‘ಸೆಪ್ಟೆಂಬರ್​​ನಿಂದ ಮಕ್ಕಳಿಗೂ ಕೊವಿಡ್​ 19 ಲಸಿಕೆ ನೀಡಬಹುದು‘: ಐಸಿಎಂಆರ್​ -ಎನ್​​ಐವಿ ನಿರ್ದೇಶಕಿ

| Updated By: Lakshmi Hegde

Updated on: Aug 19, 2021 | 10:51 AM

ಕಳೆದ ತಿಂಗಳು ಏಮ್ಸ್​ ನಿರ್ದೇಶಕ ರಣದೀಪ್​ ಗುಲೇರಿಯಾ ಕೂಡ ಸೆಪ್ಟೆಂಬರ್​​ ಅಷ್ಟೊತ್ತಿಗೆ ಮಕ್ಕಳಿಗೂ ಲಸಿಕೆ ನೀಡಲಾಗುತ್ತದೆ. ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗ ಮಾಡಲಾಗುತ್ತಿದೆ ಎಂದೂ ಹೇಳಿದ್ದರು.

‘ಸೆಪ್ಟೆಂಬರ್​​ನಿಂದ ಮಕ್ಕಳಿಗೂ ಕೊವಿಡ್​ 19 ಲಸಿಕೆ ನೀಡಬಹುದು‘: ಐಸಿಎಂಆರ್​ -ಎನ್​​ಐವಿ ನಿರ್ದೇಶಕಿ
ಕೊವಿಡ್​ 19 ಲಸಿಕೆ ಸಾಂಕೇತಿಕ ಚಿತ್ರ
Follow us on

2-18ವರ್ಷದವರಿಗೆ ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್​ನಿಂದ ಲಸಿಕೆ ನೀಡಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR)ಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಪುಣೆ) ನಿರ್ದೇಶಕಿ ಪ್ರಿಯಾ ಅಬ್ರಾಹಂ ಹೇಳಿದ್ದಾರೆ. ಮಕ್ಕಳಿಗೆ ಕೊವಿಡ್​ 19 ಲಸಿಕೆ ನೀಡುವ ಸಂಬಂಧ ಸದ್ಯ 2 ಮತ್ತು 3ನೇ ಹಂತದ ಕ್ಲಿನಿಕಲ್​ ಪ್ರಯೋಗ ನಡೆಯುತ್ತಿದ್ದು, ಅದು ಸಂಪೂರ್ಣಗೊಂಡ ನಂತರ ಸೆಪ್ಟೆಂಬರ್​​ನಿಂದ ಮಕ್ಕಳಿಗೂ ಲಸಿಕೆ ನೀಡಲಾಗುವುದು ಎಂದು ಪ್ರಿಯಾ ತಿಳಿಸಿದ್ದಾರೆ.

ಈಗ ನಡೆಯುತ್ತಿರುವ ಕ್ಲಿನಿಕಲ್​ ಪ್ರಯೋಗಗಳ ಫಲಿತಾಂಶ ಶೀಘ್ರವೇ ಬರುತ್ತದೆ ಎಂಬ ಆಶಯವಿದೆ. ಆ ಫಲಿತಾಂಶವನ್ನು ರೆಗ್ಯೂಲೇಟರ್ಸ್​​​ಗಳಿಗೆ ನೀಡಲಾಗುವುದು. ಸೆಪ್ಟೆಂಬರ್​​ ಅಥವಾ ಸೆಪ್ಟೆಂಬರ್​​ ನಂತರ ಮಕ್ಕಳಿಗೆ ಖಂಡಿತವಾಗಿ ವ್ಯಾಕ್ಸಿನ್​ ಸಿಗುತ್ತದೆ. ಮಕ್ಕಳಿಗೆ ಕೊವ್ಯಾಕ್ಸಿನ್​ ಲಸಿಕೆ ನೀಡಲಾಗುತ್ತದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಕಳೆದ ತಿಂಗಳು ಏಮ್ಸ್​ ನಿರ್ದೇಶಕ ರಣದೀಪ್​ ಗುಲೇರಿಯಾ ಕೂಡ ಸೆಪ್ಟೆಂಬರ್​​ ಅಷ್ಟೊತ್ತಿಗೆ ಮಕ್ಕಳಿಗೂ ಲಸಿಕೆ ನೀಡಲಾಗುತ್ತದೆ. ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಸೆಪ್ಟೆಂಬರ್​ನಲ್ಲಿ ಫಲಿತಾಂಶ ಹೊರಬೀಳಲಿದೆ ಎಂದು ಹೇಳಿದ್ದರು. ಇನ್ನು ಕೇಂದ್ರ ಆರೋಗ್ಯ ಸಚಿವ ಮನ್​​ಸುಖ್​ ಮಾಂಡವಿಯಾ ಕೂಡ, ಮಕ್ಕಳಿಗೆ ಕೊವಿಡ್​ 19 ಲಸಿಕೆ ನೀಡುವ ಅಭಿಯಾನ ಶೀಘ್ರವೇ ಶುರುವಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸ್ಪೆಷೆಲ್​​ ಶೇಂಗಾ ಭಾಜಿ ಮಾಡುವ ವಿಧಾನ ಗೊತ್ತೇ? ಕೇವಲ 5 ನಿಮಿಷ ಸಾಕು ದಿಢೀರ್​ ತಿಂಡಿ ತಯಾರಿಸಲು

ಜಮ್ಮು-ಕಾಶ್ಮೀರದಲ್ಲಿ ಭೂಕಂಪ; ರಿಕ್ಟರ್​ ಮಾಪಕದಲ್ಲಿ 3.6ರಷ್ಟು ತೀವ್ರತೆ ದಾಖಲು

Published On - 10:48 am, Thu, 19 August 21