದ್ದ  ಅಂತಾರಾಷ್ಟ್ರೀಯ ವಿಮಾನ ನಿಯಮಿತ ಸಂಚಾರವನ್ನು ಮತ್ತೆ ಮಾರ್ಚ್​ 27ರಿಂದ ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿ, ಈ ಬಗ್ಗೆ ಘೋಷಣೆಯನ್ನೂ ಮಾಡಿದೆ. ಕೊವಿಡ್ 19 ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು , ಅಂತಾರಾಷ್ಟ್ರೀಯ ವಿಮಾನ ಸಂಚಾರ ಸೇವೆ ಪ್ರಾರಂಭ ಮಾಡುವುದಾಗಿ ಹೇಳಿದೆ. ಇದೇ ಹೊತ್ತಲ್ಲಿ ಮತ್ತೆ ಕೆಲವು ದೇಶಗಳಲ್ಲಿ ಕೊರೊನಾ ಮಿತಿಮೀರುತ್ತಿರುವುದರಿಂದ ಆತಂಕ ಶುರುವಾಗಿದೆ.

ಚೀನಾ, ಹಾಂಗ್​ಕಾಂಗ್​​ನಲ್ಲಿ ಇತ್ತೀಚೆಗೆ ಹಲವು ದಿನಗಳಿಂದಲೂ ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿರುವುದು ವರದಿಯಾಗುತ್ತಿದೆ. ಆ ಸಾಲಿಗೆ ದಕ್ಷಿಣ ಕೊರಿಯಾ ಸೇರಿದ್ದು, ಇಂದು ಒಂದೇ ದಿನ 6,21,328 ಪ್ರಕರಣಗಳು ದಾಖಲಾಗಿವೆ. 429 ಮಂದಿ ಸಾವನ್ನಪ್ಪಿದ್ದಾರೆ. ಏಷ್ಯಾದ ರಾಷ್ಟ್ರಗಳಲ್ಲಿ, ಡೆಲ್ಟಾ ಮತ್ತು ಒಮಿಕ್ರಾನ್​ ಎರಡೂ ವೈರಾಣುಗಳ ಪ್ರಸರಣ ಅಧಿಕವಾಗಿದೆ. ಹಾಗೇ, ಯುರೋಪಿಯನ್​ ದೇಶಗಳಲ್ಲಿ ಒಮಿಕ್ರಾನ್​ ಹರಡುವಿಕೆ ಅಪಾಯದ ಹಂತದಲ್ಲಿದೆ. ಅತ್ಯಂತ ವೇಗವಾಗಿ ಹರಡುವ ರೂಪಾಂತರ ತಳಿ ಎಂದೇ ಹೇಳಲಾಗಿರುವ ಒಮಿಕ್ರಾನ್​ ಸದ್ಯ ಜರ್ಮನಿ ಮತ್ತು ಆಸ್ಟ್ರೇಲಿಯಾಗಳಲ್ಲಿ  ಕ್ಷಿಪ್ರವಾಗಿ ಹರಡುತ್ತಿದೆ.

ಇಟಲಿಯಲ್ಲಿ ಕೂಡ ಕೊರೊನಾ ಸೋಂಕಿನ ಪ್ರಕರಣದಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಅಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಶಾಲಾ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಯುಕೆ (ಬ್ರಿಟನ್​)ಯಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ಕೊರೊನಾ ಹರಡುವಿಕೆಯಲ್ಲಿ ಶೇ.48ರಷ್ಟು ಹೆಚ್ಚಳವಾಗಿದ್ದರೆ, ಆಸ್ಪತ್ರೆಗೆ ದಾಖಲಾಗುವ ಪ್ರಮಾಣದಲ್ಲಿ ಶೇ.17ರಷ್ಟು ಏರಿಕೆಯಾಗಿದೆ.  ಇನ್ನೇನು ಕೊರೊನಾ ಕಡಿಮೆಯಾಯಿತು ಎಂಬ ಕಾರಣಕ್ಕೆ ಯುಕೆ ಕೊವಿಡ್ 19 ನಿಯಂತ್ರಣ ನಿರ್ಬಂಧಗಳನ್ನು ತೆಗೆದುಹಾಕಿತ್ತು. ಅದಾದ ಎರಡೇ ವಾರದಲ್ಲಿ ಕೊರೊನಾ ಸಿಕ್ಕಾಪಟೆ ಹೆಚ್ಚುತ್ತಿದೆ.

ಯುಎಸ್​ನಲ್ಲೂ ಹೆಚ್ಚಳ: ಮಾರ್ಚ್​ 1ರಿಂದ 10ರವರೆಗಿನ ಅವಧಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗಿದೆ ಎಂದು ಯುಎಸ್​ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಡಾಟಾ ತಿಳಿಸಿದೆ. ಫೆಬ್ರವರಿಯಲ್ಲಿ ಇದೇ ಅವಧಿಗಿಂತ ಎರಡು ಪಟ್ಟು ಹೆಚ್ಚು, ಮಾರ್ಚ್​​ನಲ್ಲಿ ಕಾಣಿಸಿಕೊಂಡಿದೆ ಎಂದೂ ಉಲ್ಲೇಖಿಸಲಾಗಿದೆ. ಭಾರತದಲ್ಲಿ ಜನವರಿ-ಫೆಬ್ರವರಿಯಲ್ಲಿ ಅತ್ಯಂತ ಹೆಚ್ಚಾಗಿದ್ದ ಕೊರೊನಾ ಸೋಂಕಿನ ಪ್ರಮಾಣ ಇದೀಗ ಇಳಿಮುಖವಾಗುತ್ತಿದ್ದರೂ, ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಅವಕಾಶ ಸಿಕ್ಕರೆ, ಬೇರೆ ದೇಶಗಳಿಂದ ಬರುವವರು, ಇಲ್ಲಿಂದ ಹೋಗುವವರ ಸಂಖ್ಯೆಯೂ ಹೆಚ್ಚುತ್ತದೆ. ಹೀಗಾದರೆ ಕೊರೊನಾ ಮತ್ತೆ ಏರಿಕೆಯಾಗುವ ಸಂಭವವನ್ನು ಅಲ್ಲಗಳೆಯುವಂತಿಲ್ಲ.

ಇದನ್ನೂ ಓದಿ: ಪಕ್ಷ ಒಡೆಯುವುದು ಬೇಡ, ಆದರೆ ಗಾಂಧಿ ಕುಟುಂಬ ನಿಷ್ಠರ ಪದಚ್ಯುತಿಯಾಗಲಿ: ಕಾಂಗ್ರೆಸ್ ಬಂಡಾಯ ನಾಯಕರ ಒತ್ತಾಯ

Published On - 11:23 am, Thu, 17 March 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್