AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್-19 ಎರಡನೇ ಅಲೆ: ಭಾರತದಲ್ಲಿ ಟೆಸ್ಟಿಂಗ್​ಗಳ ಸಂಖ್ಯೆ ಹೆಚ್ಚುತ್ತಿದೆ ಮತ್ತು ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕುಸಿಯುತ್ತಿದೆ

ಭಾರತೀಯ ವೈದ್ಯಕೀಯ ಸಂಶೋಧನೆ ಕೌನ್ಸಿಲ್ (ಐಸಿಎಮ್​ಆರ್) ನೀಡಿರುವ ಮಾಹಿತಿಯ ಪ್ರಕಾರ ಮೇ 20ರವರಗೆ ಭಾರತದಲ್ಲಿ 32,44,17,870 ಜನರ ಟೆಸ್ಟಿಂಗ್ ನಡೆದಿದ್ದು ಗುರುವಾರದಂದು 20, 61,683 ಟೆಸ್ಟ್​ಗಳನ್ನು ಮಾಡಲಾಗಿದೆ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಸತತವಾಗಿ 5 ನೇ ದಿನ ತಾಜಾ ಸೋಂಕಿನ ಪ್ರಕರಣಗಳ ಸಂಖ್ಯೆ 3ಲಕ್ಷಕ್ಕಿಂತ ಕಮ್ಮಿ ವರದಿಯಾಗಿದೆ.

ಕೊವಿಡ್-19 ಎರಡನೇ ಅಲೆ: ಭಾರತದಲ್ಲಿ ಟೆಸ್ಟಿಂಗ್​ಗಳ ಸಂಖ್ಯೆ ಹೆಚ್ಚುತ್ತಿದೆ ಮತ್ತು ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕುಸಿಯುತ್ತಿದೆ
ಕೋವಿಡ್​-19 ಟೆಸ್ಟಿಂಗ್
ಅರುಣ್​ ಕುಮಾರ್​ ಬೆಳ್ಳಿ
|

Updated on:May 22, 2021 | 12:41 AM

Share

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 20.61 ಲಕ್ಷಕ್ಕೂ ಹೆಚ್ಚು ಕೋವಿಡ್-19 ಸೋಂಕು ಪತ್ತೆ ಹಚ್ಚುವ ಟೆಸ್ಟ್​ಗಳನ್ನು ಮಾಡಲಾಗಿದ್ದು ಒಂದು ದಿನದ ಅವಧಿಯಲ್ಲಿ ಇದುವರಗೆ ಮಾಡಿರುವ ಅತ್ಯಧಿಕ ಟೆಸ್ಟ್​ಗಳ ಸಂಖ್ಯೆ ಇದಾಗಿದೆ ಎಂದು ಹೇಳಿರುವ ಕೆಂದ್ರ ಆರೋಗ್ಯ ಸಚಿವಾಲಯವು, ಪಾಸಿಟಿವಿಟಿ ದರ ಶೇಕಡಾ 12.59 ಕ್ಕೆ ಕುಸಿದಿದೆ ಎಂದು ತಿಳಿಸಿದೆ. ಸಮಾಧಾನಕರ ಸಂಗತಿಯೆಂದರೆ, ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆಯು ಹೊಸ ಸೋಕಿಕೊನ ಪ್ರಕರಣಗಳಿಗಿಂತ ಜಾಸ್ತಿಯಾಗಿರುವುದು 8ನೇ ದಿನಕ್ಕೆ ಮುಂದುವರೆದಿದೆ. ಇಲಾಖೆಯು ನೀಡಿರುವ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ 3,57,295 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಬಾರತದಲ್ಲಿ ಇದುವರೆಗೆ 2,27,12,735 ಸೋಂಕಿತರು ಗುಣಹೊಂದಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನೆ ಕೌನ್ಸಿಲ್ (ಐಸಿಎಮ್​ಆರ್) ನೀಡಿರುವ ಮಾಹಿತಿಯ ಪ್ರಕಾರ ಮೇ 20ರವರಗೆ ಭಾರತದಲ್ಲಿ 32,44,17,870 ಜನರ ಟೆಸ್ಟಿಂಗ್ ನಡೆದಿದ್ದು ಗುರುವಾರದಂದು 20, 61,683 ಟೆಸ್ಟ್​ಗಳನ್ನು ಮಾಡಲಾಗಿದೆ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಸತತವಾಗಿ 5 ನೇ ದಿನ ತಾಜಾ ಸೋಂಕಿನ ಪ್ರಕರಣಗಳ ಸಂಖ್ಯೆ 3ಲಕ್ಷಕ್ಕಿಂತ ಕಮ್ಮಿ ವರದಿಯಾಗಿದೆ.

