ದೇಶದಲ್ಲಿ ಪಿಪಿಇ, ಎನ್-95 ಮಾಸ್ಕ್​ಗಳಿಗೆ ಕೊರತೆ ಇಲ್ಲ: ತಯಾರಿಕಾ ಕಂಪನಿಗಳಿಂದ ಸರ್ಕಾರಕ್ಕೆ ಭರವಸೆ

Wear Mask: 2020ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ದೇಶವು ಸುಮಾರು 6 ಕೋಟಿ ಪಿಪಿಇ ಮತ್ತು 15 ಕೋಟಿ ಎನ್ -95 ಮಾಸ್ಕ್ ಗಳನ್ನು ತಯಾರಿಸಿದೆ. ಈಗಿನಂತೆ, ಯಾವುದೇ ಸಾಮರ್ಥ್ಯದ ನಿರ್ಬಂಧಗಳಿಲ್ಲ. ಎರಡು ತಿಂಗಳ ಅವಧಿಯಲ್ಲಿ ಇಡೀ ದೇಶದ ಒಂದು ವರ್ಷದ ಅವಶ್ಯಕತೆಗಾಗಿ ಪಿಪಿಇಗಳನ್ನು ಉತ್ಪಾದಿಸುವ ಸಾಮರ್ಥ್ಯ ನಮ್ಮಲ್ಲಿದೆ

ದೇಶದಲ್ಲಿ ಪಿಪಿಇ, ಎನ್-95 ಮಾಸ್ಕ್​ಗಳಿಗೆ ಕೊರತೆ ಇಲ್ಲ: ತಯಾರಿಕಾ ಕಂಪನಿಗಳಿಂದ ಸರ್ಕಾರಕ್ಕೆ ಭರವಸೆ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Apr 30, 2021 | 12:45 PM

ದೆಹಲಿ: ದೇಶದಲ್ಲಿ ಕೊವಿಡ್ ರೋಗ  ವ್ಯಾಪಿಸುತ್ತಿದ್ದು ಪಿಪಿಇ , ಎನ್-95 ಮಾಸ್ಕ್, 2/3 ಪದರದ ಸರ್ಜಿಕಲ್ ಮಾಸ್ಕ್ ಇದ್ಯಾವುದರ ಕೊರತೆ ಇಲ್ಲ. ಅಗತ್ಯ ವಸ್ತುಗಳ ಸಂಗ್ರಹಣೆ ಇದೆ ಎಂದು ಈ ವಸ್ತುಗಳನ್ನು ತಯಾರಿಸುತ್ತಿರುವ ಕಂಪನಿಗಳು ಸರ್ಕಾರರಕ್ಕೆ ಭರವಸೆ ನೀಡಿವೆ. ಪ್ರತಿದಿನ ಎನ್ -95 ಮಾಸ್ಕ್ ಗಿರುವ ಬೇಡಿಕೆ 3 ಲಕ್ಷಕ್ಕಿಂತಲೂ ಕಡಿಮೆ. ಆದರೆ ಉತ್ಪಾದನಾ ಸಾಮರ್ಥ್ಯ ಪ್ರತಿದಿನ 30 ಲಕ್ಷವಾಗಿದೆ. ಅದೇ ವೇಳೆ ಪ್ರತಿದಿನ 5 ಲಕ್ಷ ಪಿಪಿಇ ತಯಾರಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರತಿದಿನ 5 ಲಕ್ಷ ಪಿಪಿಇ ಮತ್ತು ಬೇಡಿಕೆಗಿಂತ 10 ಪಟ್ಟು ಹೆಚ್ಚು ಎನ್-95 ಮಾಸ್ಕ್ ತಯಾರಿಸುತ್ತಿದ್ದೇವೆ. ಪ್ರತಿ ದಿನ 2-3 ಲಕ್ಷದಷ್ಟು ಎನ್-95 ಮಾಸ್ಕ್​ಗೆ ಬೇಡಿಕೆ ಇದೆ. 40 ಬಿಐಎಸ್ ಪ್ರಮಾಣಪತ್ರವಿರುವ ತಯಾಕರ ಕಂಪನಿಗಳೇ ಪ್ರತಿದಿನ 30 ಲಕ್ಷ ಮಾಸ್ಕ್​ಗಳನ್ನು ತಯಾರಿಸುತ್ತವೆ ಎಂದು ಅವರು ಹೇಳಿದ್ದಾರೆ. ಕಳೆದ ಬಾರಿ ಜವಳಿ ಸಚಿವಾಲಯದ ಜತೆ ಸಭೆ ನಡೆದಾಗ ದೇಶದಲ್ಲಿ ಅಗತ್ಯ ಪಿಪಿಇ ಮತ್ತು ಮಾಸ್ಕ್ ಸರಬರಾಜು ಆಗುತ್ತಿದೆ ಎಂದು ತಯಾರಿಕಾ ಕಂಪನಿಗಳು ಸರ್ಕಾರಕ್ಕೆ ಹೇಳಿವೆ .

