AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದಲ್ಲಿ ಕೊರೊನಾದಿಂದ ಈವರೆಗೆ ಎಷ್ಟು ಸಾವು, ಸೋಂಕಿತರ ಸಂಖ್ಯೆ ಎಷ್ಟು?

ದೆಹಲಿ: ಭಾರತದಲ್ಲಿ ಕೊರೊನಾ ಮಹಾಮಾರಿ ಸೋಂಕಿತರ ಸಂಖ್ಯೆ 23,077 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1,648 ಕೊರೊನಾ ಕೇಸ್ ಪತ್ತೆಯಾಗಿದೆ ಎಂದು ದೆಹಲಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದೆ. ದೇಶದಲ್ಲಿ ಕೊರೊನಾದಿಂದ ಈವರೆಗೆ 718 ಜನರ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸೋಂಕಿತರ ಪೈಕಿ ಶೇ.3.1ರಷ್ಟು ಜನರು ಸಾವು ಕಂಡಿದ್ದಾರೆ. ಸಮಾಧಾನಕರ ಸಂಗತಿಯೆಂದ್ರೆ, 14 ದಿನದಿಂದ 80 ಜಿಲ್ಲೆಗಳಲ್ಲಿ ಸೋಂಕು ಕಂಡುಬಂದಿಲ್ಲ. ದೇಶದಲ್ಲಿ ಈವರೆಗೆ 4,078 ಸೋಂಕಿತರು ಗುಣಮುಖರಾಗಿದ್ದಾರೆ. ಮುಖ್ಯವಾಗಿ ಲಾಕ್​ಡೌನ್​ನಿಂದ ವೈರಸ್​ ಹರಡುವಿಕೆ […]

ದೇಶದಲ್ಲಿ ಕೊರೊನಾದಿಂದ ಈವರೆಗೆ ಎಷ್ಟು ಸಾವು, ಸೋಂಕಿತರ ಸಂಖ್ಯೆ ಎಷ್ಟು?
ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್
ಸಾಧು ಶ್ರೀನಾಥ್​
|

Updated on: Apr 24, 2020 | 5:05 PM

Share

ದೆಹಲಿ: ಭಾರತದಲ್ಲಿ ಕೊರೊನಾ ಮಹಾಮಾರಿ ಸೋಂಕಿತರ ಸಂಖ್ಯೆ 23,077 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1,648 ಕೊರೊನಾ ಕೇಸ್ ಪತ್ತೆಯಾಗಿದೆ ಎಂದು ದೆಹಲಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದೆ.

ದೇಶದಲ್ಲಿ ಕೊರೊನಾದಿಂದ ಈವರೆಗೆ 718 ಜನರ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸೋಂಕಿತರ ಪೈಕಿ ಶೇ.3.1ರಷ್ಟು ಜನರು ಸಾವು ಕಂಡಿದ್ದಾರೆ. ಸಮಾಧಾನಕರ ಸಂಗತಿಯೆಂದ್ರೆ, 14 ದಿನದಿಂದ 80 ಜಿಲ್ಲೆಗಳಲ್ಲಿ ಸೋಂಕು ಕಂಡುಬಂದಿಲ್ಲ. ದೇಶದಲ್ಲಿ ಈವರೆಗೆ 4,078 ಸೋಂಕಿತರು ಗುಣಮುಖರಾಗಿದ್ದಾರೆ. ಮುಖ್ಯವಾಗಿ ಲಾಕ್​ಡೌನ್​ನಿಂದ ವೈರಸ್​ ಹರಡುವಿಕೆ ನಿಯಂತ್ರಣದಲ್ಲಿದೆ. ಲಾಕ್​ಡೌನ್​ನಿಂದಾಗಿ ಸಾವಿರಾರು ಜನರ ಜೀವ ಉಳಿದಿದೆ‌ ಎಂದು ಸಚಿವಾಲಯ ಸುದ್ದಿಗೋಷ್ಠಿ ತಿಳಿಸಿದೆ.