ಮಂತ್ರಾಲಯದಲ್ಲಿ ಗುರು ರಾಯರ 350ನೇ ಆರಾಧನೆ; ಆ.21ರಿಂದ 27ರ ವರೆಗೆ ಸಪ್ತ ರಾತ್ರೋತ್ಸವ
ಕೊವಿಡ್ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ರಾಯರ ದರ್ಶನಕ್ಕೆ ಬರುವ ಪ್ರತಿಯೊಬ್ಬರಿಗೂ ಮಾಸ್ಕ್ ನೀಡಲಾಗುವುದು. ಸ್ಯಾನಿಟೈಸರ್ ಮಾಡಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡ ಸ್ಥಾಪಿಸಲಾಗಿದೆ.
ರಾಯಚೂರು: ಮಂತ್ರಾಲಯದಲ್ಲಿ (Mantralayam) ಗುರು ರಾಯರ 350ನೇ ಆರಾಧನೆ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಭುದೇಂದ್ರ ತೀರ್ಥರು (Subhudendra Theertharu), ರಾಯರು ಬೃಂದಾವನ ಸೇರಿ 350 ವರ್ಷವಾಗಿದೆ. ಆಗಸ್ಟ್ 21, 22, 23, 24, 25, 26, 27ರ ವರೆಗೆ ಏಳು ದಿನ ಸಪ್ತ ರಾತ್ರೋತ್ಸವ (Saptha Rathotsava) ನಡೆಯಲಿದೆ ಎಂದು ತಿಳಿಸಿದರು. 22, 23, 24ರಂದು ರಾಯರ ಆರಾಧನೆ ಮಹೋತ್ಸವ ಹಿನ್ನೆಲೆ ವಿಶೇಷ ಪೂಜೆ ಮಹಾಭಿಷೇಕ ನಡೆಯಲಿದೆ. ಕೊರೊನಾ ಸಂಕಷ್ಟ ಗಮನದಲ್ಲಿಟುಕೊಂಡು ಅತ್ಯಂತ ಸರಳವಾಗಿ ಆರಾಧನ ಮಹೋತ್ಸವ ರೂಪಿಸಲಾಗಿದೆ ಎಂದು ಸುಭುದೇಂದ್ರ ತೀರ್ಥರು ಹೇಳಿದರು.
ಕೊವಿಡ್ (Coronavirus) ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ರಾಯರ ದರ್ಶನಕ್ಕೆ ಬರುವ ಪ್ರತಿಯೊಬ್ಬರಿಗೂ ಮಾಸ್ಕ್ ನೀಡಲಾಗುವುದು. ಸ್ಯಾನಿಟೈಸರ್ ಮಾಡಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡ ಸ್ಥಾಪಿಸಲಾಗಿದೆ. ನದಿ ತೀರದಲ್ಲಿ ವಸತಿ ನಿಲಯ, ಮಠದ ಆವರಣದಲ್ಲಿ ಸ್ಯಾನಿಟೈಜರ್ ಸಿಂಪಡಿಸಲಾಗುತ್ತಿದೆ. ನದಿ ತೀರದಲ್ಲಿ ಸ್ನಾನಘಟ್ಟಗಳನ್ನ ನಿರ್ಮಿಸಲಾಗಿದೆ. ಅರಾಧನೆಗೆ ಬರುವ ಭಕ್ತರಿಗೆ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸುಭುದೇಂದ್ರ ತೀರ್ಥರು ತಿಳಿಸಿದ್ದಾರೆ.
ವಯೋ ವೃದ್ಧರಿಗೆ ಶೀಘ್ರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಜೊತೆಗೆ ಅಂಬುಲೆನ್ಸ್ ಸೇರಿ ತುರ್ತು ಸೇವೆಯ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪರಿಮಳ ಪ್ರಸಾದದ ವ್ಯವಸ್ಥೆ ಸಹ ಮಾಡಲಾಗಿದೆ. ವಯೋ ವೃದ್ಧರಿಗೆ ಶೀಘ್ರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ತಿರುಮಲ ತಿರುಪತಿಯ ಎಲ್ಲಾ ಅಧಿಕಾರಿಗಳು ವಸ್ತ್ರವನ್ನ ತರುತ್ತಾರೆ. ಗುರು ರಾಯರಿಗೆ ತಿರುಪತಿ ವಸ್ತ್ರ ಸಮರ್ಪಿಸಲಾಗುತ್ತದೆ. ನಾಡಿನ ಮೂಲೆ ಮೂಲೆಯಿಂದಲೂ ಅಸಂಖ್ಯಾತ ಭಕ್ತರು ಶ್ರಿಮಠಕ್ಕೆ ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ಕೊವಿಡ್ ನಿಯಮಗಳನ್ನ ತಪ್ಪದೆ ಪಾಲಿಸುತ್ತ ಎಲ್ಲ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಪಂಡಿತರಿಂದ ಉಪನ್ಯಾಸ, ಸಾಂಸ್ಕೃತಿಕ ನೃತ್ಯ, ವೀಣೆ ನುಡಿಸುವ ಕಾರ್ಯಕ್ರಮ ಇರಲಿದೆ. ರಸ್ತೆ ಅಗಲೀಕರಣ ಮಾಡಲಾಗಿದೆ. ವಿದ್ಯುತ್ ದೀಪ ಹಾಕಲಾಗಿದೆ. ನವರತ್ನದ ಕವಚವನ್ನು ರಾಯರ ಮೂಲ ಬೃಂದಾವನಕ್ಕೆ ಅರ್ಪಿಸಲಾಗುತ್ತಿದೆ. ಬಂಗಾರದ ಆಭರಣಗಳನ್ನ ಮೂಲ ರಾಮ ದೇವರಿಗೆ ಸಮರ್ಪಣೆ ಮಾಡಲಾಗುತ್ತಿದೆ. ರಂಗ ಸಭಾಂಗಣದಲ್ಲಿ ಮ್ಯೂಸಿಯಂ ನಿರ್ಮಾಣ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸುಭುದೇಂದ್ರ ತೀರ್ಥರು ಹೇಳಿದ್ದಾರೆ.
ಇದನ್ನೂ ಓದಿ
ನೂರಾರು ವರ್ಷಗಳಿಂದ ಬಳಕೆಯಲ್ಲಿದ್ದ ‘ಗೋರಖ್ ಧಂಧಾ’ ಪದವನ್ನು ಹರಿಯಾಣ ಸಿಎಂ ಖಟ್ಟರ್ ಬ್ಯಾನ್ ಮಾಡಿದರು, ಯಾಕೆ?
(Subhudendra Theertharu said that Saptha Rathotsava will be held from August 21 to 27 at Mantralayam)
Published On - 12:30 pm, Thu, 19 August 21