ತಮಿಳುನಾಡು, ಕೇರಳ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಷಾ, ರಾಜಸ್ತಾನ, ಉತ್ತರಪ್ರದೇಶ ಮತ್ತು ಅಸ್ಸಾಂ-ಈ ಹತ್ತು ರಾಜ್ಯಗಳಲ್ಲಿ ಕಳೆದ 24 ಗಂಟೆಗಳಲ್ಲಿ ವರದಿಯಾಗಿರುವ ಪ್ರಕರಣಗಳ ಪೈಕಿ ಶೇಕಡಾ 76.66 ರಷ್ಟು ವರದಿಯಾಗಿವೆ ಎಂದು ಇಲಾಖೆ ತಿಳಿಸಿದೆ. ತಮಿಳನಾಡಿನಲ್ಲಿ ಅತಿಹೆಚ್ಚು ಅಂದರೆ 35,579 ಪ್ರಕರಣಗಳು ಬೆಳಕಿಗೆ ಬಂದಿದ್ದು ಕೇರಳದಲ್ಲಿ 30,491 ಕೇಸುಗಳು ವರದಿಯಾಗಿವೆ.

ಏತನ್ಮಧ್ಯೆ, ಭಾರತದಲ್ಲಿ, ಒಟ್ಟು ಸಕ್ರಿಯ ಕೇಸ್​ಲೋಡ್ 30,27,925 ಕ್ಕೆ ಕುಸಿದಿದೆ. ಸಕ್ರಿಯ ಪ್ರಕರಣಗಳಲ್ಲಿ ತಮಿಳುನಾಡು, ಕೇರಳ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ತಾನ ಮತ್ತು ಉತ್ತರಪ್ರದೇಶ ರಾಜ್ಯಗಳ ಪಾಲು 69.47ನಷ್ಟಿದೆ.

ಹಾಗೆಯೇ, ದೇಶದಲ್ಲಿ ಇದುವರಗೆ ಲಸಿಕೆ ಪಡೆದವರ ಸಂಖ್ಯೆ 19 ಕೋಟಿಯನ್ನು ಮೀರಿ ಮುನ್ನಡೆದಿದೆ. 27,53,883 ಸೆಷನ್​ಗಳ ಮೂಲಕ 19,18,79,503 ಜನರಿಗೆ ಲಸಿಕೆಯನ್ನು ಶುಕ್ರವಾರ ಬೆಳಗ್ಗೆ 7 ಗಂಟೆಯವರಗೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಆರೋಗ್ಯ ಕಾರ್ಯಕರ್ತರ ಪೈಕಿ 97,24,339 ಮಂದಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ ಮತ್ತು 66,80,968 ಜನ ಎರಡನೇ ಡೋಸ್ ಪಡೆದಿದ್ದಾರೆ. ಹಾಗೆಯೇ, ಸೋಂಕಿನ ವಿರುದ್ಧ ವಿವಿಧ ಸ್ತರಗಳಲ್ಲಿ ಹೋರಾಡುತ್ತಿರುವ ಮುಂಚೂಣಿಯ ಕಾರ್ಯಕರ್ತರಲ್ಲಿ (ಫ್ರಂಟ್ ಲೈನ್ ವರ್ಕರ್ಸ್) 1,47,91,600 ಜನ ಪ್ರಥಮ ಡೋಸ್​ ಪಡೆದಿದ್ದಾರೆ 82,85,253 ಕಾರ್ಯಕರ್ತರು ಎರಡನೇ ಡೋಸ್ ಪಡೆದಿದ್ದಾರೆ. 18-44 ರ ವಯೋಮಾನದವರಲ್ಲಿ 86,04,498 ಲಸಿಕೆಯ ಮೊದಲ ಡೋಸ್ ಪಡೆದಿರುವ ಫಲಾನುಭವಿಗಳಾಗಿದ್ದಾರೆ.

ಇದಲ್ಲದೆ, 45ರಿಂದ 60 ವರ್ಷ ವಯಸ್ಸಿನವರಲ್ಲಿ 5,98,35,256 ಜನ ಪ್ರಥಮ ಡೋಸ್​ ಪಡೆದಿದ್ದರೆ ಅವರ ಪೈಕಿ 95,80,860 ಜನ ಎರಡನೇ ಡೋಸನ್ನೂ ಪಡೆದುಕೊಂಡಿದ್ದಾರೆ. 60ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ 5,62,45,627 ಹಿರಿಯರು ಮೊದಲ ಡೋಸ್ ಪಡೆದಿದ್ದರೆ 1,81,31,102 ಜನ ಎರಡನೇ ಡೋಸ್ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಇದನ್ನೂ ಓದಿ: COVID-19 Treatment: ಪ್ಲಾಸ್ಮಾ ಥೆರಪಿ ನಿಲ್ಲಿಸಿದ ನಂತರ ಇದೀಗ ರೆಮ್​ಡಿಸಿವಿರ್ ಔಟ್, ಇಲ್ಲಿವರೆಗೆ ಸರ್ಕಾರ ಕೈ ಬಿಟ್ಟಿರುವ ಔಷಧಿಗಳು ಯಾವುದು?

Published On - 12:41 am, Sat, 22 May 21