ಜಮ್ಮು-ಕಾಶ್ಮೀರದಲ್ಲಿ ಭೂಕಂಪ; ರಿಕ್ಟರ್​ ಮಾಪಕದಲ್ಲಿ 3.6ರಷ್ಟು ತೀವ್ರತೆ ದಾಖಲು

Earthquake: ಕೇರಳದ ತ್ರಿಶೂರ್​ ಜಿಲ್ಲೆಯ ಪೀಚಿ-ವಜನಿ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಬಧವಾರ ಸ್ವಲ್ಪ ಮಟ್ಟಿಗೆ ಭೂಕಂಪ ಸಂಭವಿಸಿದೆ. ಇದರ ತೀವ್ರತೆ ರಿಕ್ಟರ್​ ಮಾಪಕದಲ್ಲಿ 3.3ರಷ್ಟು ದಾಖಲಾಗಿದೆ. 

ಜಮ್ಮು-ಕಾಶ್ಮೀರದಲ್ಲಿ ಭೂಕಂಪ; ರಿಕ್ಟರ್​ ಮಾಪಕದಲ್ಲಿ 3.6ರಷ್ಟು ತೀವ್ರತೆ ದಾಖಲು
ಸಾಂಕೇತಿಕ ಚಿತ್ರ

ಜಮ್ಮು: ಇಂದು ಮುಂಜಾನೆ ಜಮ್ಮು-ಕಾಶ್ಮಿರ (Jammu-Kashmir)ದ ಕತ್ರಾದಲ್ಲಿ ಭೂಕಂಪ (Earthquake) ಉಂಟಾಗಿದ್ದು, ಸ್ಥಳೀಯರನ್ನು ದಿಗಿಲುಗೊಳಿಸಿತ್ತು. ಅದೃಷ್ಟವಶಾತ್​ ಭಾರಿ ಪ್ರಮಾಣದ ಭೂಕಂಪನ ಆಗಲಿಲ್ಲ. ರಿಕ್ಟರ್​ ಮಾಪಕದಲ್ಲಿ 3.6ರಷ್ಟು ತೀವ್ರತೆ ದಾಖಲಾಗಿದೆ ಎಂದು ಭೂಕಂಪನ ಶಾಸ್ತ್ರದ ರಾಷ್ಟ್ರೀಯ ಕೇಂದ್ರ (National Centre For Seismology -NCS) ಹೇಳಿದೆ. ಜಮ್ಮು-ಕಾಶ್ಮೀರದ ಆಗ್ನೇಯ ದಿಕ್ಕಿನಿಂದ 54 ಕಿಮೀ ದೂರದಲ್ಲಿ, ಭೂಮಿಯಿಂದ 5 ಕಿಮೀ ಆಳದಲ್ಲಿ ಭೂಮಿ ನಡುಗಿದೆ ಎಂದೂ ಹೇಳಲಾಗಿದೆ.  

ತ್ರಿಶೂರ್​​ನಲ್ಲಿಯೂ ಭೂಕಂಪ
ಇನ್ನು ಕೇರಳದ ತ್ರಿಶೂರ್​ ಜಿಲ್ಲೆಯ ಪೀಚಿ-ವಜನಿ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಬಧವಾರ ಸ್ವಲ್ಪ ಮಟ್ಟಿಗೆ ಭೂಕಂಪ ಸಂಭವಿಸಿದೆ. ಇದರ ತೀವ್ರತೆ ರಿಕ್ಟರ್​ ಮಾಪಕದಲ್ಲಿ 3.3ರಷ್ಟು ದಾಖಲಾಗಿದೆ.  ಭೂಮಿ ಕೆಲವು ಸೆಕೆಂಡ್​ಗಳ ಕಾಲ ನಡುಗಿದ್ದು, ಅನುಭವಕ್ಕೆ ಬಂತು. ಈ ವೇಳೆ ಶಬ್ದವಾಗಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಅನೇಕರು ಹೆದರಿ ಮನೆಯಿಂದ ಹೊರಕ್ಕೆ ಓಡಿದ್ದಾರೆ. ಪೀಚಿ, ಪಟ್ಟಿಕಾಡ್, ವನಿಯಂಪಾರಗಳಲ್ಲಿ ಭೂಮಿ ನಡುಗಿದೆ ಎನ್ನಲಾಗಿದೆ.

ಇದನ್ನೂ ಓದಿ: ​‘ಆ ಕಾಲದಲ್ಲೇ ಶಂಕರ್​ ನಾಗ್​ ಲ್ಯಾಪ್​ಟಾಪ್​ ಬಳಸುತ್ತಿದ್ರು’; ಅಚ್ಚರಿ ವಿಚಾರ ಹಂಚಿಕೊಂಡ ಬಿರಾದಾರ್​

ವರಮಹಾಲಕ್ಷ್ಮೀ ಹಬ್ಬಕ್ಕೆ ಖರೀದಿಗೆ ಮುಗಿಬಿದ್ದ ಜನ; ಕೆ.ಆರ್.ಪುರಂನಲ್ಲಿ 2 ಕಿಲೋಮೀಟರ್​ಗೂ ಹೆಚ್ಚು ದೂರ ಟ್ರಾಫಿಕ್ ಜಾಮ್

 

(3.6 magnitude earthquake hit in Jammu and Kashmir)

Click on your DTH Provider to Add TV9 Kannada