ಸುಮಾರು 1,100 ತಯಾರಿಕಾ ಕಂಪನಿ ಗಳು ಪಿಪಿಇ ತಯಾರಿಸುವ ಮತ್ತು 200ಕ್ಕಿಂತಲೂ ಹೆಚ್ಚು ಕಂಪನಿಗಳು ಎನ್-95 ಮಾಸ್ಕ್ ತಯಾರಿಸುವ ಅನುಮತಿ ಹೊಂದಿವೆ.  ನಾವು ಸಾಕಷ್ಟು ಸಂಗ್ರಹವನ್ನು ಹೊಂದಿದ್ದೇವೆ ಮತ್ತು ಪೂರೈಕೆಯ ಕೊರತೆ ಅಥವಾ ಯಾವುದೇ ಸಾಮರ್ಥ್ಯದ ನಿರ್ಬಂಧವಿಲ್ಲ ಎಂದು ಉದ್ಯಮದ ಅಧಿಕಾರಿಯೊಬ್ಬರು ಹೇಳಿದ್ದಾರೆ. ರಫ್ತು ಬೇಡಿಕೆ ಕಡಿಮೆ ಆದರೆ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ ಮತ್ತು ಕೇಂದ್ರವು ರಾಜ್ಯದೊಂದಿಗೆ ಸಂಪರ್ಕದಲ್ಲಿದೆ.

ಪಿಪಿಇ, ಎನ್ -95 ಮತ್ತು 2/3 ಪದರದ ಸರ್ಜಿಕಲ್ ಮಾಸ್ಕ್​ಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸಂಗ್ರಹವಿದೆ ಎಂದು ಉಡುಪು ರಫ್ತು ಉತ್ತೇಜನ ಮಂಡಳಿಯ ಅಧ್ಯಕ್ಷ ಎ ಶಕ್ತಿವೇಲ್ ಹೇಳಿದ್ದಾರೆ.

2020 ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ದೇಶವು ಸುಮಾರು 6 ಕೋಟಿ ಪಿಪಿಇ ಮತ್ತು 15 ಕೋಟಿ ಎನ್ -95 ಮಾಸ್ಕ್ ಗಳನ್ನು ತಯಾರಿಸಿದೆ. ಈಗಿನಂತೆ, ಯಾವುದೇ ಸಾಮರ್ಥ್ಯದ ನಿರ್ಬಂಧಗಳಿಲ್ಲ. ಎರಡು ತಿಂಗಳ ಅವಧಿಯಲ್ಲಿ ಇಡೀ ದೇಶದ ಒಂದು ವರ್ಷದ ಅವಶ್ಯಕತೆಗಾಗಿ ಪಿಪಿಇಗಳನ್ನು ಉತ್ಪಾದಿಸುವ ಸಾಮರ್ಥ್ಯ ನಮ್ಮಲ್ಲಿದೆ ಎಂದು ತಿರುಪುರ್ ರಫ್ತುದಾರರ ಸಂಘದ ಅಧ್ಯಕ್ಷ ರಾಜ ಎಂ.ಶಣ್ಮುಖಮ್ ಹೇಳಿದರು.

ದೇಶದಲ್ಲಿ ಕೊವಿಡ್ ಸ್ಥಿತಿಗತಿ

ಕಳೆದ 24 ಗಂಟೆಗಳಲ್ಲಿ 3.86 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆಯಾಗಿದ್ದು, ಸಾಂಕ್ರಾಮಿಕ ರೋಗ ಆರಂಭವಾದಂದಿನಿಂದ ಇಲ್ಲಿಯವರೆಗೆ ಅತೀ ಹೆಚ್ಚು ರೋಗ ಪ್ರಕರಣಗಳು ಗುರುವಾರ ಪತ್ತೆಯಾಗಿದೆ. ದೇಶದಲ್ಲಿ ಕೊವಿಡ್ ರೋಗಿಗಳ ಸಂಖ್ಯೆ 1.87 ಕೋಟಿ ತಲುಪಿದೆ. 31 ಲಕ್ಷಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳು ಇಲ್ಲಿದ್ದು 1.53 ಕೋಟಿ ಜನರು ರೋಗದಿಂದ ಚೇತರಿಸಿಕೊಂಡಿದ್ದಾರೆ. ಆದಾಗ್ಯೂ ,ದೇಶದಲ್ಲಿ ಒಂದೇ ದಿನ 3,498 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 2.08 ಲಕ್ಷಕ್ಕೆ ತಲುಪಿದೆ.

(Covid 19 Pandemic no shortage of ppes N95 Masks Industry Assures the Government)

ಇದನ್ನೂ ಓದಿ: Tv9 Digital Live | ಮನೆಯಲ್ಲೂ ಮಾಸ್ಕ್ ಅನಿವಾರ್ಯನಾ? ವೈದ್ಯರ ಅಭಿಪ್ರಾಯಗಳು ಹೀಗಿವೆ

ಕೊರೊನಾ ಲಾಕ್​ಡೌನ್ ವೇಳೆ ಓಡಾಡುವವರು ಆಧಾರ್​ ತೋರಿಸಬೇಕು, ಮಾಸ್ಕ್​ ಧರಿಸದವರು ಸೂಪರ್​ ಸ್ಪ್ರೆಡರ್ಸ್​: ಬಾಂಬೆ ಹೈಕೋರ್ಟ್​

Published On - 12:43 pm, Fri, 30 April 21

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