ರಾಜ್ಯ-ದೇಶ-ವಿದೇಶದಲ್ಲಿ ಕೊರೊನಾ ವೈರಸ್ ಅಪ್ಡೇಟ್ಸ್ ಇಲ್ಲಿದೆ
ಬೆಂಗಳೂರು: ದೇಶವನ್ನೇ ಲಾಕ್ಡೌನ್ ಮಾಡಿ ಕೊರೊನಾ ವಿರುದ್ಧ ಯುದ್ಧ ಸಾರಿದ್ರೂ ಸೋಂಕಿತರ ಸಂಖ್ಯೆ ಮಾತ್ರ ಕಡಿಮೆ ಆಗ್ತಿಲ್ಲ. ಇಷ್ಟು ದಿನ ಕೊಂಚ ಮಟ್ಟಿಗೆ ಸುಧಾರಿಸಿಕೊಂಡಿದ್ದ ಸೋಂಕಿನ ಸುಳಿಗಾಳಿ ಇದೀಗ ಮತ್ತೆ ಹೆಚ್ಚಾಗ ತೊಡಗಿದೆ. ಇದ್ರ ಪರಿಣಾಮ ನಿನ್ನೆ ಒಂದೇ ದಿನದಲ್ಲಿ 1600 ಪಾಸಿಟಿವ್ ಕೇಸ್ಗಳು ಹುಟ್ಟಿಕೊಂಡಿವೆ. ಮತ್ತೊಂದೆಡೆ ಮಹಾರಾಷ್ಟ್ರ ಕೂಡ ಸೋಂಕಿತರ ಸಂಖ್ಯೆಯಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದೆ. ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಸದ್ಯಕ್ಕೆ ಕನಸೇ ಸರಿ. ದಿನೇ ದಿನೆ ಸೋಂಕಿತರ ಸಂಖ್ಯೆ ಡಬಲ್ ಆಗ್ತಿದ್ದು, ನಿನ್ನೆ […]
ಬೆಂಗಳೂರು: ದೇಶವನ್ನೇ ಲಾಕ್ಡೌನ್ ಮಾಡಿ ಕೊರೊನಾ ವಿರುದ್ಧ ಯುದ್ಧ ಸಾರಿದ್ರೂ ಸೋಂಕಿತರ ಸಂಖ್ಯೆ ಮಾತ್ರ ಕಡಿಮೆ ಆಗ್ತಿಲ್ಲ. ಇಷ್ಟು ದಿನ ಕೊಂಚ ಮಟ್ಟಿಗೆ ಸುಧಾರಿಸಿಕೊಂಡಿದ್ದ ಸೋಂಕಿನ ಸುಳಿಗಾಳಿ ಇದೀಗ ಮತ್ತೆ ಹೆಚ್ಚಾಗ ತೊಡಗಿದೆ. ಇದ್ರ ಪರಿಣಾಮ ನಿನ್ನೆ ಒಂದೇ ದಿನದಲ್ಲಿ 1600 ಪಾಸಿಟಿವ್ ಕೇಸ್ಗಳು ಹುಟ್ಟಿಕೊಂಡಿವೆ. ಮತ್ತೊಂದೆಡೆ ಮಹಾರಾಷ್ಟ್ರ ಕೂಡ ಸೋಂಕಿತರ ಸಂಖ್ಯೆಯಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದೆ.
ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಸದ್ಯಕ್ಕೆ ಕನಸೇ ಸರಿ. ದಿನೇ ದಿನೆ ಸೋಂಕಿತರ ಸಂಖ್ಯೆ ಡಬಲ್ ಆಗ್ತಿದ್ದು, ನಿನ್ನೆ ಒಂದೇ ದಿನ 29 ಮಂದಿಗೆ ಕೊರೊನಾ ವಕ್ಕರಿಸಿದೆ. ಜೊತೆಗೆ ಹೆಮ್ಮಾರಿ ವಿಷವ್ಯೂಹ ಎಲ್ಲರಿಗೂ ಭಯ ಹುಟ್ಟಿಸಿದೆ. ಇದುವರೆಗೂ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 474ಕ್ಕೆ ಏರಿಕೆಯಾಗಿದೆ. 474 ಸೋಂಕಿತರಲ್ಲಿ 152 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಕೊರೊನಾ ಸೋಂಕಿತ 474 ಜನರ ಪೈಕಿ 18 ಜನರು ಮೃತಪಟ್ಟಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ: ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ- 23,452 ಭಾರತದಲ್ಲಿ ಈವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ- 723 ದೇಶದಲ್ಲಿ ಕೊರೊನಾ ಸೋಂಕಿತ ಜನ ಗುಣಮುಖ- 4,814 ದೇಶದಲ್ಲಿ ಕೊರೊನಾ ಸೋಂಕಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು- 17,915
ಜಗತ್ತಿನಲ್ಲಿ ಕೊರೊನಾ ಸೋಂಕಿತರ ಅಪ್ಡೇಟ್ಸ್: ಸದ್ಯ ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ- 28,26,847 ಈವರೆಗೆ ವಿಶ್ವದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ- 1,96,981 ವಿಶ್ವದಲ್ಲಿ ನಿನ್ನೆ ಒಂದೇ ದಿನ ಮೃತಪಟ್ಟವರ ಸಂಖ್ಯೆ- 6,064 ವಿಶ್ವದಲ್ಲಿ ನಿನ್ನೆ ಒಂದೇ ದಿನ ಸೋಂಕು ತಗುಲಿದವರ ಸಂಖ್ಯೆ- 1,03,678 ವಿಶ್ವದಲ್ಲಿ ಕೊರೊನಾ ಸೋಂಕಿತ ಜನ ಗುಣಮುಖ- 7,81,256 ವಿಶ್ವದಲ್ಲಿ ಕೊರೊನಾ ಸೋಂಕಿನಿಂದ ಗಂಭೀರ ಸ್ಥಿತಿಯಲ್ಲಿರುವವರು- 58,384
ಅಮೆರಿಕ-9,23,612 ಜನರಿಗೆ ಸೋಂಕು, 52,092 ಜನ ಬಲಿ ಇಟಲಿ-1,92,994 ಜನರಿಗೆ ಸೋಂಕು, 25,969 ಜನ ಬಲಿ ಸ್ಪೇನ್-2,19,764 ಜನರಿಗೆ ಸೋಂಕು, 22,524 ಜನ ಬಲಿ ಫ್ರಾನ್ಸ್-1,59,828 ಜನರಿಗೆ ಸೋಂಕು, 22,245 ಜನ ಬಲಿ ಯುಕೆ-1,43,464 ಜನರಿಗೆ ಸೋಂಕು, 19,506 ಜನ ಬಲಿ
Published On - 6:41 am, Sat, 25 April 20