ಸೆಪ್ಟೆಂಬರ್ 30ರಂದು ಅನ್ಲಾಕ್ 5.0ಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ ಕೇಂದ್ರ ಗೃಹ ಸಚಿವಾಲಯ ಶಾಲೆಗಳನ್ನು ಅಕ್ಟೋಬರ್ 15ರಿಂದ ಪುನರಾರಂಭಿಸಬಹುದೆಂದು ಹೇಳಿದೆ. ಆದರೆ, ಕರ್ನಾಟಕ ಸರ್ಕಾರ ಈ ಬಗ್ಗೆ ಅವಸರ ತೋರುತ್ತಿಲ್ಲ. ಪಕ್ಕದ ಆಂಧ್ರಪ್ರದೇಶದಲ್ಲಿ ಕೊವಿಡ್-19ಗೆ ಸಂಬಂಧಿಸಿದ ಒಂದು ಘಟನೆ ಮಾತ್ರ ಶಾಲೆಗಳನ್ನು ಆದಷ್ಟು ಬೇಗ ಪುನರಾರಂಭಿಸಲು ತವಕಪಡುತ್ತಿರುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಇದು ಕೇವಲ ಸರ್ಕಾರವಷ್ಟೇ ಅಲ್ಲ ಪೋಷಕರನ್ನೂ ಎಚ್ಚರಿಸುವಂಥ ಪ್ರಕರಣವಾಗಿದೆ.
ಆಂಧ್ರಪ್ರದೇಶದ ಗುಂ
ಅಂದಹಾಗೆ, ರಿಪೋರ್ಟ್ ಒಂದರ ಪ್ರಕಾರ 14 ವರ್ಷದೊಳಗಿನ ಮಕ್ಕಳು ಈ ವ್ಯಾಧಿಯ ‘ಸೈಲೆಂಟ್ ಸ್ಪ್ರೆಡರ್’ ಗಳಂತೆ. ಪರಿಸ್ಥಿತಿ ಹಾಗಿರಬೇಕಾದರೆ ಶಾಲೆಗಳನ್ನು ಪುನರಾರಂಭಿಸುವ ಯೋಚನೆಯೇ ಅಪಾಯಕ್ಕೆ ಆಮಂತ್ರಣ ನೀಡಿದಂತೆ.
ವಿಶ್ವದಲ್ಲಿ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಈಗಲೇ ಶಾಲೆಗಳೇನಾದರು ಪುನರಾರಂಭಗೊಂಡರೆ ಸೋಂಕು ಮತ್ತಷ್ಟು ಹೆಚ್ಚುವ ಸಾಧ್ಯತೆಯಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಮೆರಿಕದಲ್ಲಿ ಶಾಲೆಗಳು ಪುನರಾರಂಭಗೊಂಡ ನಂತರವೇ ಸೋಂಕಿನ ಭರಾಟೆ ಅಧಿಕವಾಗಿದ್ದು. ಆದರೆ ಶಾಲೆ ಶುರುವಾಗದೇ ಇದ್ದರೆ, ಮಕ್ಕಳ ಭವಿಷ್ಯಕ್ಕೆ ತೊಂದರೆ; ಹಾಗಂತ ಈಗಲೇ ಪುನರಾರಂಭಿಸಿದರೆ ಮಕ್ಕಳ ಜೀವಕ್ಕೆ ಕುತ್ತು.